Crime News: ವೀಕೆಂಡ್ ಎಣ್ಣೆ ಪಾರ್ಟಿಗಾಗಿ ಸರಗಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್, ಆರೋಪಿಗಳಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

| Updated By: ಆಯೇಷಾ ಬಾನು

Updated on: Jul 29, 2022 | 8:59 PM

ಬೆಂಗಳೂರು: ಅಂತಾರಾಜ್ಯ ಕುಖ್ಯಾತ ದ್ವಿಚಕ್ರ ವಾಹನ ಕಳ್ಳ ಪ್ರಭುನನ್ನು ಬೆಂಗಳೂರಿನ ವಿಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ತಮಿಳುನಾಡು ಮೂಲದ ಆರೋಪಿ ಪ್ರಭು ತಮಿಳುನಾಡು, ಆಂಧ್ರ, ಕರ್ನಾಟಕದಲ್ಲಿ ಕಳ್ಳತನ ಮಾಡುತ್ತಿದ್ದ.

Crime News: ವೀಕೆಂಡ್ ಎಣ್ಣೆ ಪಾರ್ಟಿಗಾಗಿ ಸರಗಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್, ಆರೋಪಿಗಳಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ವೀಕೆಂಡ್ ಎಣ್ಣೆ ಪಾರ್ಟಿಗಾಗಿ ಸರಗಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್
Follow us on

ನೆಲಮಂಗಲ: ವೀಕೆಂಡ್ ಎಣ್ಣೆ ಪಾರ್ಟಿಗಾಗಿ ಸರಗಳ್ಳತನ ಮಾಡುತ್ತಿದ್ದ ಮೂವರನ್ನು ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಂಜಿತ್ ಕುಮಾರ್, ಜಯಚಂದ್ರ, ಕೃಷ್ಣಮೂರ್ತಿ ಬಂಧಿತ ಆರೋಪಿಗಳು. ಬಂಧಿತರಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್, ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಜಪ್ತಿ ಮಾಡಲಾಗಿದೆ. ಹಾಗೂ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂತಾರಾಜ್ಯ ಕುಖ್ಯಾತ ದ್ವಿಚಕ್ರ ವಾಹನ ಕಳ್ಳ ಅರೆಸ್ಟ್

ಬೆಂಗಳೂರು: ಅಂತಾರಾಜ್ಯ ಕುಖ್ಯಾತ ದ್ವಿಚಕ್ರ ವಾಹನ ಕಳ್ಳ ಪ್ರಭುನನ್ನು ಬೆಂಗಳೂರಿನ ವಿಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ತಮಿಳುನಾಡು ಮೂಲದ ಆರೋಪಿ ಪ್ರಭು ತಮಿಳುನಾಡು, ಆಂಧ್ರ, ಕರ್ನಾಟಕದಲ್ಲಿ ಕಳ್ಳತನ ಮಾಡುತ್ತಿದ್ದ.

ಬೆಂಗಳೂರಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಮುಂಭಾಗ ಆರೋಪಿ ಬೈಕ್ ಕದಿಯುತ್ತಿದ್ದ. ಈ ವೇಳೆ ಪೊಲೀಸರು ಕಳ್ಳನನ್ನು ಬಂಧಿಸಿ 7 ಲಕ್ಷ ರೂ. ಮೌಲ್ಯದ 9 ಬೈಕ್ ಜಪ್ತಿ ಮಾಡಿದ್ದಾರೆ. ಆರೋಪಿ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 9 ಪ್ರಕರಣ ದಾಖಲಾಗಿದೆ.

ವ್ಯಾಪಾರದ ಸೋಗಿನಲ್ಲಿ ಸರಗಳ್ಳತನ

ದೊಡ್ಡಬಳ್ಳಾಪುರದ ತಿಮ್ಮಸಂದ್ರ ಗ್ರಾಮದಲ್ಲಿ ಬ್ಲಾಕ್ ಪಲ್ಸರ್ ನಲ್ಲಿ ಬಂದು ವ್ಯಾಪಾರದ ಸೋಗಿನಲ್ಲಿ ಸರಗಳ್ಳತನ ಮಾಡಿರುವ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಗಡಿಯಲ್ಲಿ 50 ರೂಪಾಯಿ ವ್ಯಾಪಾರ ಮಾಡಿ ಮಹಿಳೆಯನ್ನ ಯಾಮಾರಿಸಿ ನಂತರ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಹಾಡ ಹಗಲೇ ಘಟನೆ ನಡೆದಿದ್ದು ಜನ ಹೆದರಿದ್ದಾರೆ.

ಚಾಲಕನಿಗೆ ಮಚ್ಚು ತೋರಿಸಿ ಹಣ ದರೋಡೆ, ನಾಲ್ವರು ಅರೆಸ್ಟ್

ಕೊಪ್ಪಳ: ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಮತ್ತು ದಾಸನಾಳ ಗ್ರಾಮದ ಬಳಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಲಾರಿ ಚಾಲಕರನ್ನು ಮಚ್ಚು ತೋರಿಸಿ ಹಣ ದರೋಡೆ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಟ್ರಯ್ಯ, ಹಿರೇಮಠ, ಬಸವರಾಜ್ ಲಿಂಗಪ್ಪ, ಕೃಷ್ಣಾ ಹಾಗೂ ಮಧಸೂಧನ್ ಬಂಧಿತ ಆರೋಪಿಗಳು. ಬಂಧಿತರಿಂದ ಆಟೋ, ಮೊಬೈಲ್, ಎರಡು ಮಚ್ಚು ವಶಕ್ಕೆ ಪಡೆಯಲಾಗಿದೆ. ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 8:59 pm, Fri, 29 July 22