ಹುಬ್ಬಳ್ಳಿ: ದೇಶದ ಪ್ರತಿಷ್ಠಿತ ರೈಲ್ವೆ ವಲಯಗಳಲ್ಲಿ ಸದ್ಯ ನೈಋತ್ಯ ರೈಲ್ವೆ ವಲಯ ಆಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಅಷ್ಟೆ ಅಲ್ಲದೇ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯ ಒಂದಲ್ಲ ಒಂದು ರೀತಿಯಲ್ಲಿ ಜನಪರ ಕಾಳಜಿ ಹಾಗೂ ಸಾರ್ವಜನಿಕರಿಗೆ ಉತ್ಕೃಷ್ಟ ಮಟ್ಟದ ಸೇವೆಯನ್ನು ನೀಡುವ ಮೂಲಕ ಹೆಸರುವಾಸಿಯಾಗಿದೆ. ಈ ಎಲ್ಲಾ ಕಾರ್ಯಕ್ಕೆ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಗೆ ಮತ್ತೊಂದು ಗೌರವದ ಗರಿ ಬಂದಿರುವುದು ವಿಶೇಷವಾಗಿದೆ.
ಕೊರೊನಾ ಎಂಬ ಹೆಮ್ಮಾರಿಯ ಅಟ್ಟಹಾಸಕ್ಕೆ ರೈಲು ಸಂಚಾರ ಬಂದ್ ಆಗಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಶ್ರಮಿಕ್ ಎಕ್ಸ್ಪ್ರೆಸ್ ಮೂಲಕ ಕಾರ್ಮಿಕರನ್ನು ತವರೂರಿಗೆ ತಲುಪಿಸುವ ಹಾಗೂ ಸರಕು ಸಾಗಣೆ ಮೂಲಕ ದೇಶದ ವಿವಿಧ ಮೂಲೆಗಳಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಾರ್ಯದಕ್ಷತೆ ಮೆರೆದ ನೈಋತ್ಯ ರೈಲ್ವೆ ವಲಯಕ್ಕೆ ವಿಪತ್ತು ನಿರ್ವಹಣೆ ಹಾಗೂ ಉತ್ತಮ ನಿರ್ವಹಣಗೆ ಐಎಸ್ಒ ಮಾನ್ಯತೆ ಲಭಿಸಿದೆ.
ಐಎಸ್ಒ 9001:2015 ಮಾನ್ಯತೆ ಪಡೆದಿರುವುದರಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿಯೇ ಮೊದಲ ಸ್ಥಾನದಲ್ಲಿರುವುದು ವಿಶೇಷವಾಗಿದೆ. ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ ಸಿಂಗ್ ಹಾಗೂ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಯಿ. ವಿಜಯಾರವರ ನಿರ್ದೇಶನದಲ್ಲಿ, ನೈಋತ್ಯ ರೈಲ್ವೆ ವಿಭಾಗದ ಉತ್ತಮ ನಿರ್ವಹಣೆ ಹಾಗೂ ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯಿಂದಾಗಿಯೇ ಈ ಗೌರವವನ್ನು ತನ್ನ ಮುಡಿಗೇರಿಸಿಕೊಂಡಿದೆ.
ಏನಿದು ISO?
ಐಎಸ್ ಓ ಎಂದರೆ ಇಂಟರ್ ನ್ಯಾಷನಲ್ ಸ್ಟಾಂಡರ್ಡ್ ಆರ್ಗನೈಸೇಶನ್ ಎನ್ನುವ ಸಂಸ್ಥೆ ನೀಡುವ ಮಾನ್ಯತೆ ಪತ್ರವಿದು. ದೇಶದಲ್ಲಿ ಕಠಿಣ ಸಮಯದಲ್ಲೂ ಉತ್ಕೃಷ್ಟ ಹಾಗೂ ಉತ್ತಮ ಸೇವೆ ನೀಡುವ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಈ ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಸದ್ಯ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯ ಲಾಕ್ಡೌನ್ಸಮಯದಲ್ಲೂ ತನ್ನ ಸಿಬ್ಬಂದಿಗಳ ಸಹಾಯದಿಂದ ಉತ್ತಮ ಸೇವೆ ನೀಡಿತ್ತು.
ದೇಶದ ನಾನಾ ಭಾಗಗಳಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು ಹಾಗೂ ಇತರೆ ಜನರನ್ನು ಕರೆತಂದಿತ್ತು. ಅಲ್ಲದೇ ದೇಶದಲ್ಲೆ ಮೊದಲ ಭಾರಿಗೆ ತನ್ನ ರೈಲು ಬೋಗಿಗಳನ್ನು ಐಸೋಲೇಷನ್ ವಾಡ್೯ಗಳಾಗಿ ಮಾರ್ಪಾಡು ಮಾಡಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು 301 ಬೋಗಿಗಳನ್ನು ನೀಡಿತ್ತು. ಇಂತಹ ಸೇವೆಯನ್ನು ಪರಿಗಣಿಸಿದ್ದರಿಂದ ಐಎಸ್ಓ ಸರ್ಟಿಫಿಕೇಟ್ನನ್ನು ನೈಋತ್ಯ ರೈಲ್ವೆ ವಲಯ ಪಡೆದುಕೊಂಡಿದೆ.
ಸದ್ಯದಲ್ಲೇ ಹುಬ್ಬಳ್ಳಿಯಲ್ಲಿ.. ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್ ಫಾರ್ಮ್!