ಮಾಂಸಪ್ರಿಯರಿಗೆ‌ ಶಾಕ್: ಚಿಕನ್, ಮಟನ್, ಮೊಟ್ಟೆಗಳ‌ ಬೆಲೆ‌ ಏರಿಕೆ‌!

ಇಷ್ಟು ದಿನ ಬೇಸಿಗೆ ಇತ್ತು ಮೊಟ್ಟೆ, ಮಾಂಸ ತಿನ್ನುವುದನ್ನು ಜನರು ಕಡಿಮೆ ಮಾಡಿದ್ದರು. ಇದೀಗ ಮಳೆಗಾಲ ಆರಂಭವಾಗಿದ್ದು, ದೇಹವನ್ನು ಬೆಚ್ಚಗೆ ಮಾಡಿಕೊಳ್ಳೊಣ ಅಂತ ಮಾಂಸ ಖರೀದಿಸಿ ರುಚಿಕರವಾದ ಆಹಾರ ತಯಾರಿಸಿ, ಸವಿಯೋಣ ಎಂದುಕೊಂಡಿರುವ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್​​ ನೀಡಿದೆ.

ಮಾಂಸಪ್ರಿಯರಿಗೆ‌ ಶಾಕ್: ಚಿಕನ್, ಮಟನ್, ಮೊಟ್ಟೆಗಳ‌ ಬೆಲೆ‌ ಏರಿಕೆ‌!
ಸಾಂದರ್ಭಿಕ ಚಿತ್ರ
Poornima Agali Nagaraj Edited By: ವಿವೇಕ ಬಿರಾದಾರ

Updated on: May 20, 2024 | 7:55 AM

ಬೆಂಗಳೂರು, ಮೇ 20: ಇಷ್ಟು ದಿನ ಬೇಸಿಗೆ ಇತ್ತು ಮೊಟ್ಟೆ, ಮಾಂಸ (Meat) ತಿನ್ನುವುದನ್ನು ಜನರು ಕಡಿಮೆ ಮಾಡಿದ್ದರು. ಇದೀಗ ಮಳೆಗಾಲ (Rain) ಆರಂಭವಾಗುತ್ತಿದ್ದು, ದೇಹವನ್ನು ಬೆಚ್ಚಗೆ ಮಾಡಿಕೊಳ್ಳೊಣ ಅಂತ ಮಾಂಸ ಖರೀದಿಸಿ ರುಚಿಕರವಾದ ಆಹಾರ ತಯಾರಿಸಿ, ಸವಿಯೋಣ ಎಂದುಕೊಂಡಿರುವ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್​​ ನೀಡಿದೆ. ಚಿಕನ್ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕೇಳಿ ಗ್ರಾಹಕರು ದಂಗಾಗಿದ್ದಾರೆ.

ಇಷ್ಟು ದಿನ ತರಕಾರಿಗಳ ಬೆಲೆ‌ ಏರಿಕೆಯಾಗಿತ್ತು. ಇದೀಗ ‌ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿ ಚಿಕನ್​ಗೆ 380 ರೂ ಆಗಿದೆ. ಕೆಜಿ ಮಟನ್​ಗೆ 800 ರೂ. ಆಗಿದ್ದು, ಮೊಟ್ಟೆಗೆ 8 ರಿಂದ 7 ರೂ. ನಿಗದಿ‌‌ ಮಾಡಲಾಗಿದೆ.

ಬೇಸಿಗೆ ಇದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣೆಯಾಗಿಲ್ಲ. ಇದೀಗ ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಕೋಳಿ‌‌ ಮಾಂಸದ ಪೂರೈಕೆ ಇಲ್ಲದ ಕಾರಣ ಮಾಂಸಾಹಾರ ಬೆಲೆ ಕೂಡ ಏರಿಕೆಯಾಗಿದೆ.‌ ಅಲ್ಲದೆ ಮದುವೆ ಸೀಜನ್​ನಲ್ಲಿ ಮಾಂಸಾಹಾರಕ್ಕೂ ಹೆಚ್ಚು ಬೇಡಿಕೆ ಇರುವುದರಿಂದ, ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ ಎಂದು ಮಾಂಸ ವ್ಯಾಪಾರಿ ಉಬೇದ್ ಉಲ್ಲಾ ಖಾನ್ ಹೇಳಿದ್ದಾರೆ. ‌

ಇದನ್ನೂ ಓದಿ: ಮಾಂಸದಷ್ಟೇ ದುಬಾರಿಯಾದ ತರಕಾರಿ: ಬೀನ್ಸ್​ 1ಕೆಜಿಗೆ ಬರೋಬ್ಬರಿ 250 ರೂ ಇಲ್ಲಿದೆ ದರ ವಿವರ

‌ತರಕಾರಿ ಬೆಲೆಹೆಚ್ಚಾಗಿದೆ. ಇದೀಗ ಮಾಂಸ‌ದ ಬೆಲೆಯೂ ಏರಿಕೆಯಾಗಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಮಾಂಸವನ್ನು ತಿನ್ನುವುದಾದರೂ‌ ಹೇಗೆ?. ‌ಭಾನುವಾರ ಬಂದರೆ ಸಾಕು ಮನೆಯಲ್ಲಿ ಮಾಂಸಾಹಾರ ಇರಲೇ ಬೇಕು.‌ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಟ್ಟೆಯನ್ನು ಪ್ರತಿದಿನ ಕೊಡಬೇಕಾಗುತ್ತದೆ. ಆದರೆ ಮೊಟ್ಟೆಯ ಬೆಲೆ 7 ರೂಪಾಯಿ ಆಗಿದೆ.‌ ಮಟನ್ ಬೆಲೆ ಸಾವಿರದ ಗಡಿ ತಲಪುತ್ತಿದೆ.‌ ಎಷ್ಟೇ ಬೆಲೆ ಏರಿಕೆಯಾದರು ಚಿಕನ್ ಮತ್ತು ಮಟನ್ ತಿನ್ನಲೇಬೇಕು.‌ ಹೀಗಾಗಿ‌ ಚಿಕನ್ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದೇವೆ ಅಂತ ಗ್ರಾಹಕ ನವಾಬ್ ಹೇಳಿದರು.
ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಶಾಕ್ ಆಗಿದ್ದು, ಇನ್ನೂ ಒಂದು ತಿಂಗಳು ಕಾಲ ಬೆಲೆ‌ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Published On - 7:55 am, Mon, 20 May 24

Loading...
Unable to load recommendations.
Follow Us