ಮುಂದಿನ ಒಂದೆರಡು ದಿನ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
ಕಲಬುರ್ಗಿಯಲ್ಲಿ 40.1 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ, ಎಚ್ಎಎಲ್ನಲ್ಲಿ 32.5 ಡಿಗ್ರಿ ಸೆಲ್ಸಿಯಸ್, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 33.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಮತ್ತಷ್ಟು ಓದಿ: IMD Monsoon Forecast: ಭಾರತದಲ್ಲಿ ಈ ಬಾರಿ ಸಾಧಾರಣ ಮುಂಗಾರು, ವಾಡಿಕೆಗಿಂತ ಕಡಿಮೆ ಮಳೆಯ ನಿರೀಕ್ಷೆ
ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬರುವ ಸಾಧ್ಯತೆಯು ಶೇಕಡ 90ರಿಂದ ಶೇಕಡ 95ರಷ್ಟಿದೆ. ಈ ಬಾರಿ ಸಾಮಾನ್ಯ ಮುಂಗಾರು ಇರುವ ಸಾಧ್ಯತೆಯು ಶೇಕಡ 25ರಷ್ಟಿದೆ. ಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಶೇಕಡ 15ರಷ್ಟಿದೆ. ಅತ್ಯಧಿಕಕ್ಕಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಶೇ. 0ರಷ್ಟಿದೆ ಎಂದು ಸ್ಕೈಮೆಟ್ ವೆದರ್‌ನ ಹವಾಮಾನ ವರದಿ ತಿಳಿಸಿದೆ.
ಜೂನ್ ತಿಂಗಳಲ್ಲಿ ಎಲ್‌ಪಿಎಯ ಶೇಕಡ 99ರಷ್ಟು ಮುಂಗಾರು ಮಳೆಯಾಗಲಿದೆ. ಜುಲೈನಲ್ಲಿ ಶೇಕಡ 92 ಮತ್ತು ಆಗಸ್ಟ್‌ನಲ್ಲಿ ಶೇಕಡ 92ರಷ್ಟು ಮಳೆಯಾಗಲಿದೆ ಎಂದು ಸ್ಕೈಮೆಟ್ ವೆದರ್ ತಿಳಿಸಿದೆ. ಭಾರತದ ಕೃಷಿ ಪ್ರದೇಶದ ಶೇಕಡ 51 ಉತ್ಪಾದನೆಯ ಶೇಕಡ 40ನಷ್ಟು ನಷ್ಟು, ಮಳೆ-ಆಧಾರಿತವಾಗಿದೆ, ಇದು ಮಾನ್ಸೂನ್ ನಿರ್ಣಾಯಕವಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ