Updated on: Sep 05, 2021 | 10:15 AM
ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.
ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.
ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.
Published On - 10:09 am, Sun, 5 September 21