ಮೈಸೂರು: ರಾಜ್ಯದಲ್ಲಿ ಅ.21ರಂದು ನಡೆಯುವ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ನನ್ನದು ಅತ್ಯಂತ ಕೆಟ್ಟ ಸರ್ಕಾರ:
ನಾನು ನೇರವಾಗಿ ಹೇಳ್ತಿದ್ದೇನೆ ನನ್ನದು ಅತ್ಯಂತ ಕೆಟ್ಟ ಸರ್ಕಾರ, ಮೈತ್ರಿ ಸರ್ಕಾರದಲ್ಲಿ ನನಗೆ ಯಾವುದೇ ಬೆಂಬಲ ಇರಲಿಲ್ಲ. ಇದರ ನಡುವೆಯೂ ನಾನು ರೈತರ ಪರ ಕೆಲಸ ಮಾಡಿದ್ದೇನೆ, ನಾನು ಯಾವುದೇ ಮೋಸ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಲ್ಲ, ಹೀಗಾಗಿ ಮೈಸೂರು ಭಾಗದ ನಾಯಕರೇ ಸಾಲಮನ್ನಾ ಹೇಳಿಕೆ ನೀಡಿದ್ರು. ಆದ್ರೆ ನಾನು ರೈತರ ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ನಾನು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ ಮೊದಲ ದಿನವೇ ನನ್ನಿಂದ ಕಾರ್ಯಕರ್ತರು ದೂರ ಆಗ್ತಾರೆಂದು ಗೊತ್ತಿತ್ತು. ಆದ್ರೂ ರೈತರ ಕಾರಣದಿಂದ ಕಾಂಗ್ರೆಸ್ ಜೊತೆ ಸರ್ಕಾರವನ್ನು ಮುಂದುವರಿಸಿದೆ ಎಂದರು.
ಕಾಂಗ್ರೆಸ್-ಜೆಡಿಎಸ್ನ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನದಿಂದ ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದರು. ಈಗ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ನಿಗದಿಯಾಗಿದೆ.
Published On - 1:32 pm, Sat, 21 September 19