ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಕಲಬುರಗಿ ಪೊಲೀಸ್ ಆಯುಕ್ತ ರವಿಕುಮಾರ್​ಗೆ ಸಿಐಡಿ ಪತ್ರ

| Updated By: sandhya thejappa

Updated on: Jul 25, 2022 | 10:24 AM

ಜ್ಞಾನಜ್ಯೋತಿ ಶಾಲೆಯಲ್ಲಿ ಪಿಐಎಸ್ ನೇಮಕಾತಿ ಪರೀಕ್ಷೆ ನಡೆದಿತ್ತು. ಬಳಿಕ ಪಿಎಸ್ಐ ಪರೀಕ್ಷೆ ವೇಳೆ ಅಕ್ರಮ ನಡೆದ ವಿಷಯ ಬಹಿರಂಗವಾಗಿತ್ತು.

ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಕಲಬುರಗಿ ಪೊಲೀಸ್ ಆಯುಕ್ತ ರವಿಕುಮಾರ್​ಗೆ ಸಿಐಡಿ ಪತ್ರ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು (CID Officials) ಕಲಬುರಗಿ ನಗರ ಪೊಲೀಸ್ ಆಯುಕ್ತ ರವಿಕುಮಾರ್​ಗೆ ಪತ್ರ ಬರೆದಿದ್ದಾರೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪಿಐಎಸ್ ನೇಮಕಾತಿ ಪರೀಕ್ಷೆ ನಡೆದಿತ್ತು. ಬಳಿಕ ಪಿಎಸ್ಐ ಪರೀಕ್ಷೆ ವೇಳೆ ಅಕ್ರಮ ನಡೆದ ವಿಷಯ ಬಹಿರಂಗವಾಗಿತ್ತು. ಈ ಹಿನ್ನೆಲೆ ಜ್ಞಾನಜ್ಯೋತಿ ಶಾಲೆಯ ಅಕ್ರಮ ಸೇರಿದಂತೆ ಪ್ರಕರಣ ಸಂಬಂಧ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಪೊಲೀಸ್ ಆಯುಕ್ತರನ್ನ ಕೇಳಿದ್ದಾರೆ.

ಜ್ಞಾನಜ್ಯೋತಿ ಶಾಲೆಗೆ ಅಂದು ಡಿವೈಎಸ್​ಪಿ ಎಸ್.ಎಸ್.ಹುಲ್ಲೂರ್ ಬಿಡುಗಡೆ ಮಾಡಿದ್ದೇಕೆ? ಹುಲ್ಲೂರ್ ಅವರನ್ನು ಪರೀಕ್ಷಾ ಕೇಂದ್ರದಿಂದ ಬಿಡುಗಡೆಗೆ ರಾಯಚೂರು ಎಸ್​ಪಿ ಪತ್ರ ಬರೆದಿದ್ದರಾ? ಪರೀಕ್ಷಾ ಕೇಂದ್ರದಿಂದ ಬಿಡುಗಡೆ ಮಾಡುವಂತೆ ಹುಲ್ಲೂರ ಆಯುಕ್ತರ ಕಚೇರಿಗೆ ಮನವಿ ಪತ್ರ ಕೊಟ್ಟಿದಾರೆಯೇ? ಡಿವೈಎಸ್​ಪಿ ಹುಲ್ಲೂರ್ ಸ್ಥಳಕ್ಕೆ ಹೊಸಮನಿ ನೇಮಿಸದಕ್ಕೆ, ಹೊಸಮನಿ ಅವರ ಜಾಗಕ್ಕೆ ಯಾರನ್ನು ನೇಮಕ ಮಾಡಲಾಯಿತು? ಪಿಎಸ್ಐ ಪರೀಕ್ಷೆ ವೇಳೆ ಲೋಹ ಶೋಧಕ ಯಂತ್ರ ಇದ್ದರೂ ಸಹ ಪರೀಕ್ಷೆ ಒಳಗಡೆ ಡಿವೈಸ್ ತೆಗೆದುಕೊಂಡು ಹೋಗಿದ್ದಾರೆ. ಆದರೆ ಬಾಗಿಲಲ್ಲಿ ಇರುವ ನಿಮ್ಮ ಸಿಬ್ಬಂದಿ ಯಾಕೆ ಇದನ್ನು ಪತ್ತೆ ಮಾಡಲಿಲ್ಲ? ಡಿವೈಎಸ್​ಪಿ ಹುಲ್ಲೂರ್​ರನ್ನು ದಿಢೀರನೆ ಯಾಕೆ ಆ ಕೇಂದದಿಂದ ಬದಲಾವಣೆ ಮಾಡಲಾಯಿತು? ಆ ಕೇಂದ್ರಕ್ಕೆ ನೇಮಕವಾದ ಡಿವೈಎಸ್​ಪಿ ಹೊಸಮನಿ ಅವರಿಗೆ ಪರೀಕ್ಷಾ ತರಬೇತಿ ನೀಡಲಾಗಿತ್ತಾ? ಅಕ್ರಮ‌ ನಡೆದ ಹಲವು ಕೇಂದ್ರಗಳಲ್ಲಿ ಮೆಟಲ್ ಡಿಟಕ್ಟರ್ ಲೋಪ್ ಕಂಡು ಬಂದಿರುವದು ಯಾಕೆ? ಎಂಬ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿ ಪತ್ರ ಬರೆದಿದೆ.

ಇದನ್ನೂ ಓದಿ: Viral Video: ಜಪಾನ್‌ನಲ್ಲಿ ಸಕುರಾಜಿಮಾ ಜ್ವಾಲಮುಖಿ ಸ್ಫೋಟ; ಬೂದಿ, ಬಂಡೆಗಳನ್ನು ಉಗುಳುತ್ತಿರುವ ಜ್ವಾಲಾಮುಖಿ ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ
KPSC: ಕೆಪಿಎಸ್​ಸಿ ಎದುರು ಪ್ರತಿಭಟನೆ ನಡೆಸಲು ಉದ್ಯೋಗಾಕಾಂಕ್ಷಿಗಳು ಸಜ್ಜು
Murder: ಡ್ರಗ್ಸ್​​ ಸೇವಿಸುತ್ತಿದ್ದ ಮಗನನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ತುಂಬಿ ಬಿಸಾಡಿದ ಅಪ್ಪ!
Viral Video: ಜಪಾನ್‌ನಲ್ಲಿ ಸಕುರಾಜಿಮಾ ಜ್ವಾಲಮುಖಿ ಸ್ಫೋಟ; ಬೂದಿ, ಬಂಡೆಗಳನ್ನು ಉಗುಳುತ್ತಿರುವ ಜ್ವಾಲಾಮುಖಿ ವೈರಲ್ ವಿಡಿಯೋ ಇಲ್ಲಿದೆ
Black Rice: ಕಪ್ಪು ಅಕ್ಕಿಯಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಪರೀಕ್ಷೆ ರದ್ದು ಮಾಡುವುದು ಬೇಡವೆಂದಿದ್ದ ಅಭ್ಯರ್ಥಿಗಳ ಅರ್ಜಿ ವಜಾ:
ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ. ಪಿಎಸ್​ಐ ಅಭ್ಯರ್ಥಿಗಳು ಪರೀಕ್ಷೆ ರದ್ದು ಆದೇಶ ಪ್ರಶ್ನಿಸಿ ತನಿಖೆ ಮೂಲಕ ಕಳಂಕಿತರನ್ನು ಪ್ರತ್ಯೇಕಿಸಲು ಮನವಿ ಮಾಡಿದ್ದರು. ಆದ್ರೆ ಈಗ ಕಾರಣಕೊಟ್ಟು ಅಭ್ಯರ್ಥಿಗಳ ಅರ್ಜಿ ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ಅಪಘಾತ; ಬಸ್​ಗಳು ಡಿಕ್ಕಿ ಹೊಡೆದು 8 ಜನ ಸಾವು

Published On - 10:18 am, Mon, 25 July 22