ಕಲಬುರಗಿಯಲ್ಲಿ ನಾಡ ಪಿಸ್ತೂಲ್ ಮಾರಾಟ; ಐವರು ಬಂಧನ

| Updated By: Praveen Sahu

Updated on: Mar 26, 2021 | 5:04 PM

ನಗರದ ಸಿಸಿಬಿ ಪೊಲೀಸರು ಮತ್ತು ಮಹಾತ್ಮಾ ಬಸವೇಶ್ವರ ಠಾಣೆಯ ಪೊಲೀಸರು ಸ್ವಲ್ಪ ಮೈಮರೆತಿದ್ದರು ಪಿಸ್ತೂಲ್​ಗಳಿಂದ ಯಾರ ಜೀವ ಬೇಕಾದರು ಹೋಗುವ ಸಾಧ್ಯತೆಯಿತ್ತು. ಯಾಕೆಂದರೆ ಇವುಗಳನ್ನು ಸಾಗಾಟ ಮಾಡುತ್ತಿದ್ದವರು ಮತ್ತು ತೆಗೆದುಕೊಂಡು ಹೋಗುತ್ತಿದ್ದವರು ಈ ಹಿಂದೆ ಅನೇಕ ಕೊಲೆ ಮಾಡಿದ ಆರೋಪಗಳನ್ನು ಹೊತ್ತಿದವರು.

ಕಲಬುರಗಿಯಲ್ಲಿ ನಾಡ ಪಿಸ್ತೂಲ್ ಮಾರಾಟ; ಐವರು ಬಂಧನ
ಬಂಧಿತ ಆರೋಪಿಗಳು
Follow us on

ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ನಾಡ ಪಿಸ್ತೂಲುಗಳು ಆಟಿಕೆ ಸಾಮಾನಿನಂತಾಗಿವೆ. ಕೇವಲ ಮೂವತ್ತರಿಂದ ನಲವತ್ತು ಸಾವಿರ ರೂಪಾಯಿ ಕೊಟ್ಟರೆ ನಾಡ ಪಿಸ್ತೂಲುಗಳು ಅನೇಕರ ಕೈ ಸೇರುತ್ತಿವೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಗಳೇ ನಾಡ ಪಿಸ್ತೂಲ್ಗಳನ್ನು ಮಾರಾಟ ಮಾಡುವುದು ಮತ್ತು ಖರೀದಿ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಇಂತಹದೊಂದು ಗುಂಪನ್ನು ಕಲಬುರಗಿ ಸಿಸಿಬಿ ಪೊಲೀಸರು ಮತ್ತು ಮಹಾತ್ಮ ಬಸವೇಶ್ವರ ಠಾಣೆಯ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಸಿಸಿಬಿ ಪೊಲೀಸರು ಮತ್ತು ಮಹಾತ್ಮಾ ಬಸವೇಶ್ವರ ಠಾಣೆಯ ಪೊಲೀಸರು ಸ್ವಲ್ಪ ಮೈಮರೆತಿದ್ದರು ಪಿಸ್ತೂಲ್​ಗಳಿಂದ ಯಾರ ಜೀವ ಬೇಕಾದರು ಹೋಗುವ ಸಾಧ್ಯತೆಯಿತ್ತು. ಯಾಕೆಂದರೆ ಇವುಗಳನ್ನು ಸಾಗಾಟ ಮಾಡುತ್ತಿದ್ದವರು ಮತ್ತು ತೆಗೆದುಕೊಂಡು ಹೋಗುತ್ತಿದ್ದವರು ಈ ಹಿಂದೆ ಅನೇಕ ಕೊಲೆ ಮಾಡಿದ ಆರೋಪಗಳನ್ನು ಹೊತ್ತಿದವರು. ಆದರೆ ಕಲಬುರಗಿ ಸಿಸಿಬಿ ಮತ್ತು ಮಹಾತ್ಮಾ ಬಸವೇಶ್ವರ ನಗರ ಠಾಣೆಯ ಪೊಲೀಸರ ಜಾಣ್ಮೆಯಿಂದ ಇದೀಗ ಅನೇಕರ ಜೀವ ಉಳಿದಿದೆ ಅಲ್ಲದೆ, ಪಿಸ್ತೂಲು ಮಾರಾಟ ಮಾಡುತ್ತಿದ್ದವರು ಮತ್ತು ಖರೀದಿಗೆ ಬಂದಿದ್ದವರು ಇದೀಗ ಜೈಲು ಪಾಲಾಗುವಂತೆ ಆಗಿದೆ.

ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿ ನಿನ್ನೆ (ಮಾರ್ಚ್ 25) ಕೆಲವರು ಅಕ್ರಮವಾಗಿ ನಾಡ ಪಿಸ್ತೂಲ್​ನ ಮಾರಾಟ ಮಾಡುತ್ತಿದ್ದಾರೆ. ಅವುಗಳನ್ನು ಖರೀದಿ ಮಾಡಲು ಹೈದ್ರಾಬಾದ್​ನಿಂದ ಕೆಲವರು ಇನ್ನೋವಾ ಕಾರ್​ನಲ್ಲಿ ಬಂದಿರುವ ಬಗ್ಗೆ ಪೊಲೀಸರಿಗೆ ನಿನ್ನೆ ಮುಂಜಾನೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಮಾರಾಟ ಮಾಡಲು ಮುಂದಾಗಿದ್ದ ಎರಡು ನಾಡ ಪಿಸ್ತೂಲುಗಳು, ಎರಡು ಜೀವಂತ ಗುಂಡುಗಳು, ಐದು ಮೊಬೈಲ್, ಒಂದು ಇನ್ನೋವಾ ಕಾರ್​ನ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ನಗರದ ಫಿರ್ದೋಷ್ ಕಾಲೋನಿ ನಿವಾಸಿಯಾಗಿರುವ ಅಬ್ದುಲ್ ಮೌಲನಾ, ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದ ಮಹ್ಮದ್ ಹಸನ್ ಪಟೇಲ್ ಹಾಗೂ ನಾಡ ಪಿಸ್ತೂಲುಗಳನ್ನು ಖರೀದಿಸಲು ಬಂದಿದ್ದ ಹೈದ್ರಾಬಾದ್​ನ ಮಹ್ಮದ್ ಆಸೀಪ್, ಅಬ್ದುಲ್ ಗೌಸುದ್ದೀನ್, ಇನಾಯತ್ ಅನ್ಸರ್ ಬಂಧಿತ ಆರೋಪಿಗಳು.

ಕಲಬುರಗಿಯ ಅಬ್ದುಲ್ ಮೌಲಾನ್, ಮತ್ತು ಮಹ್ಮದ್ ಹಸನ್ ಬೇರೆ ರಾಜ್ಯದಿಂದ ಅಕ್ರಮವಾಗಿ ನಾಡ ಪಿಸ್ತೂಲುಗಳನ್ನು ತಂದು ಮಾರಾಟ ಮಾಡುತ್ತಿದ್ದರಂತೆ. ಇದನ್ನು ತಿಳಿದಿದ್ದ ಹೈದ್ರಾಬಾದ್​ನ ಮೂವರು ನಾಡ ಪಿಸ್ತೂಲ್ ಖರೀದಿಗೆ ಕಲಬುರಗಿ ನಗರಕ್ಕೆ ಬಂದಿದ್ದರು. ಅಬ್ದುಲ್ ಮೌಲಾನಾ, ಒಂದು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಎರಡು ವರ್ಷದಿಂದ ತಲೆ ಮರೆಸಿಕೊಂಡಿದ್ದ ಎಂಬ ಮಾಹಿತಿ ಇದೆ. ಪಿಸ್ತೂಲು ಖರೀದಿ ಮಾಡಲು ಬಂದಿದ್ದ ಹೈದ್ರಾಬಾದ್​ನ ಮೂವರಲ್ಲಿ ಇಬ್ಬರ ಮೇಲೆ ಹೈದ್ರಾಬಾದ್ನ ಪಟ್ಟಣ ಚೂರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಇದೆ. ಸದ್ಯ ಪ್ರಕರಣದ ಮತ್ತೋರ್ವ ಆರೋಪಿ ಸಲ್ಮಾನ್ ನಾಪತ್ತೆಯಾಗಿದ್ದು, ಆತನ ಹುಡುಕಾಟಕ್ಕೆ ಕೂಡಾ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ

ಸಿಡಿ ಲೇಡಿ ದೂರು ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲು

ವೇತನ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಹಾವೇರಿ ಚಾಲಕ ಆತ್ಮಹತ್ಯೆಗೆ ಶರಣು

Published On - 4:44 pm, Fri, 26 March 21