ಬೆಂಗಳೂರು: ರಾಜ್ಯದಲ್ಲಿ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆ ತುಸು ತಗ್ಗಿದಂತೆ ಕಾಣುತ್ತಿದೆ. ಇಂದು 35,297 ಜನರಲ್ಲಿ ಕೊರೊನಾ ದೃಢಪಟ್ಟಿದೆ. ಹಾಗೇ ಕಳೆದ 24ಗಂಟೆಯಲ್ಲಿ ಸೋಂಕಿನಿಂದ 344 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆ 20,88,488ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 20,712 ಕ್ಕೆ ತಲುಪಿದೆ. ಇಂದು ಒಂದೇ ದಿನ 34057 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಈವರೆಗೆ ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆದವರು 14,74,678 ಮಂದಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿನ ಪ್ರಕರಣಗಳು 50 ಸಾವಿರದವರೆಗೆ ತಲುಪಿದ್ದು ತೀವ್ರ ಆತಂಕ ಮೂಡಿಸಿತ್ತು. ಇದೀಗ ಸ್ವಲ್ಪ ಕಡಿಮೆಯಾಗಿದ್ದು, ಇಂದು ಒಂದೇ ದಿನ 35 ಸಾವಿರ ಕೇಸ್ಗಳು ದಾಖಲಾಗಿವೆ. 5,93,078 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಿದ್ದರೂ ಇಂದು ಒಂದೇ ದಿನ 15,191 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯರಾಜಧಾನಿಯ ಒಟ್ಟು ಸೋಂಕಿತರ ಸಂಖ್ಯೆ 10,14,996ಕ್ಕೆ ಏರಿಕೆಯಾಗಿದೆ. ಅವರಲ್ಲಿ 6,46,305 ಜನರು ಗುಣಮುಖರಾಗಿದ್ದಾರೆ. ಹಾಗೇ, ಬೆಂಗಳೂರಿನಲ್ಲಿ ಇಂದು 161 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 9,125 ಕ್ಕೆ ತಲುಪಿದೆ.
ಉಳಿದಂತೆ ಬಳ್ಳಾರಿ 1865, ತುಮಕೂರು 1798, ಮೈಸೂರು 1260, ಮಂಡ್ಯ 1153, ಬೆಂಗಳೂರು ಗ್ರಾಮಾಂತರ 1079, ಉಡುಪಿ 891, ಶಿವಮೊಗ್ಗ 880, ಚಾಮರಾಜನಗರ 842, ದಕ್ಷಿಣ ಕನ್ನಡ 812, ಹಾಸನ 792, ಉತ್ತರ ಕನ್ನಡ 791, ಧಾರವಾಡ 737, ಬೆಳಗಾವಿ 713, ಯಾದಗಿರಿ 675, ಬಾಗಲಕೋಟೆ 520, ರಾಮನಗರ 518, ಕಲಬುರಗಿ 497, ದಾವಣಗೆರೆ 494, ಕೋಲಾರ 488, ಚಿಕ್ಕಮಗಳೂರು 445, ಕೊಪ್ಪಳ 437, ಗದಗ 430, ಕೊಡಗು 425, ಚಿಕ್ಕಬಳ್ಳಾಪುರ 354, ವಿಜಯಪುರ 331, ಚಿತ್ರದುರ್ಗ 292, ಬೀದರ್ 257, ರಾಯಚೂರು 170, ಹಾವೇರಿಯಲ್ಲಿ 160 ಕೇಸ್ಗಳು ಇಂದು ದಾಖಲಾಗಿವೆ.
ಇದನ್ನೂ ಓದಿ: ಕೊವಿಡ್ ದೃಢಪಟ್ಟ 1 ಗಂಟೆಯೊಳಗೆ ಐಸೋಲೇಶನ್ ಕಿಟ್ ಮನೆ ಬಾಗಿಲಿಗೆ; ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
Covid-19 Positivity Rate: ಕೊವಿಡ್ ಪಾಸಿಟಿವಿಟಿ ರೇಟ್ನಲ್ಲಿ ಉತ್ತರ ಕನ್ನಡ ನಂ.1: ಇದು ಗಾಬರಿ ಹುಟ್ಟಿಸುವ ವಿಚಾರ
Published On - 8:41 pm, Thu, 13 May 21