Covid-19 Karnataka Update: ಕರ್ನಾಟಕದಲ್ಲಿ 29,744 ಮಂದಿಗೆ ಕೊರೊನಾ ಸೋಂಕು, 201 ಜನರ ಸಾವು

|

Updated on: Apr 26, 2021 | 10:12 PM

ಬೆಂಗಳೂರು ನಗರದಲ್ಲಿ 16,545 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 105 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 29,744 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

Covid-19 Karnataka Update: ಕರ್ನಾಟಕದಲ್ಲಿ 29,744 ಮಂದಿಗೆ ಕೊರೊನಾ ಸೋಂಕು, 201 ಜನರ ಸಾವು
ಸಂಗ್ರಹ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಒಟ್ಟು 29,744 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 201 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 16,545 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 105 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 13,68,945ಕ್ಕೆ (13.68 ಲಕ್ಷ) ಏರಿಕೆಯಾಗಿದೆ. ಸೋಂಕಿತರ ಪೈಕಿ 10,73,257 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 201 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 14,627 ಜನರು ಮೃತಪಟ್ಟಿದ್ದಾರೆ. 2,81,042 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 16,545 ಜನರಿಗೆ ಸೋಂಕು ದೃಢಪಟ್ಟಿದ್ದು, ಕೊರೊನಾ ಪೀಡಿತರ ಒಟ್ಟು ಸಂಖ್ಯೆ 6,70,201ಕ್ಕೆ ಏರಿಕೆಯಾಗಿದೆ. 6,70,201 ಸೋಂಕಿತರ ಪೈಕಿ 4,71,626 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಲ್ಲಿಂದು ಕೊರೊನಾ ಸೋಂಕಿಗೆ 105 ಜನರ ಬಲಿ. ನಗರದಲ್ಲಿ ಈವರೆಗೆ ಕೊರೊನಾದಿಂದ 5,905 ಜನರು ಸಾವನ್ನಪ್ಪಿದ್ದಾರೆ. 1,92,669 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 16,545 ಜನರಲ್ಲಿ ಸೋಂಕು ದೃಢಪಟ್ಟಿದೆ. ನಂತರದ ಸ್ಥಾನದಲ್ಲಿ ಮೈಸೂರು 1,563 ಜಿಲ್ಲೆ ಇದೆ. ತುಮಕೂರಿನಲ್ಲಿ ಸತತವಾಗಿ ಒಂದು ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಸೋಮವಾರ ತುಮಕೂರಿನಲ್ಲಿ 1,197 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಬಾಗಲಕೋಟೆ 418, ಬಳ್ಳಾರಿ 786, ಬೆಳಗಾವಿ 312, ಬೆಂಗಳೂರು ಗ್ರಾಮಾಂತರ 505, ಬೀದರ್ 452, ಚಾಮರಾಜನಗರ 267, ಚಿಕ್ಕಬಳ್ಳಾಪುರ 444, ಚಿಕ್ಕಮಗಳೂರು 403, ಚಿತ್ರದುರ್ಗ 104, ದಕ್ಷಿಣ ಕನ್ನಡ 295, ದಾವಣಗೆರೆ 105, ಧಾರವಾಡ 433, ಗದಗ 97, ಹಾಸನ 747, ಹಾವೇರಿ 78, ಕಲಬುರಗಿ 872, ಕೊಡಗು 311, ಕೋಲಾರ 421, ಕೊಪ್ಪಳ 282, ಮಂಡ್ಯ 929, ಉಡುಪಿ 412, ರಾಯಚೂರು 609, ರಾಮನಗರ 168, ಶಿವಮೊಗ್ಗ 250, ಉತ್ತರ ಕನ್ನಡ 190, ವಿಜಯಪುರ 385, ಯಾದಗಿರಿ 164 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ ಒಟ್ಟು 201 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 105, ಬಳ್ಳಾರಿ 18, ಹಾಸನ 10, ಮಂಡ್ಯ 9, ಮೈಸೂರು, ಕಲಬುರಗಿ ಜಿಲ್ಲೆಗಳಲ್ಲಿ ತಲಾ 7, ಧಾರವಾಡ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ತಲಾ ಐವರು, ಬೀದರ್, ಹಾವೇರಿ, ಯಾದಗಿರಿ, ತುಮಕೂರು ಜಿಲ್ಲೆಗಳಲ್ಲಿ ತಲಾ ನಾಲ್ವರು ಸಾವನ್ನಪ್ಪಿದ್ದಾರೆ.

(Karnataka covid-19 update 29744 coronavirus infection 201 dead on April 26)

ಇದನ್ನೂ ಓದಿ: Karnataka Lockdown Guidelines: ಕೊರೊನಾ ಕರ್ಫ್ಯೂ ಹೊಸ ಮಾರ್ಗಸೂಚಿ ಬಿಡುಗಡೆ: ಏನಿರುತ್ತೆ? ಏನಿರಲ್ಲ? ಯಾವುದಕ್ಕೆ ಅನುಮತಿ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

Published On - 9:30 pm, Mon, 26 April 21