Chittapur RSS March: ನ.13ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​​ನ ಕಲಬುರಗಿ ವಿಭಾಗೀಯ ಪೀಠ

Chittapur RSS Route March Row: ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ ಬಗ್ಗೆ ವಿಚಾರಣೆಯನ್ನ ನವೆಂಬರ್​ 13ಕ್ಕೆ ಹೈಕೋರ್ಟ್​​ನ ಕಲಬುರಗಿ ವಿಭಾಗೀಯ ಪೀಠ ಮುಂದೂಡಿದೆ. ನ. 13 ಅಥವಾ 16ರಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಲಭ್ಯವಿದೆ . ಹೀಗಾಗಿ ಅದೇ ದಿನಾಂಕದಲ್ಲಿ ಅನುಮತಿ ನೀಡಿ ಎಂದು ಈ ವೇಳೆ ಅರ್ಜಿದಾರು ಮನವಿ ಮಾಡಿದ್ದು, ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಎಜಿ ತಿಳಿಸಿದ್ದಾರೆ. ಅರ್ಜಿದಾರರು ಮತ್ತು ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಗುರುವಾರದಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ.

Chittapur RSS March: ನ.13ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​​ನ ಕಲಬುರಗಿ ವಿಭಾಗೀಯ ಪೀಠ
ಹೈಕೋರ್ಟ್​ನ ಕಲಬುರಗಿ ವಿಭಾಗೀಯ ಪೀಠ
Updated By: ಪ್ರಸನ್ನ ಹೆಗಡೆ

Updated on: Nov 07, 2025 | 4:50 PM

ಕಲಬುರಗಿ, ನವೆಂಬರ್​ 07: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ವಿಚಾರ ಸಂಬಂಧ ವಿಚಾರಣೆಯನ್ನ ನ.13ಕ್ಕೆ ಹೈಕೋರ್ಟ್​​ನ ಕಲಬುರಗಿ ವಿಭಾಗೀಯ ಪೀಠ ಮುಂದೂಡಿದೆ. ಅರ್ಜಿದಾರರು ಮತ್ತು ಜಿಲ್ಲಾಡಳಿತದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಕೋರ್ಟ್​, ಗುರುವಾರ ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಹೈಕೋರ್ಟ್ ಸಲಹೆಯಂತೆ ಉತ್ತಮವಾಗಿ ಸಭೆ ನಡೆದಿದೆ. ಜಿಲ್ಲಾಡಳಿತಕ್ಕೆ ನಾವು ನಮ್ಮ ಪ್ರಸ್ತಾವನೆ ನೀಡಿದ್ದೇವೆ. ಸರ್ಕಾರದ ನಿರ್ಧಾರವನ್ನು ಅಡ್ವೊಕೆಟ್ ಜನರಲ್ ತಿಳಿಸಬೇಕು ಎಂದು ಹೇಳಿದ್ದಾರೆ. ಜಿಲ್ಲಾಡಳಿತ ಪರವಾಗಿ ವಾದ ಮಾಡಿದ ಅಡ್ವೊಕೆಟ್ ಜನರಲ್ ಶಶಿಕರಣ್​ ಶೆಟ್ಟಿ, ಪಥಸಂಚನಲಕ್ಕಾಗಿ 11 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಲಾಗಿದ್ದು, ಪ್ರತಿಯೊಬ್ಬರಿಗೂ ಪ್ರತ್ಯೇಕ ದಿನ ಅವಕಾಶ ನೀಡಲು ಚಿಂತಿಸಲಾಗಿದೆ. ಇದಕ್ಕಾಗಿಒಂದು ವಾರ ಕಾಲಾವಕಾಶ ನೀಡುವಂತೆ ನ್ಯಾಯಾಲಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚಿತ್ತಾಪುರದಲ್ಲಿ RSS ಪಥಸಂಚಲನ ವಿವಾದ, ಎಜಿ ಕಚೇರಿಯಲ್ಲಿ ನಡೆದ 2ನೇ ಶಾಂತಿ ಸಭೆಯ ತೀರ್ಮಾನವೇನು?

ನ. 13 ಅಥವಾ 16ರಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಲಭ್ಯವಿದೆ . ಹೀಗಾಗಿ ಅದೇ ದಿನಾಂಕದಲ್ಲಿ ಅನುಮತಿ ನೀಡಿ ಎಂದು ಈ ವೇಳೆ ಅರ್ಜಿದಾರು ಮನವಿ ಮಾಡಿದ್ದು, ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಎಜಿ ತಿಳಿಸಿದ್ದಾರೆ. ಅರ್ಜಿದಾರರು ಮತ್ತು ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಅಂತಿಮವಾಗಿ ವಿಚಾರಣೆಯನ್ನು ಮುಂದೂಡಿದೆ.

ಚಿತ್ತಾಪುರದಲ್ಲಿ RSS ಪಥಸಂಚಲನ ವಿಚಾರ ಸಂಬಂಧ ಹೈಕೋರ್ಟ್​ ಆದೇಶದ ಮೇರೆಗೆ 2ನೇ ಬಾರಿ ಶಾಂತಿ ಸಭೆ ಬೆಂಗಳೂರಿನ‌ ಅಡ್ವೊಕೇಟ್ ಜನರಲ್ (ಎಜಿ) ಕಚೇರಿಯಲ್ಲಿ ನವೆಂಬರ್​ 5ರಂದು ನಡೆದಿತ್ತು. ಅರ್ಜಿದಾರ ಅಶೋಕ್ ಪಾಟೀಲ್, ಹಿರಿಯ ವಕೀಲ ಅರುಣ್ ಶ್ಯಾಮ್, ಕಡ್ಲೂರ್ ಸತ್ಯನಾರಾಯಣಾಚಾರ್ಯ, ಎಜಿ ಶಶಿಕಿರಣ್ ಶೆಟ್ಟಿ, ಕಲಬುರಗಿ ಜಿಲ್ಲಾಡಳಿತದ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಪ್ರಸ್ತಾವನೆ ಸಲ್ಲಿಸಿದ್ದ ಅರ್ಜಿದಾರರು, ನ.13 ಅಥವಾ 16ರಂದು RSS ಪಥಸಂಚಲನಕ್ಕೆ ಅನುಮತಿ ಕೋರಿದ್ದರು. 850 ಗಣವೇಷಧಾರಿಗಳು ಮಾತ್ರ ಪಥಸಂಚಲನದಲ್ಲಿ ಭಾಗವಹಿಸುತ್ತಾರೆ. 3.1 ಕಿ.ಮೀ. ಪಥಸಂಚಲನ ನಡೆಸಲಾಗುತ್ತೆ. 4 ಸಾಲಿನ ಬದಲು 3 ಸಾಲಿನಲ್ಲಿ ಹೋಗುತ್ತೇವೆ. ಮಧ್ಯಾಹ್ನ 3ರಿಂದ 6.30ರವರೆಗೆ ಪಥಸಂಚಲನಕ್ಕೆ ಅನುಮತಿ ಕೊಡಿ ಎಂದು ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:47 pm, Fri, 7 November 25