ಕೊರೊನಾ ಮಧ್ಯೆಯೇ SSLC ಪರೀಕ್ಷೆಗೆ ಕ್ಷಣಗಣನೆ, ಆತಂಕದಲ್ಲೇ ಸಜ್ಜಾಗ್ತಿದ್ದಾರೆ ವಿದ್ಯಾರ್ಥಿಗಳು

|

Updated on: Jun 25, 2020 | 6:57 AM

ಬೆಂಗಳೂರು: ಕೊರೊನಾ ಆರ್ಭಟದ ನಡುವೆ ಇಂದು ವಿದ್ಯಾರ್ಥಿಗಳಿಗೆ ಭವಿಷ್ಯದ ಪರೀಕ್ಷೆ. ದೇಶದ ಹತ್ತಾರು ರಾಜ್ಯಗಳು ಹಿಂದೆ ಸರಿದಿದ್ರೂ ರಾಜ್ಯದಲ್ಲಿ ಮಾತ್ರ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿವೆ . ಕೊರೊನಾ ರಾಕ್ಷಸನ ಭಯದ ನಡುವೆ ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಊರಿಂದ ಊರಿಗೆ ಬರ್ತಿದೆ.. ಗಲ್ಲಿಯಿಂದ ಗಲ್ಲಿಗೆ ನುಗ್ಗುತ್ತಿದೆ.. ಮನೆಯಿಂದ ಮನೆಗೆ ಹರಡುತ್ತಿದೆ.. ರಾಜ್ಯದಲ್ಲಿ ನಿಯಂತ್ರಣ ತಪ್ಪಿಹೋಗಿರೋ ಸೋಂಕು 10 ಸಾವಿರದ ಆಸುಪಾಸಿನಲ್ಲಿದೆ. ಇದೇ ಹೊತ್ತಲ್ಲೇ ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಇಂದು ಮನೆಯಿಂದ ಹೊರಗೆ ಬರ್ತಿದ್ದಾರೆ. ಹಲವು […]

ಕೊರೊನಾ ಮಧ್ಯೆಯೇ SSLC ಪರೀಕ್ಷೆಗೆ ಕ್ಷಣಗಣನೆ, ಆತಂಕದಲ್ಲೇ ಸಜ್ಜಾಗ್ತಿದ್ದಾರೆ ವಿದ್ಯಾರ್ಥಿಗಳು
Follow us on

ಬೆಂಗಳೂರು: ಕೊರೊನಾ ಆರ್ಭಟದ ನಡುವೆ ಇಂದು ವಿದ್ಯಾರ್ಥಿಗಳಿಗೆ ಭವಿಷ್ಯದ ಪರೀಕ್ಷೆ. ದೇಶದ ಹತ್ತಾರು ರಾಜ್ಯಗಳು ಹಿಂದೆ ಸರಿದಿದ್ರೂ ರಾಜ್ಯದಲ್ಲಿ ಮಾತ್ರ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿವೆ . ಕೊರೊನಾ ರಾಕ್ಷಸನ ಭಯದ ನಡುವೆ ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಊರಿಂದ ಊರಿಗೆ ಬರ್ತಿದೆ.. ಗಲ್ಲಿಯಿಂದ ಗಲ್ಲಿಗೆ ನುಗ್ಗುತ್ತಿದೆ.. ಮನೆಯಿಂದ ಮನೆಗೆ ಹರಡುತ್ತಿದೆ.. ರಾಜ್ಯದಲ್ಲಿ ನಿಯಂತ್ರಣ ತಪ್ಪಿಹೋಗಿರೋ ಸೋಂಕು 10 ಸಾವಿರದ ಆಸುಪಾಸಿನಲ್ಲಿದೆ. ಇದೇ ಹೊತ್ತಲ್ಲೇ ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಇಂದು ಮನೆಯಿಂದ ಹೊರಗೆ ಬರ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಕೈಚೆಲ್ಲಿ ಕುಳಿತ್ರೂ, ಅಚಲ ನಿರ್ಧಾರ ತೆಗೆದುಕೊಂಡಿರೋ ರಾಜ್ಯ ಸರ್ಕಾರ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಿದೆ. ಕೊರೊನಾ ರಣಕೇಕೆ ನಡುವೆ ಪರೀಕ್ಷೆಗೆ ಹೇಗೆಲ್ಲಾ ತಯಾರಿಯಾಗಿದೆ ಅನ್ನೋದನ್ನ ನೋಡೋದಾದ್ರೆ ನೋಡಿ.

ಕೊರೊನಾ ನಡುವೆ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ!
ಎಸ್‌ಎಸ್‌ಎಲ್‌ಸಿ.. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟವೇ ಎಸ್‌ಎಸ್‌ಎಲ್‌ಸಿ. ವಿದ್ಯಾರ್ಥಿಯ ಭವಿಷ್ಯಕ್ಕೆ ಬುನಾದಿ ಹಾಕೋದೆ ಎಸ್‌ಎಸ್‌ಎಲ್‌ಸಿ. ಆದ್ರೆ ಇದೇ ಪರೀಕ್ಷೆ ಮೇಲೆ ಕೊರೊನಾ ಕರಿನೆರಳು ಬಿದ್ದಿತ್ತು. ಮಾರ್ಚ್‌ 27 ರಿಂದ ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆಯಾಗಿದ್ವು. ಆದ್ರೆ ಮುಂದೂಡಿಕೆಿಯಾಗಿದ್ದ ಪರೀಕ್ಷೆಗಳು ಇಂದಿನಿಂದ ಆರಂಭವಾಗಲಿವೆ. ಜೂನ್‌ 25 ರಿಂದ ಜುಲೈ 4 ರವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು 8 ಲಕ್ಷದ 48 ಸಾವಿರದ 203 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳೇನು ಅನ್ನೋದು ಇಲ್ಲಿದೆ.

ಪರೀಕ್ಷೆ…‘ಪಾಲಿಸಿ’..!
ಪರೀಕ್ಷಾ ಕೇಂದ್ರದಲ್ಲಿ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಪ್ರತೀ ಕೇಂದ್ರಕ್ಕೆ ವೈದ್ಯರ ನೇಮಕ ಮಾಡಲಾಗಿದೆ. ಇನ್ನು ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಇರೋ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಸಿದ್ದ ಮಾಡಲಾಗಿದೆ . ಅದ್ರಲ್ಲೂ ಜ್ವರ, ಕೆಮ್ಮು, ನೆಗಡಿ ಇರೋ ವಿದ್ಯಾರ್ಥಿಗಳಿಗೂ ಕೂಡಾ ಪ್ರತ್ಯೇಕ ಕೊಠಡಿಯಲ್ಲೇ ಕುಳಿತು ಪರೀಕ್ಷೆ ಬರೆಯಬೇಕು. ಇನ್ನು ನಿಗದಿತ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬರ್ಬೇಕು.

ಸ್ಕ್ರೀನಿಂಗ್‌ ಟೆಸ್ಟ್‌, ಸ್ಯಾನಿಟೈಸಿಂಗ್‌ ಮಾಡಿದ ಬಳಿಕವೇ ಒಳಗೆ ಪ್ರವೇಶ ನೀಡಲಾಗುತ್ತೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿಯೇ ಹಾಜರಾಗಬೇಕು ಅಂತಾ ಶಿಕ್ಷಣ ಹೇಳಿಕೆ ಹೇಳಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಸಿಎಂ
ಎಸ್‌ಎಸ್‌ಎಲ್‌ಸಿ ಎಕ್ಸಾಂ ಬರೆಯುವ ವಿದ್ಯಾರ್ಥಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳು ಮಾಸ್ಕ್, ಸ್ಯಾನಿಟೈಸರ್​ ಕಡ್ಡಾಯವಾಗಿ ಬಳಸಿ, ಆತಂಕ, ಭಯವಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ಇನ್ನು ಕೊರೊನಾ ಆರ್ಭಟದ ನಡುವೆ ರಾಜ್ಯದ ಉದ್ದಗಲಕ್ಕೂ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತೆ ಹೇಗೆ ನಡೆದಿದೆ ಅನ್ನೋದನ್ನ ನೋಡೋದಾದ್ರೆ.

ಸ್ಥಳಾಂತರವಾಯ್ತು ಪರೀಕ್ಷಾ ಕೇಂದ್ರ!
ಮೈಸೂರಿನಲ್ಲಿ ಕಂಟೇನ್ಮೆಂಟ್‌ ಜೋನ್‌ನಲ್ಲೇ ಪರೀಕ್ಷಾ ಕೇಂದ್ರ ಇತ್ತು. ಶಾಲೆಯ ಎದುರೇ ಸೋಂಕಿತರ ಮನೆ ಇತ್ತು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಕೃಷ್ಣ ವಿಲಾಸ ರಸ್ತೆಯಲ್ಲಿರುವ ಅವಿಲಾ ಶಾಲೆಯಲ್ಲಿನ ಕೇಂದ್ರವನ್ನ ಪಕ್ಕದ ಮಹಾರಾಣಿ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಶಿಫ್ಟ್‌ ಮಾಡಿದೆ.

ಬಸ್‌ ಮಿಸ್‌ ಆದ್ರೆ ಬರುತ್ತೆ ಸ್ವಯಂ ಸೇವಕರ ವಾಹನ!
ಬೀದರ್‌ನಲ್ಲಿ 26 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳಿಗೆ ಬಸ್‌ ಮಿಸ್‌ ಆದ್ರೆ ಸ್ವಯಂ ಸೇವಕರ ಖಾಸಗಿ ವಾಹನಗಳ ಮೂಲಕ ವಿದ್ಯಾರ್ಥಿಗಳನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗುತ್ತೆ. ಇದಕ್ಕಾಗಿ ಪ್ರತೀ ತಾಲೂಕಿನಲ್ಲಿ 10 ಸ್ವಯಂ ಸೇವಕರನ್ನ ನೇಮಿಸಲಾಗಿದೆ. ಇನ್ನು ಬಾಗಲಕೋಟೆಯಲ್ಲಿ ಹಾಲ್‌ಟಿಕೆಟ್‌ ಜತೆ ಮಾಸ್ಕ್‌ಗಳನ್ನ ಸಹ ವಿತರಿಸಲಾಗಿದೆ .

‘ಕಂಟೇನ್ಮೆಂಟ್‌’ ವಿದ್ಯಾರ್ಥಿಗಳಿಗೆ ಪ್ರತ್ಯೇಕ ರೂಂ!
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 96 ವಿದ್ಯಾರ್ಥಿಗಳು ಕಂಟೇನ್ಮೆಂಟ್‌ ಜೋನ್‌ನಲ್ಲಿದ್ದಾರೆ. ಹೀಗಾಗಿ ಅವರು ಪರೀಕ್ಷೆ ಬರೆಯಲು ದಾವಣಗೆರೆ ನಗರದ ಸೀತಮ್ಮ ಕಾಲೇಜ್‌ನಲ್ಲಿ ಪ್ರತ್ಯೇಕ ಕೇಂದ್ರ ಮಾಡಲಾಗಿದೆ. ಬಳ್ಳಾರಿಯಲ್ಲೂ 116 ವಿದ್ಯಾರ್ಥಿಗಳಿದ್ದು ಇವರಿಗೂ ಪ್ರತ್ಯೇಕ ಕೊಠಡಿ ರೆಡಿ ಮಾಡಲಾಗಿದೆ . ರಾಯಚೂರು ಜಿಲ್ಲೆಯಲ್ಲೂ ಪರೀಕ್ಷೆಗಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಅತ್ತ ಗದಗ್‌ನಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕೊರೊನಾ ಇರೋ ಶಂಕೆ ವ್ಯಕ್ತವಾಗಿದ್ದು, ಆತನ ಸಂಪರ್ಕದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳ ಗಂಟಲದ್ರವವನ್ನ ಪರೀಕ್ಷೆಗೆ ರವಾನಿಸಲಾಗಿದೆ.

ವಿದ್ಯಾರ್ಥಿಗಳಿಗೆ ಫ್ರೀ ಆಟೋ!
ಗದಗ-ಬೆಟಗೇರಿ ಅವಳಿನಗರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಆಟೋ ಸೇವೆ ನೀಡಲು ಯಂಗ್‌ಇಂಡಿಯಾ ಆಟೋ ಸಂಘದವರು ನಿರ್ಧರಿಸಿದ್ದಾರೆ. ಇದಕ್ಕಾಗಿ 100 ಆಟೋಗಳನ್ನ ಮೀಸಲಿಡಲಾಗಿದ್ದು, ಬಿಳಿ ಬಾವುಟ ಇರೋ ಆಟೋಗಳ ಬಳಿ ಹೋಗಿ ವಿದ್ಯಾರ್ಥಿಗಳು ಹಾಲ್‌ಟಿಕೆಟ್‌ ತೋರಿಸಿದ್ರೆ ಸಾಕು ಪರೀಕ್ಷಾ ಕೇಂದ್ರಕ್ಕೆ ಬಿಡಲಿದ್ದಾರೆ. ಉಳಿದಂತೆ ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಚಿತ್ರದುರ್ಗ, ಶಿವಮೊಗ್ಗ ತುಮಕೂರು, ಹಾಸನ, ಮಂಡ್ಯದಲ್ಲೂ ನಾಳೆಯಿಂದ ಆರಂಭವಾಗುವ ಪರೀಕ್ಷೆಗಳಿಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಜತೆಗೆ ವಿದ್ಯಾರ್ಥಿಗಳು ಕೂಡಾ ಹೆಚ್ಚಿನ ಜಾಗೃತಿ ವಹಿಸಬೇಕಿದೆ . ಟಿವಿ9 ಕಡೆಯಿಂದಲೂ ವಿದ್ಯಾರ್ಥಿಗಳಿಗೆ ಆಲ್‌ದ ಬೆಸ್ಟ್‌. ಹುಷಾರ್ ಆಗಿ ಎಕ್ಸಾಂ ಬರೆಯಿರಿ.