ಲಂಚಕ್ಕೆ ಬೇಡಿಕೆಯಿಟ್ಟು ಅರೆಸ್ಟ್ ಆದ ಅಧಿಕಾರಿಗಳು; ಚನ್ನಪ್ಪಗೆ 14 ದಿನಗಳ ನ್ಯಾಯಾಂಗ ಬಂಧನ, ಶಂಕರಣ್ಣನ ಮೆಡಿಕಲ್ ರಿಪೋರ್ಟ್ಗಾಗಿ ಕಾಯುತ್ತಿರುವ ಎಸಿಬಿ

| Updated By: ಆಯೇಷಾ ಬಾನು

Updated on: Jun 02, 2022 | 12:35 PM

ಎಸಿಬಿ ಅಧಿಕಾರಿಗಳು ಬಂಧಿತ ಚೆನ್ನಪ್ಪನನ್ನು ಕಳೆದ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಕಲಬುರಗಿ ವಿಶೇಷ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲಂಚಕ್ಕೆ ಬೇಡಿಕೆಯಿಟ್ಟು ಅರೆಸ್ಟ್ ಆದ ಅಧಿಕಾರಿಗಳು; ಚನ್ನಪ್ಪಗೆ 14 ದಿನಗಳ ನ್ಯಾಯಾಂಗ ಬಂಧನ, ಶಂಕರಣ್ಣನ ಮೆಡಿಕಲ್ ರಿಪೋರ್ಟ್ಗಾಗಿ ಕಾಯುತ್ತಿರುವ ಎಸಿಬಿ
ಅಕೌಂಟಿಂಗ್ ಆಫೀಸರ್ ಚನ್ನಪ್ಪ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್
Follow us on

ಕಲಬುರಗಿ: ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಇಬ್ಬರು ಅಧಿಕಾರಿಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್ ಮತ್ತು ಅಕೌಂಟಿಂಗ್ ಆಫೀಸರ್ ಚನ್ನಪ್ಪನನ್ನು ನಿನ್ನೆ ರಾತ್ರಿ ಎಸಿಬಿ ಬಂಧಿಸಿತ್ತು. ಸದ್ಯ ಈ ಘಟನೆ ಸಂಬಂಧ ಚನ್ನಪ್ಪ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಆಡಿಯೋ ಟಿವಿ9ಗೆ ಲಭ್ಯವಾಗಿದೆ.

ದೂರುದಾರ ಶರಣುಗೆ ಪಾಲಿಕೆಯ ಕೊವಿಡ್ ಹೆಲ್ಪ್ಲೈನ್ ಗುತ್ತಿಗೆ ನೀಡಲಾಗಿತ್ತು. 7.5 ಲಕ್ಷ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಅಕೌಂಟಿಂಗ್ ಆಫೀಸರ್ ಚನ್ನಪ್ಪ ಮೊದಲಿಗೆ 14,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಆಡಿಯೋದಲ್ಲಿ ಪಾಲಿಕೆ ಅಕ್ರಮದ ಬಗ್ಗೆ ಮಾತನಾಡಿರುವ ಚನ್ನಪ್ಪ ಕಚೇರಿಯ ಪ್ರತಿಯೊಂದಕ್ಕೂ ನಾನು ಲೆಕ್ಕ ನೀಡಬೇಕು. ಈ ಹಿಂದಿನ ಆಫೀಸರ್ ಇದ್ದಾಗ ಬೇರೆ, ಈವಾಗಿನದ್ದು ಬೇರೆ. ಒಬ್ಬೊಬ್ಬ ಅಧಿಕಾರಿ ಇದ್ದಾಗ ಒಂದೊಂದು ನಿಯಮ ಇರುತ್ತವೆ. ಹಣ ಕೊಟ್ಟರೆ ಬಿಲ್ ಮಂಜೂರು ಮಾಡುತ್ತೇನೆ ಎಂದು ಪಾಲಿಕೆ ಆಯುಕ್ತ ಶಂಕರಣ್ಣ ಪರ ಚನ್ನಪ್ಪ ಹಣಕ್ಕೆ ಬೇಡಿಕೆಯಿಟ್ಟಿದ್ದ. ಸದ್ಯ ಲಭ್ಯವಾಗಿರುವ ಆಡಿಯೋಯಿಂದ ಆಕ್ರಮ ಸಾಭೀತಾಗಿದೆ. ಇದನ್ನೂ ಓದಿ: International Sex Workers Day 2022: ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನದ ಇತಿಹಾಸ ಹಾಗೂ ಮಹತ್ವ

ಬಂಧಿತ ಅಧಿಕಾರಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಎಸಿಬಿ
ಎಸಿಬಿ ಅಧಿಕಾರಿಗಳು ಬಂಧಿತ ಚೆನ್ನಪ್ಪನನ್ನು ಕಳೆದ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಕಲಬುರಗಿ ವಿಶೇಷ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎರಡನೇ ಆರೋಪಿಯಾಗಿರೋ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್ರಿಗೆ ಕಳೆದ ರಾತ್ರಿಯೇ ಮೆಡಿಕಲ್ ಚೆಕ್ ಅಪ್ ಮಾಡಿಸಲಾಗಿದೆ. ಆದ್ರೆ ತನಗೆ ಬೆನ್ನು ನೋವು, ಸೊಂಟದ ನೋವು ಅಂತ ಶಂಕರಣ್ಣ ಹೇಳಿಕೊಂಡಿದ್ದಾರೆ. ಹೀಗಾಗಿ ಕೆಲ ವರದಿಗಾಗಿ ಎಸಿಬಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಬಂದ ಮೇಲೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

7.50 ಲಕ್ಷ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ; ಕಲಬುರಗಿ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್ ಬಂಧಿಸಿದ ಎಸಿಬಿ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಕೆಎಸ್ಎಸ್ ಅಧಿಕಾರಿ ಶಂಕರಣ್ಣ 7.50 ಲಕ್ಷ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊವಿಡ್ ಸುರಕ್ಷಾ ಚಕ್ರ ಹೆಲ್ಪ್ಲೈನ್ ಮಾಲೀಕ ಶರಣು ಎಂಬುವರ ಬಳಿ ಶೇಕಡಾ 2ರಷ್ಟು ಕಮಿಷನ್ಗೆ ಬೇಡಿಕೆ ಇಟ್ಟಿದ್ದರು.

ಕೊವಿಡ್ 2ನೇ ಅಲೆಯಲ್ಲಿ ಹೆಲ್ಪ್ಲೈನ್ ಪ್ರಾರಂಭಿಸಲಾಗಿತ್ತು. 50 ಲಕ್ಷಕ್ಕೂ ಹೆಚ್ಚಿನ ಬಿಲ್ ಪಾವತಿ ಬಾಕಿ ಉಳಿದಿತ್ತು. ಈ ಪೈಕಿ 2ನೇ ಕಂತಿನ ಹಣ ಬಿಡುಗಡೆಗೆ ಪಾಲಿಕೆ ಅಕೌಂಟೆಂಟ್ ಚನ್ನಪ್ಪ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಎಸಿಬಿ ಅಧಿಕಾರಿಗಳಿಗೆ ಶರಣು ದೂರು ನೀಡಿದ್ದ. ಇಂದು ಸಂಜೆ ಹಣ ಪಡೆಯುವಾಗ ಎಸಿಬಿ ತಂಡ ದಾಳಿ ನಡೆಸಿ ಆಯುಕ್ತ ಶಂಕರಣ್ಣ, ಅಕೌಂಟೆಂಟ್ ಚನ್ನಪ್ಪನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: Moto E32s: ಬಜೆಟ್ ಪ್ರಿಯರನ್ನು ದಂಗಾಗಿಸಿದ ಮೋಟೋ E32s ಸ್ಮಾರ್ಟ್‌ಫೋನ್‌: ಇದರ ಬೆಲೆ ಕೇವಲ 8,999 ರೂ.

ಚೆನ್ನಪ್ಪ ಶರಣು ಅನ್ನೋರಿಂದ 14,500 ರೂಪಾಯಿ ಲಂಚ ಪಡೆದಿದ್ದ. ಶರಣು ಹಣ ನೀಡಿರೋ ಬಗ್ಗೆ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್ ಗೆ ಮಾಹಿತಿ ನೀಡಿದ್ದ. ಆಗ ಮನೆಗೆ ಹಣ ತಗೆದುಕೊಂಡು ಬಂದು ಕೊಡುವಂತೆ ಶಂಕರಣ್ಣ ವನಿಕ್ಯಾಳ್ ಹೇಳಿದ್ದರು. ಈ ವೇಳೆ ಎಸಿಬಿ ಪೊಲೀಸರು ಶಂಕರಣ್ಣ ವನಿಕ್ಯಾಳ್ ಮತ್ತು ಚೆನ್ನಪ್ಪನನ್ನು ಬಂಧಿಸಿದ್ದಾರೆ. ಚೆನ್ನಪ್ಪನನ್ನು ಟ್ರ್ಯಾಪ್ ಮಾಡಿದಾಗ ಒಂದು ಲಕ್ಷ ನಲವತ್ತೆರಡು ಸಾವಿರ ರೂಪಾಯಿ ಕೂಡಾ ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಸಂಗ್ರಹಿಸಿದ್ದ ಲಂಚದ ಹಣ ಪತ್ತೆಯಾಗಿದೆ.