ಬಾಗಲಕೋಟೆ: ಗಡಿಯಲ್ಲಿ ನಿಂತು ಯುದ್ಧ ಮಾಡೋಕೂ ಸೈ. ಹುಟ್ಟೂರನ್ನ ಸ್ವಚ್ಛಗೊಳಿಸೋದಕ್ಕೂ ಜೈ. ದೇಶ ರಕ್ಷಣೆಗೂ ಅಣಿ. ಜನ್ಮಕೊಟ್ಟ ಗ್ರಾಮಕ್ಕೂ ಋಣಿ ಅನ್ನೋ ಹಾಗೆ ಗನ್ ಹಿಡಿಯೋ ಕೈಯಲ್ಲಿ ಪೊರಕೆ ಹಿಡಿದು ದೇಶ ಕಾಯೋ ಯೋಧರು ಕ್ಲೀನ್ ಮಾಡ್ತಿದ್ದಾರೆ.
ಪೊರಕೆ ಹಿಡಿದು ಕಸ ಗುಡಿಸುವ ಯೋಧರು:
ಗ್ರಾಮದಲ್ಲಿನ ಮಾರುತೇಶ್ವರ ದೇವರೆಂದರೆ ಗ್ರಾಮಸ್ಥರು ಹಾಗೂ ಯೋಧರಿಗೆ ಎಲ್ಲಿಲ್ಲದ ಭಕ್ತಿ. ದೇವರ ಕೃಪೆಯಿಂದಲೇ ತಾವೆಲ್ಲ ಸೈನ್ಯಕ್ಕೆ ಸೇರಿದ್ದೇವೆ ಅನ್ನೋ ನಂಬಿಕೆ ಯೋಧರದ್ದು. ಸದ್ಯದಲ್ಲೇ ಮಾರುತೇಶ್ವರನ ಜಾತ್ರೆ ಕೂಡ ನಡೆಯಲಿದೆ. ಜಾತ್ರೆಗೂ ಮುನ್ನ ರಜೆ ಪಡೆದು ಬರೋ ಯೋಧರು ಗ್ರಾಮವನ್ನ ಸ್ವಚ್ಛಗೊಳಿಸ್ತಾರೆ.
ಯೋಧರ ಕಾರ್ಯಕ್ಕೆ ಸಲಾಂ:
ಪಂಚಾಯ್ತಿಯಿಂದ ಹೇಳಿಕೊಳ್ಳುವಂತಹ ಕೆಲಸ ನಡೆಯದ ಕಾರಣ ತಮ್ಮದೇ ಸಂಘ ಕಟ್ಟಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ತಾರೆ. ದೇಶ ಕಾಯೋ ಯೋಧರ ಈ ಕೆಲಸಕ್ಕೆ ಗ್ರಾಮಸ್ಥರು ಸಲಾಂ ಅಂತಿದ್ದಾರೆ. ಒಟ್ನಲ್ಲಿ, ಗಡಿಯಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡೋ ವೀರ ಯೋಧರು ಕೈಯಲ್ಲಿ ಪೊರಕೆ ಹಿಡಿದು ಊರಿನ ಸ್ವಚ್ಛತೆಗೆ ಮುಂದಾಗಿರೋದು ನಿಜಕ್ಕೂ ಶ್ಲಾಘನೀಯ.
Published On - 3:57 pm, Sun, 15 December 19