ಚಿಕ್ಕಬಳ್ಳಾಪುರ JDS ಅಭ್ಯರ್ಥಿ ನಾಮಪತ್ರ ತಿರಸ್ಕೃತ, ಹಾಗಾದ್ರೆ ಮತ್ಯಾರು ಅಭ್ಯರ್ಥಿ?

ಚಿಕ್ಕಬಳ್ಳಾಪುರ: ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಪಿ.ಬಚ್ಚೇಗೌಡ ಅವರ ‌ನಾಮಪತ್ರ ತಿರಸ್ಕೃತವಾಗಿದೆ. ಜೆಡಿಎಸ್ ಆದ್ಯ ಅಭ್ಯರ್ಥಿ ಎನ್.ರಾಧಕೃಷ್ಣ ನಾಮಪತ್ರ ಊರ್ಜಿತವಾಗಿದೆ. ಬಿ ಫಾರಂನಲ್ಲಿ ರಾಧಾಕೃಷ್ಣರನ್ನ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಕೆ.ಪಿ.ಬಚ್ಚೇಗೌಡರನ್ನ ಪರ್ಯಾಯ ಅಭ್ಯರ್ಥಿಯಾಗಿ ಸೂಚಿಸಲಾಗಿತ್ತು. ಇಬ್ಬರೂ ಅಭ್ಯರ್ಥಿಗಳು ಜೊತೆಯಲ್ಲೇ ಬಂದು, ಒಂದೇ ಬಿ ಫಾರಂನಲ್ಲಿ ಇಬ್ಬರ ಹೆಸರನ್ನೂ ‌ಬರೆದು, ನಾಮಪತ್ರ ಸಲ್ಲಿಸಿದ್ದರು.

ಚಿಕ್ಕಬಳ್ಳಾಪುರ JDS ಅಭ್ಯರ್ಥಿ ನಾಮಪತ್ರ ತಿರಸ್ಕೃತ, ಹಾಗಾದ್ರೆ ಮತ್ಯಾರು ಅಭ್ಯರ್ಥಿ?
ಸಾಧು ಶ್ರೀನಾಥ್​

Updated on: Nov 19, 2019 | 4:21 PM

ಚಿಕ್ಕಬಳ್ಳಾಪುರ: ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ.

ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಪಿ.ಬಚ್ಚೇಗೌಡ ಅವರ ‌ನಾಮಪತ್ರ ತಿರಸ್ಕೃತವಾಗಿದೆ. ಜೆಡಿಎಸ್ ಆದ್ಯ ಅಭ್ಯರ್ಥಿ ಎನ್.ರಾಧಕೃಷ್ಣ ನಾಮಪತ್ರ ಊರ್ಜಿತವಾಗಿದೆ. ಬಿ ಫಾರಂನಲ್ಲಿ ರಾಧಾಕೃಷ್ಣರನ್ನ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಕೆ.ಪಿ.ಬಚ್ಚೇಗೌಡರನ್ನ ಪರ್ಯಾಯ ಅಭ್ಯರ್ಥಿಯಾಗಿ ಸೂಚಿಸಲಾಗಿತ್ತು. ಇಬ್ಬರೂ ಅಭ್ಯರ್ಥಿಗಳು ಜೊತೆಯಲ್ಲೇ ಬಂದು, ಒಂದೇ ಬಿ ಫಾರಂನಲ್ಲಿ ಇಬ್ಬರ ಹೆಸರನ್ನೂ ‌ಬರೆದು, ನಾಮಪತ್ರ ಸಲ್ಲಿಸಿದ್ದರು.

Published On - 3:23 pm, Tue, 19 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us