ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

|

Updated on: Sep 21, 2023 | 10:29 AM

Hyderabad-Bengaluru Vande Bharat Express: ಕರ್ನಾಟಕದಲ್ಲಿ 3ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಓಡಾಡುವುದಕ್ಕೆ ಸಿದ್ಧವಾಗಿದೆ. ಇದೇ ಸೆಪ್ಟೆಂಬರ್ 24ರಂದು ಹೈದರಾಬಾದ್‌ನ ಕಾಚಿಗುಡ – ಯಶವಂತಪುರ ನಿಲ್ದಾಣದ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಹೀಗಾಗಿ ಇಂದು ಈ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ.

ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ
ವಂದೇ ಭಾರತ್ ರೈಲು
Follow us on

ಬೆಂಗಳೂರು, (ಸೆಪ್ಟೆಂಬರ್. 21): ಎರಡು ಟೆಕ್ ಹಬ್‌ಗಳಾದ ಬೆಂಗಳೂರು (Bengaluru) ಮತ್ತು ಹೈದರಾಬಾದ್‌ಗಳನ್ನು (Hyderabad) ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express) ಸಂಚಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬೆಂಗಳೂರಿನ ಯಶವಂತಪುರದಿಂದ ಹೈದರಾಬಾದ್‌ನ ಕಾಚಿಗುಡ ವರೆಗೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇದೇ ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಹೀಗಾಗಿ ಇಂದು ಈ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ. ಹಾಗಾದ್ರೆ, ಈ ರೈಲು ಎಲ್ಲೆಲ್ಲಿ ನಿಲುಗಡೆಯಾಗಲಿದೆ? ಎನ್ನುವ ವೇಳಾಪಟ್ಟಿ ಈ ಕೆಳಗಿನಂತಿದೆ ನೋಡಿ.

ಇಂದು ಪ್ರಾಯೋಗಿಕ ಸಂಚಾರ

ಹೈದರಾಬಾದ್‌ನ ಕಾಚಿಗುಡ – ಯಶವಂತಪುರ ನಿಲ್ದಾಣದ ನಡುವೆ ಸಂಚರಿಸುವ ರೈಲು ದಕ್ಷಿಣ ಭಾರತದ ಎರಡು ಐಟಿ ನಗರಗಳ ನಡುವಿನ ಮೊದಲ ವಂದೇ ಭಾರತ್ ರೈಲು ಆಗಿದೆ. ಇಂದು ಪ್ರಯೋಗಿಕ ಸಂಚಾರ ನಡೆಯಲಿದ್ದು, ಇಂದು ರೈಲು ಕಾಚಿಗುಡದಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 2:45 ಕ್ಕೆ ಯಶವಂತಪುರದಿಂದ ಕಾಚಿಗುಡ ತೆರಳಲಿದೆ. ರೈಲು ಸುಮಾರು 610 ಕಿ.ಮೀ ಅಂತರವನ್ನು 7 ಗಂಟೆಯಲ್ಲಿ ಕ್ರಮಿಸಬಹುದು ಎಂದು ಬೆಂಗಳೂರು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Vande Sadharan: ಪ್ರಯಾಣಿಕರಿಗೆ ಸಿಹಿ ಸುದ್ದಿ! ಬರಲಿವೆ ವಂದೇ ಸಾಧಾರಣ್​ ರೈಲುಗಳು: ಅಕ್ಟೋಬರ್​ನಲ್ಲಿ ಸ್ಲೀಪರ್​​ ಆವೃತ್ತಿ ಪ್ರಾರಂಭ

ಎಲ್ಲೆಲ್ಲಿ ನಿಲುಗಡೆ? ಮತ್ತು ಸಮಯ

ಸೆಪ್ಟೆಂಬರ್ 24ರಿಂದ ಓಡಾಟ ಶುರು ಮಾಡಲಿರುವ ಈ ರೈಲು, ಯಶವಂತಪುರ, ಧರ್ಮಾವರಂ, ಧೋನೆ, ಕರ್ನೂಲ್ ಸಿಟಿ, ಗದ್ವಾಲ್ ಜಂಕ್ಷನ್, ಮಹೆಬೂಬ್‌ನಗರ, ಶಾದ್‌ನಗರ ಮತ್ತು ಕಾಚಿಗುಡ ಮೂಲಕ ರೈಲು ಸಂಚರಿಸಲಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ವೇಳಾಪಟ್ಟಿ ಬರಬೇಕಿದೆ. ಈಗಿನ ಮಾಹಿತಿ ಪ್ರಕಾರ ಯಶವಂತಪುರ-2.45 (ಮಧ್ಯಾಹ್ನ), ಧರ್ಮಾವರಂ ಸ್ಟೇಷನ್- ಸಂಜೆ 5.20, ಅನಂತಪುರ-ಸಂಜೆ 5.41, ಕರ್ನೂಲ್- ಸಂಜೆ 7.51, ಮೆಹಬೂಬ್​ ನಗರ-ರಾತ್ರಿ 9.40, ಕಾಚಿಗುಡ ರೈಲ್ವೆ ನಿಲ್ದಾಣಕ್ಕೆ ರಾತ್ರಿ 11.45ಕ್ಕೆ ತಲುಪಲಿದೆ.

ಸೆ.25ರಿಂದ ಬೆಂಗಳೂರಿನಿಂದ ಸಂಚಾರ ಆರಂಭ

ಬೆಂಗಳೂರಿನ ಯಶವಂತಪುರ- ಹೈದರಾಬಾದ್​ ಪ್ರಯಾಣಿಸುವ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಸೆ.24ಕ್ಕೆ ಚಾಲನೆ ನೀಡಲಾಗುತ್ತಿದ್ದು, ಸೆ 25ರಿಂದ ಈ ರೈಲು ಮೊದಲ ಪಯಣ ಶುರು ಮಾಡಲಿದೆ. ಅಂದು ಮಧ್ಯಾಹ್ನ 2.45ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಾಚಿಗುಡಗೆ ತೆರಳಲಿದೆ. ಯಶವಂತಪುರದಿಂದ ಕಾಚಿಗುಡ ನಡುವಿನ 610 ಕಿ.ಮೀ ದೂರವಿದ್ದು, ಏಳು ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಇನ್ನು ಉಳಿದ ಎಕ್ಸ್​ಪ್ರೆಸ್​ ರೈಲುಗಳಿಗಿಂತ ಈ ರೈಲು ಎರಡು ಮಹಾನಗರಗಳ ನಡುವೆ ರೈಲು ಪ್ರಯಾಣದ ಸಮಯವನ್ನು ಎರಡು ಗಂಟೆಗಳಷ್ಟು ಕಡಿಮೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ