Karnataka Dam Water Level: ಸೆ.01ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

|

Updated on: Sep 01, 2023 | 3:12 PM

ಕರ್ನಾಟಕದ ಜಲಾಶಯಗಳ ಸೆಪ್ಟೆಂಬರ್​​​ 01ರ ನೀರಿನ ಮಟ್ಟ: ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಎಷ್ಟಿದೆ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dam Water Level: ಸೆ.01ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ಹೇಮಾವತಿ ಜಲಾಶಯ
Follow us on

ಜೂನ್​​ ಕೊನೆವಾರ ಮತ್ತು ಜುಲೈ ಮೊದಲೆರಡು ವಾರ ರಾಜ್ಯದಲ್ಲಿ ಭಾರಿ ಮಳೆಯಾಗಿತ್ತು (Karnataka Rain). ಇದಾದ ನಂತರ ಮಳೆರಾಯ ಮಾಯವಾಗಿದ್ದು, ಭರದ ಛಾಯೆ ಆವರಿಸಿದೆ. ಪ್ರಸ್ತುತ ರಾಜ್ಯದಲ್ಲಿ 130 ತಾಲೂಕುಗಳಲ್ಲಿ ಮಳೆಯಾಗದ ಬರಗಾಲ ಆವರಿಸಿದೆ. ಈ ನಡುವೆ ಕಳೆದ ಎರಡನ್ಮೂರು ದಿನಗಳಿಂದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಾಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ.  ಹಾಗಾದರೆ ಸೆಪ್ಟೆಂಬರ್​​​ 01 ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್​​) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.6 123.08 121.60 123.08 0 1793
ತುಂಗಭದ್ರಾ ಜಲಾಶಯ (Tungabhadra Dam) 497.71 105.79 77.01 103.34 261 9475
ಮಲಪ್ರಭಾ ಜಲಾಶಯ (Malaprabha Dam) 633.80 37.73 22.51 37.17 0 2194
ಕೆ.ಆರ್.ಎಸ್ (KRS Dam) 38.04 49.45 23.57 48.23 1610 7329
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 70.16 135.81 2273 7443
ಕಬಿನಿ ಜಲಾಶಯ (Kabini Dam) 696.13 19.52 13.65 18.75 2038 2000
ಭದ್ರಾ ಜಲಾಶಯ (Bhadra Dam) 657.73 71.54 46.94 70.51 351 3222
ಘಟಪ್ರಭಾ ಜಲಾಶಯ (Ghataprabha Dam) 662.91 51.00 41.06 51.00 996 1131
ಹೇಮಾವತಿ ಜಲಾಶಯ (Hemavathi Dam) 890.58 37.10 24.84 37.06 805 5750
ವರಾಹಿ ಜಲಾಶಯ (Varahi Dam) 594.36 31.10 9.80 21.26 80 342
ಹಾರಂಗಿ ಜಲಾಶಯ (Harangi Dam)​​ 871.38 8.50 7.57 7.79 326 1700
ಸೂಫಾ (Supa Dam) 564.00 145.33 78.11 92.51 1926 5403

ನಿನ್ನೆ (ಆ.31) ಸಂಜೆ ಬೆಂಗಳೂರು, ಮಂಡ್ಯ, ಕೋಲಾರ, ರಾಮನಗರ, ಗದಗ-ಬೆಟಗೇರಿ ಚಿಕ್ಕಮಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದ ಬಿಸಿಲಿನಿಂದ ಬೆಂದಿದ್ದ ಜನರಿಗೆ ವರುಣರಾಯ ತಂಪೆರದಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:51 am, Fri, 1 September 23