ಯಾದಗಿರಿ: ಕಲಬುರ್ಗಿ ನಗರದ (kalaburagi) ಮೆಡಿಕಲ್ ಶಾಪ್ ನಿಂದ ತಂದಿದ್ದ ಜಿಂಕೋವಿಟ್ ಮಾತ್ರೆಯಲ್ಲಿ (Zincovit Tablet) ಹುಳುಗಳು (Worms) ಪತ್ತೆಯಾಗಿರುವ ಘಟನೆ ಶಹಾಪುರ ತಾಲೂಕಿನ ಮೂಡಬೂಳ ಗ್ರಾಮದಲ್ಲಿ ನಡೆದಿದೆ. ಆರೆಂಜ್ ಬಣ್ಣದ ಮಾತ್ರೆಯಲ್ಲಿ ಕಪ್ಪು ಬಣ್ಣದ ಸಣ್ಣ ಸಣ್ಣ ಹುಳುಗಳು ಪತ್ತೆಯಾಗಿವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬೂಳ ಗ್ರಾಮದ ಅಂಜಲಿ ಎಂಬ ಮಹಿಳೆ ಈ ಮಾತ್ರೆಗಳನ್ನು ಪಡೆದಿದ್ದರು. ಅಂಜಲಿ ಅವರು ಎರಡು ತಿಂಗಳ ಗರ್ಭಿಣಿ. ಇದೆ ಸೆಪ್ಟೆಂಬರ್ 23 ರಂದು ಕಲಬುರ್ಗಿಯ ಸಂಜೀವಿನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅಂಜಲಿ, ಅದೆ ಆಸ್ಪತ್ರೆಯಲ್ಲಿರುವ ಮೆಡಿಕಲ್ ಶಾಪ್ ನಲ್ಲಿ ಮಾತ್ರೆ ಪಡೆದಿದ್ದರು. ಪ್ರತಿ ತಿಂಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.
15 ಮಾತ್ರೆಗಳನ್ನ ಪಡೆದಿದ್ದರೂ ಅದರಲ್ಲಿ ಐದು ಮಾತ್ರೆ ಸೇವಿಸಿದ್ದಾರೆ. ಇವತ್ತು ಮತ್ತೊಂದು ಮಾತ್ರೆ ಸೇವಿಸುವಾಗ ಹುಳುಗಳು ಪತ್ತೆಯಾಗಿವೆ. ಮೆಡಿಕಲ್ ಶಾಪ್ ನವರಿಗೆ ವಿಚಾರಿಸಿದ್ರೆ ಆ ಮಾತ್ರೆಗಳನ್ನು ನಮ್ಮ ಬಳಿ ಪಡೆದೇ ಇಲ್ಲ ಎನ್ನುವ ಹಾರಿಕೆ ಉತ್ತರ ಕೊಡ್ತಾಯಿದ್ದಾರಂತೆ. ಮೆಡಿಕಲ್ ಶಾಪ್ ಸಿಬ್ಬಂದಿ ವಿರುದ್ಧ ಅಂಜಲಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.