ಕೊರೊನಾ ತಂದಿಟ್ಟ ಸಂಕಷ್ಟ: ಸಪ್ತಪದಿಗೆ ಈ 17 ರೂಲ್ಸ್ ಫಾಲೋ ಮಾಡ್ಲೇಬೇಕು!

|

Updated on: May 15, 2020 | 7:23 PM

ಬೆಂಗಳೂರು: ಕೊವಿಡ್ ಕಂಟಕಕ್ಕೆ ಸಿಲುಕಿ ಇಡೀ ದೇಶಕ್ಕೆ ದೇಶವೇ ತತ್ತರಿಸಿ ಹೋಗಿದೆ. ಮಹಾಮಾರಿ ಕೊರೊನಾ ಕ್ರಿಮಿ ಕಂಡಕಂಡವರ ದೇಹ ಹೊಕ್ಕುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು. ಹಾಗಾಗಿ ಲಾಕ್​ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮದುವೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ 7 ಹೆಜ್ಜೆ ಇಡಲು ಈ 17 ರೂಲ್ಸ್​ಗಳನ್ನ ಫಾಲೋ ಮಾಡ್ಲೇಬೇಕಾಗಿದೆ. ಸಪ್ತಪದಿ ತುಳಿಯಲು 17 ಮಾರ್ಗಸೂಚಿಗಳು: See more   1. ಸ್ಥಳೀಯ ಆಡಳಿತದ ಅನುಮತಿ, ಟ್ರಾವೆಲ್ ಪಾಸ್ […]

ಕೊರೊನಾ ತಂದಿಟ್ಟ ಸಂಕಷ್ಟ: ಸಪ್ತಪದಿಗೆ ಈ 17 ರೂಲ್ಸ್ ಫಾಲೋ ಮಾಡ್ಲೇಬೇಕು!
Follow us on

ಬೆಂಗಳೂರು: ಕೊವಿಡ್ ಕಂಟಕಕ್ಕೆ ಸಿಲುಕಿ ಇಡೀ ದೇಶಕ್ಕೆ ದೇಶವೇ ತತ್ತರಿಸಿ ಹೋಗಿದೆ. ಮಹಾಮಾರಿ ಕೊರೊನಾ ಕ್ರಿಮಿ ಕಂಡಕಂಡವರ ದೇಹ ಹೊಕ್ಕುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು. ಹಾಗಾಗಿ ಲಾಕ್​ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮದುವೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ 7 ಹೆಜ್ಜೆ ಇಡಲು ಈ 17 ರೂಲ್ಸ್​ಗಳನ್ನ ಫಾಲೋ ಮಾಡ್ಲೇಬೇಕಾಗಿದೆ.

ಸಪ್ತಪದಿ ತುಳಿಯಲು 17 ಮಾರ್ಗಸೂಚಿಗಳು:

 

1. ಸ್ಥಳೀಯ ಆಡಳಿತದ ಅನುಮತಿ, ಟ್ರಾವೆಲ್ ಪಾಸ್ ಕಡ್ಡಾಯ
2. ಮದುವೆಯಲ್ಲಿ ಅತಿಥಿಗಳು 50 ಜನರನ್ನು ಮೀರುವಂತಿಲ್ಲ
3. ಸ್ಥಳದಲ್ಲಿ ಉತ್ತಮ ಸ್ವಾಭಾವಿಕ ವೆಂಟಿಲೇಷನ್ ಇರಬೇಕು
4. ಕಂಟೇನ್ಮೆಂಟ್‌ ಜೋನ್‌ನಲ್ಲಿರುವವರು ಪಾಲ್ಗೊಳ್ಳುವಂತಿಲ್ಲ
5. 65 ವರ್ಷ ಮೇಲ್ಪಟ್ಟವರು, 10 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತಿಲ್ಲ
6. ಪ್ರವೇಶ ಸ್ಥಳ, ಅಗತ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ಇರಬೇಕು
7. ಮದುವೆಗೆ ಬರುವವರೆಲ್ಲರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
8. ಥರ್ಮಲ್ ಸ್ಕ್ರೀನಿಂಗ್ ವೇಳೆ ಜ್ವರ, ಶೀತ, ಕಫ, ಉಸಿರಾಟದ ತೊಂದರೆ ಕಂಡುಬಂದಲ್ಲಿ ಪಾಲ್ಗೊಳ್ಳುವಂತಿಲ್ಲ
9. ಮದುವೆಯಲ್ಲಿ ಪಾಲ್ಗೊಳ್ಳುವವರು ಮಾಸ್ಕ್‌ ಧರಿಸಿರಲೇಬೇಕು
10. ಎಲ್ಲರೂ ಒಂದು ಮೀಟರ್ ಸಾಮಾಜಿಕ ಅಂತರ ಕಾಪಾಡಬೇಕು
11. ವಾಷ್‌ ರೂಂ‌ನಲ್ಲಿ ಹ್ಯಾಂಡ್‌ ವಾಷ್‌, ನೀರು, ಸೋಪಿರಬೇಕು
12. ಮದ್ಯ, ಗುಟ್ಕಾ, ಪಾನ್, ತಂಬಾಕು ಸೇವನೆಗೆ ಅವಕಾಶ ಇಲ್ಲ
13. ವಿವಾಹ ಸ್ಥಳ ಹೈಜೆನಿಕ್ ಆಗಿರಬೇಕು, ಶುಚಿಯಾಗಿರಬೇಕು
14. ಸಾರ್ವಜನಿಕ ಸ್ಥಳದಲ್ಲಿ ಯಾರೂ ಸಹ ಉಗಿಯುವಂತಿಲ್ಲ
15. ವ್ಯವಸ್ಥೆ, ಸಮನ್ವಯ ಕೆಲಸ ನೋಡಲ್ ವ್ಯಕ್ತಿ ನಿರ್ವಹಿಸಬೇಕು
16. ಮದುವೆಯಲ್ಲಿ ಪಾಲ್ಗೊಳ್ಳುವವರ ಪಟ್ಟಿ, ಫೋನ್ ನಂಬರ್ ಒದಗಿಸಬೇಕು
17. ಎಲ್ಲಾ ಅತಿಥಿಗಳು ಆರೋಗ್ಯ ಸೇತು ಆ್ಯಪ್‌ ಹೊಂದಿರಬೇಕು

Published On - 3:16 pm, Fri, 15 May 20