ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್​: 1 ರಿಂದ 10ನೇ ತರಗತಿವರೆಗೆ ಪಠ್ಯ ಕಡಿತಗೊಳಿಸಿ ಸರ್ಕಾರದಿಂದ ಆದೇಶ

ಕರ್ನಾಟಕ ಪಠ್ಯ ಪುಸ್ತಕ ಸಂಘದಿಂದ ಸಿಲೆಬಸ್​ ಕಡಿತ ಮಾಡಿರುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಸೆ.1ರಿಂದ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬೋಧನಾ ಅವಧಿಯನ್ನು ಕೂಡ 120 ಗಂಟೆಗೆ ಇಳಿಕೆ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್​: 1 ರಿಂದ 10ನೇ ತರಗತಿವರೆಗೆ ಪಠ್ಯ ಕಡಿತಗೊಳಿಸಿ ಸರ್ಕಾರದಿಂದ ಆದೇಶ
ಸಾಂದರ್ಭಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Dec 28, 2020 | 6:25 PM

ಬೆಂಗಳೂರು: ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿ ಬಾರಿಯಂತೆ ಶಾಲೆ ನಡೆದಿಲ್ಲ. ಹೀಗಾಗಿ, ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯ ಕಡಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಪಠ್ಯ ಪುಸ್ತಕ ಸಂಘದಿಂದ ಸಿಲೆಬಸ್​ ಕಡಿತ ಮಾಡಿರುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಸೆ. 1ರಿಂದ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬೋಧನಾ ಅವಧಿಯನ್ನು ಕೂಡ 120 ಗಂಟೆಗೆ ಇಳಿಕೆ ಮಾಡಲಾಗಿದೆ.

ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಈವರೆಗೆ ಶಾಲೆಗಳು ಪ್ರಾರಂಭವಾಗಿಲ್ಲ. ಎಲ್ಲ ಕಡೆಗಳಲ್ಲೂ ಆನ್​ಲೈನ್​ ಮೂಲಕವೇ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಅರಿತ ಶಿಕ್ಷಣ ಇಲಾಖೆ ಪ್ರತಿ ವಿಷಯಗಳಲ್ಲೂ ಕೆಲ ಪಠ್ಯ ಕಡಿತಗೊಳಿಸಿದೆ. ಕೆಲ ಪ್ರಮುಖ ಪಠ್ಯವನ್ನು ಮಾತ್ರ ಬೋಧಿಸಲು ಸೂಚನೆ ನೀಡಲಾಗಿದೆ.

ಕೊರೊನಾ ಇರುವ ಕಾರಣ ಮಕ್ಕಳು ಶಾಲೆಗೆ ತೆರಳದೇ ಆನ್​​ಲೈನ್​ ಮೂಲಕವೇ ಶಿಕ್ಷಣ ಪಡೆಯತ್ತಿದ್ದಾರೆ. ಆನ್​ಲೈನ್​ನಲ್ಲಿ ಅಂದುಕೊಂಡ ಮಟ್ಟಿಗೆ  ಮಾರ್ಗದರ್ಶನ ಪಡೆಯಲಾಗುತ್ತಿಲ್ಲ ಎನ್ನುವುದು ಕೆಲ ವಿದ್ಯಾರ್ಥಿಗಳ ಆರೋಪವಾಗಿತ್ತು. ಅಲ್ಲದೆ, ಎಲ್ಲ ಸಿಲೆಬಸ್​ ಪೂರ್ಣಗೊಳಿಸೋದು ಅಸಾಧ್ಯ ಎನ್ನುವ ಮಾತನ್ನು ಶಿಕ್ಷಕರು ಹೇಳಿದ್ದರು. ಹೀಗಾಗಿ ಪಠ್ಯ ಕಡಿತ ವಿಚಾರ ವಿದ್ಯಾರ್ಥಿಗಳಿಗೆ ದೊಡ್ಡ ರಿಲೀಫ್​ ನೀಡಿದೆ.

 

CBSE ಬೋರ್ಡ್​ ಪರೀಕ್ಷಾ ವೇಳಾಪಟ್ಟಿ ಡಿಸೆಂಬರ್ 31ಕ್ಕೆ ಪ್ರಕಟ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us