ಆ್ಯಂಬುಲೆನ್ಸ್ ಸಿಗದೆ ಬೈಕ್​ನಲ್ಲೇ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಬಂದ ಸೋಂಕಿತ; ಮನೆಗೆ ವಾಪಸ್ ಕಳುಹಿಸಿದ ವೈದ್ಯರು

ಆಸ್ಪತ್ರೆಗೆ ಆಗಿಮಿಸಿರುವ 40 ವರ್ಷದ ಸೋಂಕಿತನ್ನು ದಾಖಲಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆಯ ವೈದ್ಯರು ಮೀನಾಮೇಷ ಎಣಿಸಿ ಕೊನೆಗೆ ಮನೆಗೆ ಕಳುಹಿಸಿದ್ದಾರೆ. ದಾಖಲಾಗಲು ಆಸ್ಪತ್ರೆ ಮುಂಭಾಗವೇ ವ್ಯಕ್ತಿ ಕಾಯುತ್ತಿದ್ದರು. ಪಾಸಿಟಿವ್ ಮೆಸೆಜ್ ಇದ್ದರೂ ದಾಖಲಿಸಿಕೊಳ್ಳಲು ವೈದ್ಯರು ಹಿಂದೇಟು ಹಾಕಿದ್ದಾರೆ.

ಆ್ಯಂಬುಲೆನ್ಸ್ ಸಿಗದೆ ಬೈಕ್​ನಲ್ಲೇ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಬಂದ ಸೋಂಕಿತ; ಮನೆಗೆ ವಾಪಸ್ ಕಳುಹಿಸಿದ ವೈದ್ಯರು
ಪ್ರಾತಿನಿಧಿಕ ಚಿತ್ರ

Updated on: May 05, 2021 | 1:42 PM

ಚಾಮರಾಜನಗರ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಒಂದಲ್ಲ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಇಲ್ಲದೆ ಸೋಂಕಿತರು ಪರದಾಟ ಪಡುತ್ತಿದ್ದಾರೆ. ಹೀಗೆ ಆ್ಯಂಬುಲೆನ್ಸ್ ಇಲ್ಲದೆ ಪರದಾಟ ಪಡುತ್ತಿದ್ದ ಸೋಂಕಿತ ವ್ಯಕ್ತಿಯೊಬ್ಬರು ಜಿಲ್ಲಾಸ್ಪತ್ರೆಗೆ ಸ್ವಂತ ಬೈಕ್​ನಲ್ಲೇ ಆಗಮಿಸಿದ್ದಾರೆ. ಚಾಮರಾಜನಗರ ತಾಲೂಕಿನ ಉಡಿಗಾಲದ ನಿವಾಸಿ ಆ್ಯಂಬುಲೆನ್ಸ್ ಸಿಗದ ಕಾರಣ ಆಸ್ಪತ್ರೆಗೆ ಬೈಕ್​ನಲ್ಲಿ ಬಂದಿದ್ದಾರೆ.

ಆಸ್ಪತ್ರೆಗೆ ಆಗಿಮಿಸಿರುವ 40 ವರ್ಷದ ಸೋಂಕಿತನ್ನು ದಾಖಲಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆಯ ವೈದ್ಯರು ಮೀನಾಮೇಷ ಎಣಿಸಿ ಕೊನೆಗೆ ಮನೆಗೆ ಕಳುಹಿಸಿದ್ದಾರೆ. ದಾಖಲಾಗಲು ಆಸ್ಪತ್ರೆ ಮುಂಭಾಗವೇ ವ್ಯಕ್ತಿ ಕಾಯುತ್ತಿದ್ದರು. ಪಾಸಿಟಿವ್ ಮೆಸೆಜ್ ಇದ್ದರೂ ದಾಖಲಿಸಿಕೊಳ್ಳಲು ವೈದ್ಯರು ಹಿಂದೇಟು ಹಾಕಿದ್ದಾರೆ.

ನಮ್ಮ ಮನೆ ಚಿಕ್ಕದು, ಅದರಲ್ಲಿ ಹೆಂಡತಿ, ಮಕ್ಕಳು ಇದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಸೋಂಕಿತ ವ್ಯಕ್ತಿ ಮನವಿ ಮಾಡಿಕೊಂಡಿದ್ದರು. ಮನವಿ ಮಾಡಿಕೊಂಡರೂ ಕೇಳದೆ ವೈದ್ಯರು ವಾಪಸ್ ಕಳುಹಿಸಿದ್ದಾರೆ. ವಿಧಿಯಿಲ್ಲದ ಸೋಂಕಿತ ವ್ಯಕ್ತಿ ಮನೆಯತ್ತ ತೆರಳಿದ್ದಾರೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಅಂತ್ಯಕ್ರಿಯೆಗೆ ಹಣ ನೀಡುವ ವಿಚಾರಕ್ಕೆ ಮಾರಣಾಂತಿಕ ಹಲ್ಲೆ

ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ; ಆರೋಪ ಸರಿಯಲ್ಲ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಣ್ಣೀರು

(infected man arrived in Chamarajanagar hospital on his own bike without an ambulance)