KCET Result: ಟಾಪ್​​ 4ರಲ್ಲಿ ಬೆಂಗಳೂರಿನ ಅಭ್ಯರ್ಥಿಗಳು, ಗೊಂದಲಕ್ಕೆ ತೆರೆ ಎಳೆದ ಕೆಇಎ

| Updated By: ವಿವೇಕ ಬಿರಾದಾರ

Updated on: Jun 02, 2024 | 12:21 PM

KCET Result: ಪತ್ರಿಕಾ ಪ್ರಕಟಣೆ ಮುಖಾಂತರ ದಿಢೀರನೆ ಸಿಇಟಿ ಫಲಿತಾಂಶ ಪ್ರಕಟಿಸುವ ಮೂಲಕ ಕೆಇಎ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸ್ಪಷ್ಟನೆ ನೀಡಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ, ಹೀಗಾಗಿ ಪತ್ರಿಕಾಗೋಷ್ಠಿ ಮಾಡದೆ ಶನಿವಾರ ಫಲಿತಾಂಶ ಪ್ರಕಟ ಮಾಡಿದ್ವಿ ಎಂದು ಕೆಇಎ ನಿರ್ದೇಶಕ ಹೆಚ್ ಪ್ರಸನ್ನ ಅವರು ಹೇಳಿದರು.

KCET Result: ಟಾಪ್​​ 4ರಲ್ಲಿ ಬೆಂಗಳೂರಿನ ಅಭ್ಯರ್ಥಿಗಳು, ಗೊಂದಲಕ್ಕೆ ತೆರೆ ಎಳೆದ ಕೆಇಎ
ಕೆಇಎ
Follow us on

ಬೆಂಗಳೂರು, ಜೂನ್​ 02: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಒಂದಲ್ಲ ಒಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿತ್ತು. ಸಿಇಟಿ ಪರೀಕ್ಷೆಯಲ್ಲಿ ಔಟ್​ ಆಫ್​ ಸಿಲಬಸ್​ ಪ್ರಶ್ನೆಗಳನ್ನು ನೀಡಿ ಕೆಇಎ ಮುಜುಗರಕ್ಕೆ ಒಳಗಾಗಿತ್ತು. ಇದಾದ ಬೆನ್ನಲ್ಲೇ ಶನಿವಾರ (ಜೂ. 01) ರಂದು ಪತ್ರಿಕಾ ಪ್ರಕಟಣೆ ಮುಖಾಂತರ ದಿಢೀರನೆ ಸಿಇಟಿ (CET) ಫಲಿತಾಂಶ ಪ್ರಕಟಿಸುವ ಮೂಲಕ ಕೆಇಎ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ. ಕೆಇಎ ನಿರ್ದೇಶಕ ಹೆಚ್ ಪ್ರಸನ್ನ ಅವರು ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಮಲೇಶ್ವರಂ ಕೆಇಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀತಿ ಸಂಹಿತೆ ಜಾರಿಯಲ್ಲಿದೆ, ಹೀಗಾಗಿ ಪತ್ರಿಕಾಗೋಷ್ಠಿ ಮಾಡದೆ ಶನಿವಾರ ಫಲಿತಾಂಶ ಪ್ರಕಟ ಮಾಡಿದ್ವಿ. ಫಲಿತಾಂಶ ವಿಚಾರವಾಗಿ ಸಾಕಷ್ಟು ಒತ್ತಡವಿತ್ತು ಈ ಹಿನ್ನೆಲೆ ಫಲಿತಾಂಶ ಮಾಡಲಾಗಿದೆ. ನಂತರ ನಮಗೆ ಅರಿವಾಯ್ತು, ಸಾಕಷ್ಟು ಗೊಂದಲ ಆಗಿದೆ ಅಂತ, ಇನ್ಮುಂದೆ ಸರಿಯಾಗಿ ನಿಯಮಗಳನ್ನು ಪಾಲಿಸುತ್ತೇವೆ ಎಂದು ಕೆಇಎ ನಿರ್ದೇಶಕ ಪ್ರಸನ್ನ ಅವರು ಹೇಳಿದರು.

ಈ ಬಾರಿ ಯಜಿಸಿಇಟಿ ಫಲಿತಾಂಶ ಬೆಂಗಳೂರು ಅಭ್ಯರ್ಥಿಗಳೇ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇಂಜಿನಿಯರಿಂಗ್ ವಿಭಾಗದ ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಬೆಂಗಳೂರು ಅಭ್ಯರ್ಥಿಗಳಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಓಲಂಪಿಯಾಡ್ ಶಾಲೆಯ ಹರ್ಷಾ ಕಾರ್ತಿಕೇಯ ಮೊದಲ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ ಮಾಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಅಂಕಗಳಲ್ಲಿನ ಗೊಂದಲ್ಲಕ್ಕೆ ಸ್ಪಷ್ಟನೆ ನೀಡಿದ ಕೆಇಎ

ಎರಡು ಅಂಕಗಳನ್ನ ಸಾಫ್ಟ್‌ವೇರ್​ನಲ್ಲಿ ಮ್ಯಾಚ್ ಮಾಡುವ ಸಂದರ್ಭದಲ್ಲಿ ಅಂಕಗಳು ಹೊಂದಾಣಿಕೆಯಾಗಿಲ್ಲ. ಇದರಿಂದ ಕೆಲ ಅಭ್ಯರ್ಥಿಗಳ ಅಂಕಗಳಲ್ಲಿ ವ್ಯತ್ಯಾಸವಾಗಿದೆ. ಯಾರಿಗೆಲ್ಲ ಸಮಸ್ಯೆಯಾಗಿದೆ, ಅವರು ಗಾಬರಿ ಪಡುವ ಅವಶ್ಯಕತೆ ಇಲ್ಲ. ಸೋಮವಾರ ಅಂಕ ಸೇರಿಸಲು ಅವಕಾಶ ನೀಡಲಾಗುತ್ತೆ. ನಂತರದಲ್ಲಿ ನಾವು ಅವರಿಗೆ ರ‍್ಯಾಂಕ್​ ನೀಡಲಾಗುತ್ತೆ ಎಂದು ತಿಳಿಸಿದರು.

ವೈದ್ಯಕೀಯ ಮತ್ತು ಇಂಜಿನಿಯರ್ ಸೀಟ್​ಗಳು ಕಂಬೈನ್ಡ್ ಆಗಿ ಸೀಟ್ ಹಂಚಲಾಗುತ್ತದೆ. ನೀಟ್ ಪರೀಕ್ಷೆ ಫಲಿತಾಂಶ ಇನ್ನೂ ಬಂದಿಲ್ಲ. ನೀಟ್ ಫಲಿತಾಂಶ ಬಂದ ಬಳಿಕ ನಾವು ಸೀಟು ಹಂಚಿಕೆ ಮಾಡುತ್ತೇವೆ. ಪೋಷಕರು ಆತುರದಲ್ಲಿ ಗಾಬರಿ ಪಡುವ ಅಗತ್ಯವಿಲ್ಲ. ಸರ್ಕಾರದಿಂದ ನಿಗದಿಯಾಗುವ ಸೀಟುಗಳಿಗೆ ಯಾವುದೇ ಕಾಲೇಜು ಶುಲ್ಕ ಪಡೆಯಲು ಅವಶ್ಯಕತೆ ಇಲ್ಲ. ರ‍್ಯಾಂಕ್ ವಿಚಾರವಾಗಿ ಕೂಡ ಗೊಂದಲ ಪಡಬೇಕಾಗಿಲ್ಲ. ರ‍್ಯಾಂಕ್ ಆಧಾರದ ಮೇಲೆ ನಿಮಗೆ ಸೀಟು ಸಿಕ್ಕೆ ಸಿಗುತ್ತೆ ಎಂದರು.

ಇಂಜಿನಿಯರಿಂಗ್ ವಿಭಾಗದ ಟಾಪರ್ಸ್

ಪ್ರಥಮ: ಹರ್ಷಾ ಕಾರ್ತಿಕೇಯಾ ವುತುಕುರಿ, ನಾರಾಯಣ ಓಲಂಪಿಯಾಡ್ ಶಾಲೆ, ಸಹಕಾರ ನಗರ

ದ್ವಿತೀಯ: ಮನೋಜ್ ಸೋಹನ್ ಗಾಜುಲ, ಶ್ರೀ ಚೈತನ್ಯ ಟೆಕ್ನೋ ಶಾಲೆ, ಮಾರತಹಳ್ಳಿ

ತೃತೀಯ: ಅಭಿನವ್ ಪಿ ಜೆ, ನೆಹರು ಸ್ಮಾರಕ ವಿದ್ಯಾಲಯ, ಜಯನಗರ

ನಾಲ್ಕನೇ ಸ್ಥಾನ: ಸನ್ನಾ ತಬಸ್ಸುಮ್, ನಾರಾಯಣ ಪಿಯು ಕಾಲೇಜು ಎಎಂಸಿಓ ಲೇಔಟ್ ಸಹಕಾರ ನಗರ

ನ್ಯಾಚರೋಪತಿ, ಯೋಗ ವಿಜ್ಞಾನದ (BNYS) ಟಾಪರ್ಸ್ :

ಪ್ರಥಮ: ನಿಹಾರ್ ಎಸ್ ಆರ್, ಎಕ್ಸ್ಪರ್ಟ್ ಪ್ರೀ ಯೂನಿವರ್ಸಿಟಿ ಸೈನ್ಸ್ ಕಾಲೇಜು ಮಂಗಳೂರು

ದ್ವಿತೀಯ: ಸಂಜನಾ ಸಂತೋಷ್ ಕಟ್ಟಿ, ಎಕ್ಸ್ಪರ್ಟ್ ಕಾಲೇಜ್ ಅರುಕುಲ, ಮಂಗಳೂರು

ತೃತೀಯ: ಪ್ರೀತಮ್ ರವಲಪ್ಪ ಪನಧಾಕರ್, ಶೇಷಾದ್ರಿಪುರಂ ಪಿಯು ಕಾಲೇಜ್, ಬೆಂಗಳೂರು

ಈ ಹಿಂದೆ ಔಟ್ ಆಫ್ ಸಿಲೆಬಸ್ ವಿಚಾರದವಾಗಿ ಸಾಕಷ್ಟು ಗೊಂದಲವಾಗಿತ್ತು. ಈ ಕಾರಣಕ್ಕೆ ಅಂದಿನ ಕೆಇಎ ಕಾರ್ಯ ನಿರ್ವಾಹಕಿ ರಮ್ಯಾ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:19 pm, Sun, 2 June 24