‘ಸರ್ಕಾರಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಬಂದಿದ್ದೇನೆ.. ನನಗೆ ಜೀವ ಮುಖ್ಯ’ ಎಂದು ಅಲವತ್ತುಕೊಂಡ ಖಾಸಗಿ ಚಾಲಕ

ಬೆಂಗಳೂರಿನ ಸೆಟಲೈಟ್​ ಬಸ್ ನಿಲ್ದಾಣದಿಂದ ಮೈಸೂರಿಗೆ ಹೊರಟ ಕೆಎಸ್​ಆರ್​ಟಿಸಿ ಬಸ್​ ಹತ್ತಲು ಮುಂದಾದ ಪ್ರಯಾಣಿಕರ ಬಳಿ, ಚಾಲಕ ಅಲವತ್ತುಕೊಂಡಿದ್ದಾರೆ.

‘ಸರ್ಕಾರಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಬಂದಿದ್ದೇನೆ.. ನನಗೆ ಜೀವ ಮುಖ್ಯ’ ಎಂದು ಅಲವತ್ತುಕೊಂಡ ಖಾಸಗಿ ಚಾಲಕ
ಸಾಂದರ್ಭಿಕ ಚಿತ್ರ
Updated By: ಸಾಧು ಶ್ರೀನಾಥ್​

Updated on: Dec 12, 2020 | 11:27 AM

ಬೆಂಗಳೂರು: ಮುಷ್ಕರದಲ್ಲಿ ನಿರತರಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಖಾಸಗಿ ಚಾಲಕರನ್ನು ಕರೆಸಿ, ಬಸ್​ಗಳನ್ನು ಓಡಿಸುವ ಪ್ರಯತ್ನದಲ್ಲಿ ತೊಡಗಿದೆ. ಹೀಗೆ ಸರ್ಕಾರಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಬಂದ ಚಾಲಕ..ಪ್ರಯಾಣಿಕರ ಬಳಿ ‘ಬಸ್ ಹತ್ತುವುದಕ್ಕೂ ಮೊದಲು ಯೋಚಿಸಿ’ ಎಂದು ಹೇಳುತ್ತಿದ್ದಾರೆ..!

ಸರ್ಕಾರಿ ನೌಕರರು ಪಟ್ಟು ಹಿಡಿದ ಬೆನ್ನಲ್ಲೇ, ಖಾಸಗಿ ಚಾಲಕರ ಮೇಲೆ ಒತ್ತಡ ಹಾಕಿ ಕರೆಸಿ ಬಸ್​ ಸಂಚಾರ ಶುರು ಮಾಡಲಾಗಿದೆ. ಬೆಂಗಳೂರಿನ ಸೆಟಲೈಟ್​ ಬಸ್ ನಿಲ್ದಾಣದಿಂದ ಮೈಸೂರಿಗೆ ಹೊರಟ ಕೆಎಸ್​ಆರ್​ಟಿಸಿ ಬಸ್​ ಹತ್ತಲು ಮುಂದಾದ ಪ್ರಯಾಣಿಕರ ಬಳಿ, ಚಾಲಕ ಅಲವತ್ತುಕೊಂಡಿದ್ದಾರೆ.

ನನಗೆ ಜೀವವೇ ಮುಖ್ಯ
ನೀವೆಲ್ಲ ಬಸ್ ಹತ್ತುವ ಮೊದಲು ಯೋಚನೆ ಮಾಡಿ. ಮಧ್ಯದಲ್ಲಿ ಯಾರೇ ಬಸ್​ ತಡೆದರೂ ನಿಲ್ಲಿಸಿಬಿಡುತ್ತೇನೆ..ನನಗೆ ಜೀವವೇ ಮುಖ್ಯ ಎಂದು ಚಾಲಕ ಪ್ರಯಾಣಿಕರಿಗೆ ಹೇಳಿದ್ದಾರೆ. ನನಗೆ ಜೀವಕ್ಕಿಂತ ಕೆಲಸ ದೊಡ್ಡದಲ್ಲ. ಅಧಿಕಾರಿಗಳ ಒತ್ತಡಕ್ಕೆ ಮಣಿದು ಕರ್ತವ್ಯಕ್ಕೆ ಬಂದಿದ್ದೇನೆ. ನಾನಿನ್ನೂ ಸ್ನಾನಗೃಹದಲ್ಲಿದ್ದೆ. ಬಸ್ ಓಡಿಸಲು ಒಂದೇ ಸಮ ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ಬಂದಿದ್ದೇನೆ ಎಂದಿದ್ದಾರೆ.

ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರದ ಮಾಸ್ಟರ್ ​ಪ್ಲ್ಯಾನ್: ರೆಡಿಯಾಯ್ತು 2 ತಂತ್ರ