Covid-19 Positivity Rate: ಕೊವಿಡ್ ಪಾಸಿಟಿವಿಟಿ ರೇಟ್​ನಲ್ಲಿ ಉತ್ತರ ಕನ್ನಡ ನಂ.1: ಇದು ಗಾಬರಿ ಹುಟ್ಟಿಸುವ ವಿಚಾರ

ಕಾರವಾರ:  26 ಜಿಲ್ಲೆಗಳ ಕೊವಿಡ್- 19 ಸೋಂಕಿನ ಪಾಸಿಟಿವಿಟಿ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು, ಈ ಪೈಕಿ ಉತ್ತರ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಕೊವಿಡ್ ಸೋಂಕು ದೃಢಪಡುವ ದರವನ್ನು ಪಾಸಿಟಿವಿಟಿ ರೇಟ್ ಎಂದು ಕರೆಯಲಾಗುತ್ತದೆ. ದೇಶದ ಕೊವಿಡ್ ಪಾಸಿಟಿವಿಟಿ ದರವು ಶೇ 21 ಆಗಿದ್ದು, ಉತ್ತರ ಕನ್ನಡದಲ್ಲಿ ಶೇಕಡಾ 45.7ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ. ಬಳ್ಳಾರಿ (ಶೇ 44.3), ಹಾಸನ (ಶೇ 42.1) ಮತ್ತು […]

Covid-19 Positivity Rate: ಕೊವಿಡ್ ಪಾಸಿಟಿವಿಟಿ ರೇಟ್​ನಲ್ಲಿ ಉತ್ತರ ಕನ್ನಡ ನಂ.1: ಇದು ಗಾಬರಿ ಹುಟ್ಟಿಸುವ ವಿಚಾರ
ಪ್ರಾತಿನಿಧಿಕ ಚಿತ್ರ
Follow us
|

Updated on: May 13, 2021 | 8:11 PM

ಕಾರವಾರ:  26 ಜಿಲ್ಲೆಗಳ ಕೊವಿಡ್- 19 ಸೋಂಕಿನ ಪಾಸಿಟಿವಿಟಿ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು, ಈ ಪೈಕಿ ಉತ್ತರ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಕೊವಿಡ್ ಸೋಂಕು ದೃಢಪಡುವ ದರವನ್ನು ಪಾಸಿಟಿವಿಟಿ ರೇಟ್ ಎಂದು ಕರೆಯಲಾಗುತ್ತದೆ. ದೇಶದ ಕೊವಿಡ್ ಪಾಸಿಟಿವಿಟಿ ದರವು ಶೇ 21 ಆಗಿದ್ದು, ಉತ್ತರ ಕನ್ನಡದಲ್ಲಿ ಶೇಕಡಾ 45.7ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ. ಬಳ್ಳಾರಿ (ಶೇ 44.3), ಹಾಸನ (ಶೇ 42.1) ಮತ್ತು ಮೈಸೂರು (ಶೇ 41.3) ಜಿಲ್ಲೆಗಳು ನಂತರದ ಸ್ಥಾನದಲ್ಲಿದೆ. ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿರುವ ಬೆಂಗಳೂರು ನಗರದಲ್ಲಿ ಶೇಕಡಾ 34.7ರಷ್ಟು ಸಕಾರಾತ್ಮಕತೆ ದರವಿದೆ. ಈ ರೀತಿ ರಾಜ್ಯದ 28 ಸೇರಿದಂತೆ ದೇಶದ 310 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಈ ದರವು ಪ್ರಸ್ತುತ ಸೋಂಕಿತರ ಸಂಖ್ಯೆ ಏರಿಕೆಗೂ ಕಾರಣವಾಗಿದೆ. 

ಉತ್ತರ ಕನ್ನಡದಲ್ಲಿ ಮೇ 5ರಿಂದ 11ರ ನಡುವಿನ ಅವಧಿಯಲ್ಲಿ ಸಂಗ್ರಹಿಸಿದ 14,611 ಗಂಟಲು ದ್ರವಗಳಲ್ಲಿ 6,372 ಮಂದಿಗೆ ಸೋಂಕು ದೃಢಪಟ್ಟಿದೆ. ಈ ರೀತಿ  ಇನ್ನು ಜಿಲ್ಲೆಯಲ್ಲಿ ತಾಲೂಕುವಾರು ನೋಡುವುದಾದರೆ, ಕಾರವಾರದಲ್ಲಿ ಅತ್ಯಧಿಕ, ಅಂದರೆ ಸಂಗ್ರಹಿಸಿದ 1,453 ಗಂಟಲು ದ್ರವಗಳಲ್ಲಿ 861 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದು, ಇಲ್ಲಿ ಪಾಸಿಟಿವಿಟಿ ದರ ಶೇ 59.3ರಷ್ಟಿದೆ. ಎರಡನೇ ಸ್ಥಾನದಲ್ಲಿ ಅಂಕೋಲಾ (996 ಗಂಟಲು ದ್ರವಗಳಲ್ಲಿ 518 ಮಂದಿಗೆ ಪಾಸಿಟಿವ್, ಪಾಸಿಟಿವಿಟಿ ಶೇ 52) ಇದ್ದು, ನಂತರದಲ್ಲಿ ಜೊಯಿಡಾ, ಭಟ್ಕಳ, ಕುಮಟಾ, ಹಳಿಯಾಳ ತಾಲೂಕುಗಳಿವೆ.

ದಿನಕ್ಕೆ ಸರಾಸರಿ 9 ಸಾವು ಜಿಲ್ಲೆಯಲ್ಲಿ ಮೇ 1ರಿಂದ 11ರ ಅವಧಿಯಲ್ಲಿ ಒಟ್ಟು 8,938 ಮಂದಿ ಕೊವಿಡ್ ಸೋಂಕಿತರಾಗಿದ್ದಾರೆ. ಇದರ ಅರ್ಧದಷ್ಟು, ಅಂದರೆ 4,517 ಸೋಂಕಿತರು ಗುಣಮುಖರಾಗಿದ್ದಾರೆ. ಈ ಅವಧಿಯಲ್ಲಿ 102 ಸೋಂಕಿತರು ಮೃತಪಟ್ಟಿದ್ದಾರೆ. ಪ್ರತಿ ದಿನಕ್ಕೆ ಸರಾಸರಿ 9 ಸೋಂಕಿತರು ಮೃತರಾಗುತ್ತಿದ್ದಾರೆ. ಜತೆಗೆ  ಶಿರಸಿ, ಹಳಿಯಾಳ ಕಾರವಾರ, ಸಿದ್ದಾಪುರದಲ್ಲಿ ಹೆಚ್ಚಿನ ಸೋಂಕಿತರು ಪ್ರತಿದಿನ ಪತ್ತೆಯಾಗುತ್ತಿದ್ದಾರೆ.

ತಪಾಸಣೆಗೆ ಹಿಂದೇಟು, ಏನು ಕಾರಣ? ಸೋಂಕಿನ ಲಕ್ಷಣವಿದ್ದರೂ ಕೂಡ ಹಲವರು ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕೂಡ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಕಾರಣವಾಗುತ್ತಿದೆ.ಆಸ್ಪತ್ರೆಗೆ ತೆರಳಲು ಮಾರ್ಗಮಧ್ಯೆ ಪೊಲೀಸರು ತಡೆಯುತ್ತಾರೆ. ಅಕ್ಕಪಕ್ಕದ ಮನೆಯವರು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ ಎಂಬ ಭಾವನೆಗಳಿಂದ ಹಾಗೂ ಮನೆಯಲ್ಲೇ ಇದ್ದರೆ ಗುಣಮುಖರಾಗಬಹುದು ಎಂಬ ಹುಂಬತನದಿಂದ ಅನೇಕರು ತಪಾಸಣೆಗೆ ತೆರಳುತ್ತಿಲ್ಲ. ಲಕ್ಷಣವಿದ್ದು ಹೀಗೆ ತೆರಳಿದರೂ ಕೂಡ ವೈದ್ಯರ ಶಿಫಾರಸ್ಸು ಕಡ್ಡಾಯವೆಂದು ಸೂಚಿಸಿರುವುದರಿಂದಲೂ ತಪಾಸಣೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ಇದರಿಂದಾಗಿ ಅನೇಕರು ತಪಾಸಣೆಗೆ ಬಂದೂ ವಾಪಸ್ಸಾಗುತ್ತಿದ್ದಾರೆ.

ಮದುವೆ ಮನೆಗಳೇ ಕೊವಿಡ್ ಹಾಟ್​ಸ್ಪಾಟ್ ಕೊವಿಡ್ ಹರಡುವುದಕ್ಕೆ ಹಿಂದಿನ ವರ್ಷವೂ ಮದುವೆ ಮನೆಗಳೇ ಮುಖ್ಯ ಕಾರಣವಾಗಿತ್ತು. ಈ ಬಾರಿಯೂ ಸಹ ಇದೇ ಮುಂದುವರೆದಿದೆ. ಮದುವೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಕಾರಣ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದ ಅನೇಕರಿಗೆ ಸೋಂಕು ತಗುಲುತ್ತಿದೆ. ಭಟ್ಕಳ ತಾಲೂಕೊಂದರಲ್ಲೇ ಜನತಾ ಕರ್ಫ್ಯೂ ಸಮಯದಲ್ಲಿ 132 ಮದುವೆಗಳು ನಡೆದಿದ್ದು, ಲಾಕ್ ಡೌನ್ ಮಾರ್ಗಸೂಚಿ ಬದಲಾದ ನಂತರ 22 ಮದುವೆಗಳಿಗೆ ಅರ್ಜಿಗಳು ಬಂದಿವೆ, ಇನ್ನೂ ಬರುತ್ತಲೇ ಇವೆ ಎನ್ನಲಾಗಿದೆ. ದೂರದ ಬೆಂಗಳೂರು, ಮುಂಬೈನಿಂದ ಬಂದಂತಹ ಸಂಬಂಧಿಗಳು ಮದುವೆ ಮನೆಯಲ್ಲಿ ಪಾಲ್ಗೊಂಡ ಕಾರಣ ಸಹಜವಾಗಿಯೇ ಅದು ಮದುವೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸೋಂಕು ತಗುಲುತ್ತಿದೆ. ಬಹಳಷ್ಟು ಮಂದಿ ಕುಟುಂಬ ಸಮೇತರಾಗಿ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಸುಮ್ಮನಿದ್ದಾರೆ.

ಇನ್ನು ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕಂಡುಬರುತ್ತಿದ್ದವು. ವಿಶಾಲವಾದ ಜಾಗದಲ್ಲಿ ಸ್ವಲ್ಪ ಹೆಚ್ಚಿಗೆ ಜನವಿದ್ದರೂ ಅದು ಜನದಟ್ಟಣೆಯಾಗಿ ಕಾಣುತ್ತಿರಲಿಲ್ಲ. ಆದರೆ, ಈಗ 40 ಜನಕ್ಕೆ ಅವಕಾಶವಿದ್ದರೂ, ಮನೆಗಳಲ್ಲೇ ಮದುವೆ ಮಾಡಬೇಕೆಂಬ ಆದೇಶವಿರುವ ಕಾರಣ ನಿಗದಿಗಿಂತ ಹೆಚ್ಚು ಜನರು ಮನೆಗಳ ಚಿಕ್ಕ ಚಿಕ್ಕ ಆವರಣಗಳಲ್ಲಿ ಸೇರಿ ಸೋಂಕು ಹರಡಲು ಕಾರಣವಾಗುತ್ತಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಸಿದ್ದಾಪುರದಲ್ಲಿ ಮದುವೆಯಲ್ಲಿ ಪಾಲ್ಗೊಂಡ ಸುದ್ದಿ ಸಂಚಲನ ಮೂಡಿಸಿತ್ತು.

ಜಿಲ್ಲಾಡಳಿತ ಎಡವಿತೇ? ಸೋಂಕು ತೀವ್ರಗೊಳ್ಳಲಿದೆ ಎಂದು ತಿಳಿದಿದ್ದರೂ  ಈ ಮುನ್ನವೇ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರಲಿಲ್ಲ. ಇದು ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಲು ನೇರ ಕಾರಣವಾಗಿದೆ. ಜನ ಕೂಡ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ ಜಿಲ್ಲಾಡಳಿತಈಗಿನಂತೆ ಮೊದಲೇ ಕ್ರಮಗಳನ್ನು  ಕೈಗೊಂಡಿದ್ದರೆ ಸೋಂಕಿತರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗುತ್ತಿರಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಳವಾದ ಬಳಿಕ ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರ ಕೈಗೆ ಸೀಲು ಹಾಕಲು ಪ್ರಾರಂಭಿಸಿರುವುದು, ಹೋಮ್ ಐಸೋಲೇಶನ್‌ನಲ್ಲಿರುವವರ ಮೇಲೆ ನಿಗಾದಂಥ ಕ್ರಮಗಳನ್ನು ಈ ಮೊದಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿತ್ತು ಎಂಬುದು ಹಲವರ ಒತ್ತಾಯವಿತ್ತು. ಆದರೇ ಈ ಬಗ್ಗೆ ಸರ್ಕಾರದ ಆದೇಶವಿಲ್ಲದ ಕಾರಣ ನಿರ್ಲಕ್ಷಿಸಲಾಗಿತ್ತು. ಲಕ್ಷಣ ರಹಿತರ ಹಾಗೂ ವೈದ್ಯರ ಶಿಫಾರಸು ಪತ್ರವಿಲ್ಲದ ಲಕ್ಷಣ ಹೊಂದಿದವರಿಂದ ಗಂಟಲು ದ್ರವ ಸಂಗ್ರಹಿಸುವುದನ್ನು ನಿಲ್ಲಿಸಿರುವುದು ಸೋಂಕಿತರ ಸಂಖ್ಯೆ ಹೆಚ್ಚಳವಾಯಿತು ಎನ್ನಲಾಗಿದೆ.

ಸದ್ಯ ಜಿಲ್ಲಾಡಳಿತ ಸೋಂಕಿತರ ಸಂಖ್ಯೆಯನ್ನಾಗಲೀ, ಮೃತಪಡುವವರ ಸಂಖ್ಯೆಯನ್ನಾಗಿ ಪಾರದರ್ಶಕವಾಗಿ ಪ್ರಕಟಿಸುತ್ತಿದೆ ಎಂದು ಹೇಳಲಾಗಿದೆ. ಈ ಮುನ್ನ ಒಂದೆರಡು ದಿನ ಜಿಲ್ಲಾಡಳಿತ ದಿನದ ಕೊವಿಡ್ ಪ್ರಕಟಣೆಯನ್ನೇ ಬಿಡುಗಡೆ ಮಾಡಿರಲಿಲ್ಲ. ಆದರೆ ಸದ್ಯ ಪ್ರತಿದಿನದ ಕೊವಿಡ್ ಲೆಕ್ಕಾಚಾರವನ್ನು ಪಾರದರ್ಶಕವಾಗಿ ಪ್ರಕಟಿಸುತ್ತಿದೆ. ಇದು ಸಹ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗಿರಲು ಕಾರಣ ಎಂಬುದು ಕೆಲವರ ಅಂಬೋಣ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಮತ್ತು ಲಸಿಕೆ ಬಳಕೆ ಬಗ್ಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

(Uttara Kannada have topest covid positivity rate 45.7 percent among Karnataka )

ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ