Karnataka Covid Update: ಕರ್ನಾಟಕದಲ್ಲಿ ಇಂದು 32,218, ಬೆಂಗಳೂರಿನಲ್ಲಿ 9,591 ಜನರಿಗೆ ಕೊವಿಡ್ ದೃಢ,

|

Updated on: May 21, 2021 | 7:38 PM

Bengaluru Covid Update: ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 9,591 ಜನರಿಗೆ ಕೊವಿಡ್ ಡೃಢಪಟ್ಟಿದ್ದು, 129 ಜನರು ಅಸುನೀಗಿದ್ದಾರೆ.

Karnataka Covid Update: ಕರ್ನಾಟಕದಲ್ಲಿ ಇಂದು 32,218, ಬೆಂಗಳೂರಿನಲ್ಲಿ 9,591 ಜನರಿಗೆ ಕೊವಿಡ್ ದೃಢ,
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ ಒಂದೇ ದಿನ 32,218 ಜನರಿಗೆ ಕೊವಿಡ್ ಸೋಂಕು ತಗುಲಿರುವುದು ಖಚಿತವಾಗಿದ್ದು, 353 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 9,591 ಜನರಿಗೆ ಕೊವಿಡ್ ಡೃಢಪಟ್ಟಿದ್ದು, 129 ಜನರು ಅಸುನೀಗಿದ್ದಾರೆ. ಜತೆಗೆ ಕರ್ನಾಟಕದಲ್ಲಿ ಇಂದು ಒಂದೇ ದಿನ 52,581 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ.

ಇಂದು ಪತ್ತೆಯಾದ ಕೊವಿಡ್ ಸೋಂಕಿತರನ್ನೂ ಸೇರಿಸಿ ಕರ್ನಾಟಕದಲ್ಲಿ ಈವರೆಗಿನ ಕೊವಿಡ್ ಸೋಂಕಿತರ ಸಂಖ್ಯೆ 2,36,7742ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 18,29,276 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 5,14,238 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾವಾರು ಸೋಂಕಿತರ ವಿವರ
ಬೆಂಗಳೂರು ನಗರ ಜಿಲ್ಲೆ 9,591, ಮೈಸೂರು 2,355, ಹಾಸನ 2,071, ತುಮಕೂರು 1,773, ಬಳ್ಳಾರಿ 1,650,​ ಬೆಳಗಾವಿ 1,138, ಶಿವಮೊಗ್ಗ 892, ದಕ್ಷಿಣ ಕನ್ನಡ 864, ಉಡುಪಿ 854, ಚಿಕ್ಕಬಳ್ಳಾಪುರ 845, ಚಿತ್ರದುರ್ಗ 838, ಧಾರವಾಡ 809, ಉತ್ತರ ಕನ್ನಡ 768, ದಾವಣಗೆರೆ 681, ಚಿಕ್ಕಮಗಳೂರು 672, ಬೆಂಗಳೂರು ಗ್ರಾಮಾಂತರ 641, ಕೊಪ್ಪಳ 598, ರಾಯಚೂರು 558, ಗದಗ 530, ಯಾದಗಿರಿ 520, ಕೊಡಗು 512, ಕೋಲಾರ 479, ಚಾಮರಾಜನಗರ 470, ಹಾವೇರಿ 387, ರಾಮನಗರ 375, ಕಲಬುರಗಿ 352, ವಿಜಯಪುರ 349, ಮಂಡ್ಯ 296, ಬಾಗಲಕೋಟೆ ಜಿಲ್ಲೆ 275, ಬೀದರ್ ಜಿಲ್ಲೆಯಲ್ಲಿ 75 ಸೋಂಕಿತರು ಇಂದು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಮೃತರ ವಿವರ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 353 ಜನರ ಸಾವನ್ನಪ್ಪಿದ್ದು, ಬೆಂಗಳೂರು ನಗರ ಜಿಲ್ಲೆ 129, ಬೆಂಗಳೂರು ಗ್ರಾಮಾಂತರ ಜಿಲ್ಲೆ 30, ಬಳ್ಳಾರಿ ಜಿಲ್ಲೆ 23, ಉತ್ತರ ಕನ್ನಡ ಜಿಲ್ಲೆ 22, ಶಿವಮೊಗ್ಗ ಜಿಲ್ಲೆ 20, ತುಮಕೂರು ಜಿಲ್ಲೆ 16, ಮೈಸೂರು ಜಿಲ್ಲೆ 12, ಧಾರವಾಡ, ಮಂಡ್ಯ ಜಿಲ್ಲೆ 9, ದಕ್ಷಿಣ ಕನ್ನಡ, ಕೋಲಾರ,ಹಾಸನ, ಹಾವೇರಿ, ಉಡುಪಿ ಜಿಲ್ಲೆ 7, ಚಿಕ್ಕಬಳ್ಳಾಪುರ ಜಿಲ್ಲೆ 6, ಚಿಕ್ಕಮಗಳೂರು, ಗದಗ, ಕೊಡಗು ಜಿಲ್ಲೆ 5, ಚಾಮರಾಜನಗರ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆ 4, ಚಿತ್ರದುರ್ಗ, ರಾಮನಗರ ಜಿಲ್ಲೆ 2, ಬಾಗಲಕೋಟೆ, ದಾವಣಗೆರೆ, ಯಾದಗಿರಿ ಜಿಲ್ಲೆಗಳಲ್ಲಿ ತಲಾ ಓರ್ವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Karnataka Lockdown Extension: ಕರ್ನಾಟಕದಲ್ಲಿ ಜೂನ್​ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್​ಡೌನ್ ವಿಸ್ತರಣೆ; ಸಿಎಂ ಯಡಿಯೂರಪ್ಪ ಘೋಷಣೆ

1 ಸಾವಿರ ಅನಾಥ ಶವಗಳ ಅಸ್ಥಿಯ ಗೌರವಯುತ ವಿಸರ್ಜನೆ ಮಾಡಲಿದೆ ಕರ್ನಾಟಕ ಸರ್ಕಾರ

(Karnataka Covid Update 32218 new cases in state 9591 in Bengaluru today)

Published On - 6:52 pm, Fri, 21 May 21