ಮಾಂಸದಷ್ಟೇ ದುಬಾರಿಯಾದ ತರಕಾರಿ: ಬೀನ್ಸ್ 1ಕೆಜಿಗೆ ಬರೋಬ್ಬರಿ 250 ರೂ ಇಲ್ಲಿದೆ ದರ ವಿವರ
ಬೀನ್ಸ್ ಬೆಳೆಯಲು ಹೆಚ್ಚಿನ ನೀರಿನ ಅಗತ್ಯ ಇರುತ್ತದೆ. ಆದರೆ ಸದ್ಯ ಬರ ಇರುವ ಪರಿಣಾಮ ಬೀನ್ಸ್ ಹೆಚ್ಚಿನದಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಬೀನ್ಸ್ ಬೆಲೆ ಏರಿಕೆಯಾಗಿದೆ. ಜೊತೆಗೆ ಸೊಪ್ಪು, ಮೂಲಂಗಿ, ನವಿಲುಕೋಸು, ಹೀರೆಕಾಯಿ 60 ರೂ. ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿ ಬಿಸಿಲಿನ ತಾಪಮಾನ (heatwave) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತರಕಾರಿಗಳ (vegetables) ಇಳುವರಿ ಕುಸಿತವಾಗಿದ್ದು, ಬೆಲೆ ಏರಿಕೆ ಆಗಿದೆ. ಮಾಂಸದಷ್ಟೇ ತರಕಾರಿಗಳ ಬೆಲೆ ಇದೀಗ ದುಬಾರಿ ಆಗಿದೆ. ಬೀನ್ಸ್ ಒಂದು ಕೆಜಿಗೆ ಬರೋಬ್ಬರಿ 250 ರೂ. ಆಗಿದ್ದು, ಮೂಲಕ ಚಿಕನ್ಗಿಂತ ಬೀನ್ಸ್ ಬೆಲೆ ಏರಿಕೆ ಆಗಿದೆ. ನಾಟಿ ಬೀನ್ಸ್ 220 ರೂ. ಇದ್ದರೆ, ಹುರಳಿ ಬೆಲೆ ಬರೋಬ್ಬರಿ 140 ರೂ. ಆಗಿದೆ. ಹೀಗಾಗಿ ಗ್ರಾಹಕರು ತರಕಾರಿಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುವಂತಾಗಿದೆ. ತರಕಾರಿಗಳಿಗೆ ಹೆಸರುವಾಸಿಯಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬರ ಬಂದಿರುವ ಹಿನ್ನೆಲ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ.
ಬೀನ್ಸ್ ಬೆಳೆಯಲು ಹೆಚ್ಚಿನ ನೀರಿನ ಅಗತ್ಯ ಇರುತ್ತದೆ. ಆದರೆ ಸದ್ಯ ಬರ ಇರುವ ಪರಿಣಾಮ ಬೀನ್ಸ್ ಹೆಚ್ಚಿನದಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಬೀನ್ಸ್ ಬೆಲೆ ಏರಿಕೆಯಾಗಿದೆ. ಜೊತೆಗೆ ಸೊಪ್ಪು, ಮೂಲಂಗಿ, ನವಿಲುಕೋಸು, ಹೀರೆಕಾಯಿ 60 ರೂ. ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಇದನ್ನೂ ಓದಿ: Kamaraj Road: ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಕಾಮರಾಜ್ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ
ಬಿಸಿಲಿನ ಶಾಖದಿಂದ ಭೂಮಿಯಿಂದ ಸಾಕಷ್ಟು ಶಾವನ್ನು ಹೊರಹೊಮ್ಮುತ್ತದೆ. ಹೀಗಾಗಿ ಬೆಳೆಗಳ ಇಳುವರಿ ಕಡಿಮೆ ಆಗುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೂರೈಕೆಯ ಕೊರತೆ ಹೆಚ್ಚಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಉತ್ತಮ ಮಳೆಯಾಗುವವರೆಗೆ ತರಕಾರಿಗಳ ಬೆಲೆ ಹೆಚ್ಚೇ ಇರುತ್ತದೆ ಎಂದು ಕೆ.ಆರ್.ನಗರದ ತರಕಾರಿ ವ್ಯಾಪಾರಿ ಎನ್.ಮಂಜುನಾಥ್ ರೆಡ್ಡೆ ಎನ್ನುವವರು ಹೇಳಿದ್ದಾರೆ.
ಇಂದಿನ ಹಾಗೂ ಹಿಂದಿನ ತರಕಾರಿ ಬೆಲೆ
- ನಾಟಿ ಬೀನ್ಸ್ – 250 – 300 ರೂ
- ಹುರುಳಿ – 120 -140 ರೂ
- ಊಟಿ ಕ್ಯಾರೇಟ್ – 120 – 100 ರೂ
- ಮೂಲಂಗಿ – 35- 65 ರೂ
- ಬದನೆಕಾಯಿ – 40 – 60 ರೂ
- ನಾರ್ಮಾಲ್ ಕ್ಯಾರೆಟ್ – 60 -80 ರೂ
- ಹಾಗಲಕಾಯಿ -45 – 59 ರೂ
- ಈರುಳ್ಳಿ – 25 – 33 ರೂ
- ಬೀಟ್ರೂಟ್- 40 – 45 ರೂ
- ನವಿಲುಕೋಸು – 35 – 58 ರೂ
- ಬೆಂಡೆಕಾಯಿ – 40- 60 ರೂ
- ಬೆಳ್ಳುಳ್ಳಿ – 160- 294 ರೂ
- ಆಲೂಗಡ್ಡೆ- 35- 48 ರೂ
- ಹೀರೆಕಾಯಿ – 40-69 ರೂ
- ಟೊಮೆಟೊ- 25 – 33 ರೂ
- ಮೆಣಸಿನಕಾಯಿ – 60- 80 ರೂ
- ಕೊತ್ತಂಬರಿ – 30 -20 ರೂ
- ಕ್ಯಾಪ್ಸಿಕಂ- 40- 56 ರೂ
- ನುಗ್ಗೆಕಾಯಿ (ಕೆಜಿ) – 80- 40 ರೂ
ಇದನ್ನೂ ಓದಿ: Lok Sabha Elections 2024: ಚುನಾವಣಾ ಕಾರ್ಯಕ್ಕೆ ಸರ್ಕಾರಿ, ಖಾಸಗಿ ಬಸ್ಗಳ ಬಳಕೆ: ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ
ಸಿಲಿಕಾನ್ ಸಿಟಿಯಲ್ಲಿ ತಾಪಮಾನ ಏರಿಕೆ ಆಗ್ತಾನೇ ಇದೆ. ರಾತ್ರಿ ವೇಳೆಯೂ ಉಷ್ಣಾಂಶ ಹೆಚ್ಚಿದ್ದು, ಬೇಸಿಗೆ ಜನ್ರನ್ನ ಹೈರಾಣಾಗಿಸಿದೆ. ನಗರದಲ್ಲಿ ಇನ್ನೊಂದು ವಾರ ಮಳೆಯ ದರ್ಶನವಿಲ್ಲ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 5 ದಿನ ಬಿಸಿಗಾಳಿ ಬೀಸಲಿದ್ದು, ತಾಪಮಾನ 2ರಿಂದ 3 ಡಿಗ್ರಿ ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.