ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅನ್ಯಾಯ ಆರೋಪ, ಪೊಲೀಸ್ ಠಾಣೆಗೆ ದೂರು
ಮಂಗಳೂರು: ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕರಾಟೆ ಪಟು ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮಗೆ ಬೇಕಾದವರನ್ನು ಸೆಲೆಕ್ಟ್ ಮಾಡಲು ಕೋಚ್ಗಳು ತಾರತಮ್ಯ ಮಾಡುತ್ತಿದ್ದಾರೆಂದು ಮೂಡಬಿದ್ರೆ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ರಾಷ್ಟ್ರಮಟ್ಟಕ್ಕೆ ಕರಾಟೆಪಟುಗಳನ್ನು ಆಯ್ಕೆ ಮಾಡಲು ಸ್ವರಾಜ್ ಮೈದಾನದಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ನಡೆಯುತ್ತಿದೆ. ಈ ಪಂದ್ಯಾವಳಿಗಳನ್ನು ಕರ್ನಾಟಕ ಕರಾಟೆ ಡೋ ಅಸೋಸಿಯೇಶನ್ ನಡೆಸುತ್ತಿದೆ. ಕೋಚ್ ಅಬ್ಜಕ್ಷನ್ ಮಾಡಿದ ನಂತರ ಜಡ್ಜಸ್ ಪಾಯಿಂಟ್ ಕೂಟ್ಟಿದ್ದಾರೆ. ತಮಗೆ ಬೇಕಾದವರನ್ನು ಆಯ್ಕೆಮಾಡುವ ಉದ್ದೇಶದಿಂದ ದುರ್ನಡತೆ […]
Follow us on
ಮಂಗಳೂರು: ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕರಾಟೆ ಪಟು ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮಗೆ ಬೇಕಾದವರನ್ನು ಸೆಲೆಕ್ಟ್ ಮಾಡಲು ಕೋಚ್ಗಳು ತಾರತಮ್ಯ ಮಾಡುತ್ತಿದ್ದಾರೆಂದು ಮೂಡಬಿದ್ರೆ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ರಾಷ್ಟ್ರಮಟ್ಟಕ್ಕೆ ಕರಾಟೆಪಟುಗಳನ್ನು ಆಯ್ಕೆ ಮಾಡಲು ಸ್ವರಾಜ್ ಮೈದಾನದಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ನಡೆಯುತ್ತಿದೆ. ಈ ಪಂದ್ಯಾವಳಿಗಳನ್ನು ಕರ್ನಾಟಕ ಕರಾಟೆ ಡೋ ಅಸೋಸಿಯೇಶನ್ ನಡೆಸುತ್ತಿದೆ. ಕೋಚ್ ಅಬ್ಜಕ್ಷನ್ ಮಾಡಿದ ನಂತರ ಜಡ್ಜಸ್ ಪಾಯಿಂಟ್ ಕೂಟ್ಟಿದ್ದಾರೆ. ತಮಗೆ ಬೇಕಾದವರನ್ನು ಆಯ್ಕೆಮಾಡುವ ಉದ್ದೇಶದಿಂದ ದುರ್ನಡತೆ ಅಂತೇಳಿ ತಮ್ಮ ಮಗನನ್ನು ಅನರ್ಹಗೊಳಿಸಿದ್ದಾರೆ ಎಂದು ಮೈಸೂರು ಮೂಲದ ಸೌಭಾಗ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಸೌಭಾಗ್ಯ ಆರೋಪವನ್ನು ಕರ್ನಾಟಕ ಕರಾಟೆ ಡೋ ಅಸೋಸಿಯೇಷನ್ ಅಧ್ಯಕ್ಷ ನಿತ್ಯಾನಂದ ನಿರಾಕರಿಸಿದ್ದಾರೆ. ಕೋಚ್‌ಗೆ ಬೈದಿದ್ರಿಂದ ಅವರ ಮಗನನ್ನು ಅನರ್ಹಗೊಳಿಸಿದ್ದಾಗಿ ನಿತ್ಯಾನಂದ ಸಮರ್ಥನೆ ನೀಡಿದ್ದಾರೆ.