ಕೊವಿಡ್ ಲಸಿಕೆ ಹಂಚಿಕೆ: ಸರ್ಕಾರದ ಆದ್ಯತೆ ಏನು? ಸಮಗ್ರ ಮಾಹಿತಿ ನೀಡಿದ ಸಚಿವ ಡಾ. ಸುಧಾಕರ್

| Updated By: KUSHAL V

Updated on: Oct 24, 2020 | 11:11 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕ್ರಿಮಿ ಹಾವು ಏಣಿ ಆಟ ಆಡುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗಿ ಇನ್ನೇನು ಕೊರೊನಾ ಹಾವಳಿ ಕಡಿಮೆಯಾಯಿತು ಅಂದುಕೊಳ್ಳುವಷ್ಟರಲ್ಲೇ ಮತ್ತೆ ಧುತ್ತನೆ ಕಾಣಿಸಿಬಿಡುತ್ತಿದೆ ಈ ಕ್ರಿಮಿ. ಇದು ಸರ್ಕಾರಕ್ಕೂ ತಲೆಬೇನೆಯಾಗಿದೆ. ಜನಾನೂ ಹೈರಾಣಗೊಂಡಿದ್ದಾರೆ. ಈ ಮಧ್ಯೆ ಕೊವಿಡ್ ಉಸ್ತುವಾರಿಯನ್ನು ಏಕಾಂಗಿಯಾಗಿ ಒಬ್ಬರ ಹೆಗಲಿಗೆ ಜವಾಬ್ದಾರಿ ವಹಿಸಲಾಗಿದ್ದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​ ಕೊರೊನಾ ಕ್ರಿಮಿಯನ್ನು ಕಟ್ಟಿಹಾಕಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಆದಷ್ಟು ತ್ವರಿತವಾಗಿ ಕೊವಿಡ್ ಲಸಿಕೆ ಒದಗಿಸುವುದು […]

ಕೊವಿಡ್ ಲಸಿಕೆ ಹಂಚಿಕೆ: ಸರ್ಕಾರದ ಆದ್ಯತೆ ಏನು? ಸಮಗ್ರ ಮಾಹಿತಿ ನೀಡಿದ ಸಚಿವ ಡಾ. ಸುಧಾಕರ್
ಡಾ. ಕೆ ಸುಧಾಕರ್​
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕ್ರಿಮಿ ಹಾವು ಏಣಿ ಆಟ ಆಡುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗಿ ಇನ್ನೇನು ಕೊರೊನಾ ಹಾವಳಿ ಕಡಿಮೆಯಾಯಿತು ಅಂದುಕೊಳ್ಳುವಷ್ಟರಲ್ಲೇ ಮತ್ತೆ ಧುತ್ತನೆ ಕಾಣಿಸಿಬಿಡುತ್ತಿದೆ ಈ ಕ್ರಿಮಿ. ಇದು ಸರ್ಕಾರಕ್ಕೂ ತಲೆಬೇನೆಯಾಗಿದೆ. ಜನಾನೂ ಹೈರಾಣಗೊಂಡಿದ್ದಾರೆ.

ಈ ಮಧ್ಯೆ ಕೊವಿಡ್ ಉಸ್ತುವಾರಿಯನ್ನು ಏಕಾಂಗಿಯಾಗಿ ಒಬ್ಬರ ಹೆಗಲಿಗೆ ಜವಾಬ್ದಾರಿ ವಹಿಸಲಾಗಿದ್ದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​ ಕೊರೊನಾ ಕ್ರಿಮಿಯನ್ನು ಕಟ್ಟಿಹಾಕಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಆದಷ್ಟು ತ್ವರಿತವಾಗಿ ಕೊವಿಡ್ ಲಸಿಕೆ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಆದರೆ ಪ್ರಥಮ ಹಂತದಲ್ಲಿ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರ ಸೇರಿದಂತೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದು ಆದ್ಯತೆಯಾಗಿದೆ. ಲಸಿಕೆ ಒದಗಿಸಲು ಈವರೆಗೂ ನಡೆಸಲಾಗಿರುವ ಪೂರ್ವಸಿದ್ಧತೆಗಳ ಮಾಹಿತಿಯನ್ನು ಸಚಿವ ಡಾ. ಸುಧಾಕರ್ ತಮ್ಮ​ ಟ್ವಿಟ್ಟರ್​ ಖಾತೆ ಮೂಲಕ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.