ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಹೊಣೆ ಅಲ್ಲವೇ? ಕರ್ನಾಟಕ ಬಿಜೆಪಿ ಟ್ವೀಟ್

ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಅವರು ಹೊಣೆ ಅಲ್ಲವೇ ಎಂದು ಕರ್ನಾಟಕ ಬಿಜೆಪಿ ಘಟಕ ಟ್ವೀಟ್​ ಮಾಡಿದೆ.

ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಹೊಣೆ ಅಲ್ಲವೇ? ಕರ್ನಾಟಕ ಬಿಜೆಪಿ ಟ್ವೀಟ್
ಡಿ.ಕೆ. ಶಿವಕುಮಾರ್

Updated on: Mar 29, 2021 | 3:50 PM

ಬೆಂಗಳೂರು: ಯುವತಿ ಪೋಷಕರು ನೇರವಾಗಿ ಆರೋಪಿಸಿದ್ದಾರೆ. ಹೀಗಿರುವಾಗ ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಅವರು ಹೊಣೆ ಅಲ್ಲವೇ ಎಂದು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

ಸಂತ್ರಸ್ತ ಯುವತಿಯ ಪೋಷಕರು ನೇರವಾಗಿ ನಿಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಬೊಟ್ಟು ಮಾಡಿ, ಸಂತ್ರಸ್ಥೆಯನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಿರುವಾಗ ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಅವರು ಹೊಣೆ ಅಲ್ಲವೇ? ನಿಮಗೆ ಈಗ ಜ್ಞಾನೋದಯವಾಗಿದ್ದೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ಗೆ ರಾಜ್ಯ ಬಿಜೆಪಿ ಘಟಕ ಪ್ರತಿ ಟ್ವೀಟ್ ಮಾಡಿದೆ.

ಭಯಬಿಟ್ಟು ಅಜ್ಞಾತ ಸ್ಥಳದಲ್ಲಿರುವ ಯುವತಿ ಹೊರಬರಲಿ. ಸಂತ್ರಸ್ತೆ ಹೊರಬಂದು ದೂರು ನೀಡಿದ್ರೆ ಸತ್ಯ ಹೊರಬರುತ್ತೆ. ನಿಮಗೆ ಈಗ ಜ್ಞಾನೋದಯವಾಗಿದೆಯೇ ಎಂದು ಪ್ರಶ್ನೆ ಮಾಡಿದೆ. ಸದನದಲ್ಲಿ ಬಜೆಟ್ ಮೇಲಿನ ಚರ್ಚೆಯ ಸಮಯವನ್ನು, ಅಪ್ರಸ್ತುತವಾದ ವಿಚಾರಕ್ಕೆ ಬಳಸಿಕೊಂಡಿದ್ದೀರಿ. ಸದನದ ಅಮೂಲ್ಯ ಸಮಯ ವ್ಯರ್ಥ ಮಾಡಿದ್ದೀರಿ. ಆಗ ನಿಮಗೆ ಇದೆಲ್ಲಾ ನೆನಪಿರಲಿಲ್ಲವೇ? ಡಿಕೆಶಿ ಹೆಸರು ಬರುತ್ತಲೇ ವರಸೆ ಬದಲಾಯಿಸಿ ಬಿಟ್ಟಿರಿ. ಅಮೂಲ್ಯ ಸಮಯ ವ್ಯರ್ಥ ಮಾಡುವಾಗ ಇದೆಲ್ಲಾ ನೆನಪಿರಲಿಲ್ಲವೇ? ಎಂದು ಸಿದ್ದರಾಮಯ್ಯಗೆ ಬಿಜೆಪಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.


ಇದನ್ನೂ ಓದಿ: ‘ಪ್ರಾಣ ಭಯವಿದೆ’ ಎಂದಿರುವ ಸಿಡಿ ಯುವತಿ; ಬಿಎಸ್​ವೈ ಅವರೇ ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ? ಸಿದ್ದರಾಮಯ್ಯ ಟ್ವೀಟ್