Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Elections 2024: ಚುನಾವಣಾ ಕಾರ್ಯಕ್ಕೆ ಸರ್ಕಾರಿ, ಖಾಸಗಿ ಬಸ್​ಗಳ​ ಬಳಕೆ: ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ

ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಒಂದು ದಿನವಷ್ಟೇ ಬಾಕಿ ಇದೆ. ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಹಿನ್ನೆಲೆ ನಾಳೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಇಂದು ಮತ್ತು ನಾಳೆ ಚುನಾವಣಾ ಕಾರ್ಯಕ್ಕೆ ಬಸ್​ ಬಳಕೆಯಾಗುವುದರಿಂದ ಸರ್ಕಾರಿ ಹಾಗೂ ಖಾಸಗಿ ಬಸ್​ ಸಂಚಾರ ವ್ಯತ್ಯಯ ಸಾಧ್ಯತೆ ಇದೆ.

Lok Sabha Elections 2024: ಚುನಾವಣಾ ಕಾರ್ಯಕ್ಕೆ ಸರ್ಕಾರಿ, ಖಾಸಗಿ ಬಸ್​ಗಳ​ ಬಳಕೆ: ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Apr 25, 2024 | 1:22 PM

ಬೆಂಗಳೂರು, ಏಪ್ರಿಲ್​ 25: ನಾಳೆ (ಏಪ್ರಿಲ್​ 26) ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಕಾರ್ಯಕ್ಕೆ ಬಸ್ (Bus) ಬಳಕೆಯಾಗುವುದರಿಂದ ಇಂದು, ನಾಳೆ ಸರ್ಕಾರಿ ಸಾರಿಗೆ, ಖಾಸಗಿ ಬಸ್​ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಚುನಾವಣೆ ಕೆಲಸಕ್ಕೆ ಕೆಎಸ್​​ಆರ್​ಟಿಸಿ ಮತ್ತು ಬಿಎಂಟಿಸಿ ಖಾಸಗಿ ಬಸ್​ಗಳ ಬಳಕೆ ಮಾಡಲಾಗುತ್ತಿದೆ. ಶಾಲೆಗಳಿಗೆ ರಜೆ ಇರುವ ಕಾರಣ ಬಹುತೇಕ ಖಾಸಗಿ ಶಾಲಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ವಾಹನಕ್ಕೂ ಪ್ರತ್ಯೇಕ ದರ ಫಿಕ್ಸ್​​ ಮಾಡಲಾಗಿದ್ದು, ಮುಂಗಡ ಹಣ ಕೂಡ ಪಾವತಿ ಮಾಡಲಾಗಿದೆ.

2,100 ಕೆಎಸ್​​ಆರ್​ಟಿಸಿ, 1,700 ಬಿಎಂಟಿಸಿ ಬಸ್​ಗಳನ್ನು ಆಯೋಗ ಬಳಕೆ​​ ಮಾಡಿಕೊಂಡಿದ್ದು, ಸರ್ಕಾರಿ ಬಸ್​ಗಳಿಗೆ ಕಿ.ಮೀ.ಗೆ 57 ರೂ. ದರ ನಿಗದಿ ಮಾಡಲಾಗಿದೆ. ಹೀಗಾಗಿ ಎರಡು ದಿನ ಸರ್ಕಾರಿ ಬಸ್​ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.

ಯಾವ ವಾಹನಕ್ಕೆ ಎಷ್ಟು ಬಾಡಿಗೆ

  • ಸರ್ಕಾರಿ ಬಸ್: ಕಿ.ಮೀ 57.50 ರೂ. ದಿನದ ಬಾಡಿಗೆ 11,500 ರೂ.
  • ಖಾಸಗಿ ಬಸ್ (ಬೆಂಗಳೂರಿಗೆ): ಕಿಮೀ 43.50 ರೂ. ದಿನದ ಬಾಡಿಗೆ 8700 ರೂ. ದಿನಕ್ಕೆ ನಿಗದಿತ ಬಾಡಿಗೆ 4,350(ಬಸ್ ಬಳಸದಿದ್ದರೆ).
  • ಖಾಸಗಿ ಬಸ್ (ಬೆಂಗಳೂರು ಹೊರತು ಪಡಿಸಿ): ಕಿಮೀ 42.50 ರೂ. ದಿನದ ಬಾಡಿಗೆ 8700 ರೂ. ದಿನಕ್ಕೆ ನಿಗದಿತ ಬಾಡಿಗೆ 5,300(ಬಸ್ ಬಳಸದಿದ್ದರೆ).
  • ಲಘು ಸರಕು ವಾಹನ (ಬೆಂಗಳೂರಿಗೆ): ಕಿಮೀ 29 ರೂ. ದಿನದ ಬಾಡಿಗೆ 2900 ರೂ. ಪ್ರತಿ ಗಂಟೆಗೆ 200 ರೂ.
  • ಲಘು ಸರಕು ವಾಹನ (ಬೆಂಗಳೂರು ಹೊರತು ಪಡಿಸಿ): ಕಿಮೀ 29 ರೂ. ದಿನದ ಬಾಡಿಗೆ 2900 ರೂ. ಪ್ರತಿ ಗಂಟೆಗೆ 190 ರೂ.
  • ಮ್ಯಾಕ್ಸಿ ಕ್ಯಾಬ್ (ಬೆಂಗಳೂರು): ಕಿಮೀ 20 ರೂ. ದಿನದ ಬಾಡಿಗೆ 4000 ರೂ. ದಿನಕ್ಕೆ ನಿಗದಿತ ಬಾಡಿಗೆ 3,500 (ಬಳಸದಿದ್ದರೆ).
  • ಮ್ಯಾಕ್ಸಿ ಕ್ಯಾಬ್ (ಬೆಂಗಳೂರು ಹೊರತು ಪಡಿಸಿ): ಕಿಮೀ 19 ರೂ. ದಿನದ ಬಾಡಿಗೆ 3,800 ರೂ. ದಿನಕ್ಕೆ ನಿಗದಿತ ಬಾಡಿಗೆ 3,400 (ಬಳಸದಿದ್ದರೆ).
  • ಸರಕು ವಾಹನ (ಬೆಂಗಳೂರು): ಕಿಮೀ 36 ರೂ. ದಿನದ ಬಾಡಿಗೆ 6,400 ರೂ. ಪ್ರತಿ ಗಂಟೆಗೆ 1,100 ರೂ.
  • ಸರಕು ವಾಹನ (ಬೆಂಗಳೂರು ಹೊರತುಪಡಿಸಿ): ಕಿಮೀ 34 ರೂ. ದಿನದ ಬಾಡಿಗೆ 6,000 ರೂ. ಪ್ರತಿ ಗಂಟೆಗೆ 1,000 ರೂ.
  • ಮೋಟಾರ್ ಕ್ಯಾಬ್ (ಬೆಂಗಳೂರು): ಕಿಮೀ 16 ರೂ. ದಿನದ ಬಾಡಿಗೆ 2,800 ರೂ. ದಿನಕ್ಕೆ ನಿಗದಿತ ಬಾಡಿಗೆ 2,000 (ಬಳಸದಿದ್ದರೆ).
  • ಮೋಟಾರ್ ಕ್ಯಾಬ್ (ಬೆಂಗಳೂರು ಹೊರತುಪಡಿಸಿ): ಕಿಮೀ 14.5 ರೂ. ದಿನದ ಬಾಡಿಗೆ 2,700 ರೂ. ದಿನಕ್ಕೆ ನಿಗದಿತ ಬಾಡಿಗೆ 1,550 (ಬಳಸದಿದ್ದರೆ).

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:41 pm, Thu, 25 April 24