ಸಚಿವ ಡಿ.ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Minister D Sudhakar Case: ಸಚಿವ ಡಿ.ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಇದರಿಂದ ಸಚಿವ ಡಿ.ಸುಧಾಕರ್ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಸಚಿವ ಡಿ.ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
ಸಚಿವ ಡಿ.ಸುಧಾಕರ್
Edited By:

Updated on: Sep 15, 2023 | 1:17 PM

ಬೆಂಗಳೂರು, (ಸೆಪ್ಟೆಂಬರ್ 15): ದೌರ್ಜನ್ಯ ಕೇಸ್​ಗೆ ಸಂಬಂಧಿಸಿದಂತೆ ಸಚಿವ ಡಿ.ಸುಧಾಕರ್(D Sudhakar) ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. ಇದರಿಂದ ಸಚಿವ ಡಿ.ಸುಧಾಕರ್ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಸುಬ್ಬಮ್ಮ ಎಂಬುವರು ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ ಎಸ್​ಸಿ, ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸುಧಾಕರ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣ ರದ್ದು ಕೋರಿ ಸುಧಾಕರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು (ಸೆಪ್ಟೆಂಬರ್ 15) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಅಲ್ಲದೇ ಈ ಬಗ್ಗೆ ಸರ್ಕಾರಕ್ಕೆ ತುರ್ತು ನೋಟಿಸ್ ನೀಡಿ ವಿಚಾರಣೆಯನ್ನು ಅಕ್ಟೋಬರ್​3ಕ್ಕೆ ಮುಂದೂಡಿದೆ.

ಕೋರ್ಟ್​ ಆದೇಶದ ಬಗ್ಗೆ ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾಂಖಿಕ & ಯೋಜನೆ ಸಚಿವ ಡಿ.ಸುಧಾಕರ್, ನನ್ನ ವಿರುದ್ಧದ ಪ್ರಕರಣ ರದ್ದತಿಗೆ ಅರ್ಜಿ ಸಲ್ಲಿಸಿದ್ದೆವು. ನನ್ನ ವಿರುದ್ಧದ ಪ್ರಕರಣಕ್ಕೆ ಇಂದು ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದ್ದು, ನಮ್ಮ ವಕೀಲರಿಂದ ಈಗ ಮಾಹಿತಿ ಸಿಕ್ಕಿದೆ. ತಡೆಯಾಜ್ಞೆಯ ದಾಖಲೆ ನಮ್ಮ ವಕೀಲರ ಬಳಿ ಇದೆ ಎಂದರು.

ಇದನ್ನೂ ಓದಿ: ಭೂ ಕಬಳಿಕೆ ಮಾಡಿಲ್ಲ: ತಮ್ಮ ವಿರುದ್ಧದ ಆರೋಪಕ್ಕೆ ಸಚಿವ ಡಿ.ಸುಧಾಕರ್ ಸ್ಪಷ್ಟನೆ

ಏನಿದು ಪ್ರಕರಣ?

ಡಿ. ಸುಧಾಕರ್​ ಪಾಲುದಾರರಾಗಿರುವ ಸೆವೆನ್ ಹಿಲ್ಸ್ ಡೆವಲಪರ್ಸ್ ಅಂಡ್​ ಟ್ರೇಡರ್ಸ್ ರಿಯಲ್​ ಎಸ್ಟೆಟ್​ ಕಂಪನಿ 2003 ರಲ್ಲಿ ಸುಬ್ಬಮ್ಮ ಎಂಬುವರಿಂದ ಯಲಹಂಕದ ಸರ್ವೆ ನಂಬರ್​ 108/1ರ ಜಮೀನನ್ನು ಕೊಂಡುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಜಮೀನಿಗೆ ಇದ್ದ ಬೆಲೆಯನ್ನು ಸುಬ್ಬಮ್ಮ ಅವರಿಗೆ ಕಂಪನಿ ನೀಡುತ್ತೆ. ಮತ್ತು ಕ್ರಯಪತ್ರ ಮಾಡಿಕೊಂಡಿದೆ. ಆದರೆ ಇದೀಗ ಸುಬ್ಬಮ್ಮ ಅವರು ಅಂದು ಮಾರಿದ ಜಮೀನಿಗೆ ಇಂದಿನ ಬೆಲೆಗೆ ಹಣ ನೀಡಿ ಎಂದು ಡಿ. ಸುಧಾಕರ್​ ಅವರ ಬಳಿ ಬಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ 11 ಜನರು ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುಬ್ಬಮ್ಮ ಮತ್ತು ಡಿ.ಸುಧಾಕರ್​ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ನಂತರ ಸುಬ್ಬಮ್ಮ ಅವರು ಸೆ.10 ರಂದು ಬೆಂಗಳೂರಿನ ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸೆವನ್ ಹಿಲ್ಸ್ ಅಂಡ್ ಟ್ರೇಡರ್ಸ್​​​​ ಪಾಲುದಾರರಾದ ​ಸುಧಾಕರ್​ ಸೇರಿದಂತೆ ಮೂವರು ಮೋಸದಿಂದ ಜಮೀನು ಕಬಳಿಸಿದ್ದಾರೆ. ಯಲಹಂಕದ ಸರ್ವೆ ನಂಬರ್​ 108/1ರ ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಹೀಗಿದ್ದರೂ ಅವರ 40 ಮಂದಿ ಸಹಚರರು ಬಂದು ನನ್ನ ಪುತ್ರಿ ಆಶಾ ಮೇಲೆ ಮಾಡಿದ್ದಾರೆ. ಪ್ರಶ್ನಿಸದಾಗ ಜಾತಿ ನಿಂದನೆ ಮಾಡಲಾಗಿದೆ. ಜೆಸಿಬಿ ಯಂತ್ರದಿಂದ ಕಟ್ಟಡ, ಸೀಟಿನ ಶೆಡ್​​, ಕಾಂಪೌಂಡ್​ ತೆರವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟ ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 12:55 pm, Fri, 15 September 23