ರಸ್ತೆ ಅಪಘಾತದಲ್ಲಿ KMF ನಿರ್ದೇಶಕ ದುರ್ಮರಣ..

ಶಂಕರನಾರಾಯಣದಲ್ಲಿ ಕಾರ್ಯಕ್ರಮ ಮುಗಿಸಿ ಬರುತ್ತಿರುವಾಗ ಹಾಲಾಡಿಯಲ್ಲಿ ಕಾರಿನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ರಾಜೀವ ಶೆಟ್ಟಿಯನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ರಸ್ತೆ ಅಪಘಾತದಲ್ಲಿ KMF ನಿರ್ದೇಶಕ ದುರ್ಮರಣ..
ಕೆಎಂಎಫ್ ನಿರ್ದೇಶಕ ರಾಜೀವ ಶೆಟ್ಟಿ
Updated By: ಸಾಧು ಶ್ರೀನಾಥ್​

Updated on: Dec 09, 2020 | 5:10 PM

ಉಡುಪಿ: ಕುಂದಾಪುರ ತಾಲೂಕು ಹಾಲಾಡಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೆಎಂಎಫ್ ನಿರ್ದೇಶಕ ರಾಜೀವ ಶೆಟ್ಟಿ ಮೃತಪಟ್ಟಿದ್ದಾರೆ.

ಶಂಕರನಾರಾಯಣದಲ್ಲಿ ಕಾರ್ಯಕ್ರಮ ಮುಗಿಸಿ ಬರುತ್ತಿರುವಾಗ ಹಾಲಾಡಿಯಲ್ಲಿ ಕಾರಿನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ರಾಜೀವ ಶೆಟ್ಟಿಯನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ  ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಕೊನೆ ಉಸಿರು ಎಳೆದಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸ್ತುತ ಕೆಎಂಎಫ್​ನ ನಿರ್ದೇಶಕರಾಗಿರುವ ಹದ್ದೂರು ರಾಜೀವ ಶೆಟ್ಟಿ, ಶಂಕರನಾರಾಯಣ ತಾಲೂಕು ಪಂಚಾಯತ್  ಸದಸ್ಯರಾಗಿದ್ದವರು.

ಪೊಲೀಸರ ಮೇಲೆ ಹಲ್ಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡ MLC ನಾಸಿರ್ ಅಹ್ಮದ್ ಪುತ್ರ