ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಸಹಿತ ಚಂಡೀಗಡ, ರಾಜಸ್ಥಾನಗಳಲ್ಲಿ ಕೊವಿಡ್-19 ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಜ್ಯದ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ ಇಂದು (ಮಾರ್ಚ್ 24) ಹೊಸ ನಿಯಮಾವಳಿಗಳ ಅಧಿಸೂಚನೆ ಹೊರಡಿಸಿದೆ.
ನಿಯಮಾವಳಿಗಳು ಏನೇನು? ಶಿಕ್ಷೆ ಏನು?
– ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವುದು ಅವಶ್ಯವಾಗಿದೆ. ತಪ್ಪಿದಲ್ಲಿ ಬಿಬಿಎಂಪಿ ಪ್ರದೇಶದಲ್ಲಿ ₹ 250, ಉಳಿದ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶಗಳಲ್ಲಿ ₹ 250 ಮತ್ತು ಇತರ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ₹ 100 ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.
– ಜನರೆಲ್ಲರೂ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವಂತೆ ನೋಡಿಕೊಳ್ಳುವುದು ಆಯಾ ಸ್ಥಳಗಳ ಮಾಲೀಕರ ಕರ್ತವ್ಯವಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಜನರಿಗೆ ಅನುಮತಿ?
– ಮದುವೆ ಕಾರ್ಯಕ್ರಮಕ್ಕೆ ತೆರೆದ ಪ್ರದೇಶವಾದರೆ 500 ಜನ ಸೇರಬಹುದು. ಕ್ಲೋಸ್ಡ್ ಹಾಲ್ ಅಂತಾದರೆ ಕೇವಲ 200 ಜನ ಸೇರಲು ಅನುಮತಿ ನೀಡಲಾಗಿದೆ.
– ಬರ್ತ್ಡೇ ಹಾಗೂ ಇತರ ಸಮಾರಂಭಗಳಿಗೆ ತೆರೆದ ಸಭಾಂಗಣದಲ್ಲಿ 100 ಜನ ಸೇರಬಹುದು. ಕ್ಲೋಸ್ಡ್ ಹಾಲ್ ಅಂತಾದರೆ ಕೇವಲ 50 ಜನರು ಸೇರಬಹುದು.
– ಮರಣೋತ್ತರ ಕಾರ್ಯಕ್ರಮಗಳಿಗೆ ತೆರೆದ ಪ್ರದೇಶದಲ್ಲಿ 100 ಹಾಗೂ ಮುಚ್ಚಿದ ಸಭಾಂಗಣದಲ್ಲಿ 50 ಜನ ಸೇರಬಹುದಾಗಿದೆ.
– ಶವ ಸಂಸ್ಕಾರ ನಡೆಯುವಲ್ಲಿ 50 ಜನ ಭಾಗವಹಿಸಲು ಅವಕಾಶವಿದೆ.
– ಉಳಿದ ಸಮಾರಂಭಗಳಲ್ಲಿ ಕೇವಲ 100 ಜನ ಸೇರಬಹುದಾಗಿದೆ.
– ತೆರೆದ ಪ್ರದೇಶದಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಲ್ಲಿ 500 ಜನ ಭಾಗವಹಿಸಬಹುದು.
– ರಾಜಕೀಯ ಸಮಾರಂಭ, ಸಮಾವೇಶಗಳಲ್ಲಿ ಕೂಡ ತೆರೆದ ಪ್ರದೇಶದಲ್ಲಾದರೆ 500 ಜನ ಸೇರಬಹುದಾಗಿದೆ.
– ಈ ನಿಯಮಾವಳಿಗಳ ಅನುಷ್ಠಾನಕ್ಕೆ ಆಯೋಜಕರು ಅಥವಾ ಸಂಬಂಧಪಟ್ಟ ಸ್ಥಳದ ಮಾಲೀಕರು ಹೊಣೆಗಾರರಾಗಿರುತ್ತಾರೆ.
– ತಪ್ಪಿದರೆ 5,000 ಅಥವಾ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Bangalore Covid-19 Case Updates: ಜುಲೈವರೆಗೂ ಕೊರೊನಾ ಸೋಂಕು ಕಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ತಜ್ಞರು
ಇದನ್ನೂ ಓದಿ: COVID-19 MHA Guidelines: ಕೊರೊನಾ ಎರಡನೇ ಅಲೆ ತಡೆಯಲು ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ
Published On - 4:26 pm, Wed, 24 March 21