ಕೊಡಗು: ರೈತರನ್ನ ಉದ್ಧಾರ ಮಾಡ್ತೀವಿ ಅನ್ನೋ ಕೃಷಿ ಇಲಾಖೆ ಅಧಿಕಾರಿಗಳೇ ಅನ್ನದಾತರಿಗೆ ಟೋಪಿ ಹಾಕಿದ್ದಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದೀವಿ ಅಂತಾ ರೈತರ ಹೆಸರಿನಲ್ಲಿ ಅಧಿಕಾರಿಗಳು ಲಕ್ಷ ಲಕ್ಷ ಉಂಡೆನಾಮ ತಿಕ್ಕಿದ್ದಾರೆ. ಅಷ್ಟೇ ಅಲ್ಲ ಸತ್ತವರನ್ನೂ ಬಿಡದೆ ಅವರ ಅನುದಾನವನ್ನೂ ಸ್ವಾಹ ಮಾಡಿದ್ದಾರೆ.
ಅತ್ತ ಸರಿಯಾಗಿ ಮಳೆ ಬಂದರೆ ಬೆಳೆಗೆ ಬೆಲೆಯೇ ಇಲ್ಲ. ಇನ್ನೊಂದ್ಕಡೆ ವರುಣದೇವ ಯಾವಾಗ ತಮ್ಮ ಮೇಲೆ ಮುನಿಸಿಕೊಳ್ತಾನೋ ಅನ್ನೋ ಆತಂಕ. ಒಟ್ನಲ್ಲಿ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅದ್ರಲ್ಲೂ ಕೊಡಗಿನ ರೈತರಿಗೆ ಒಂದಾದ ನಂತ್ರ ಒಂದು ಸಂಕಷ್ಟ. ಇವ್ರೆಲ್ಲರ ಸಮಸ್ಯೆ ಬಗೆಹರಿಸಬೇಕಿದ್ದ ಅಧಿಕಾರಿಗಳೇ ಗೋಲ್ಮಾಲ್ ಮಾಡಿರೋ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಕೃಷಿ ಹೊಂಡ ಮಾಡಿಸ್ತೀವಿ ಅಂದವರಿಂದಲೇ ಗೋಲ್ಮಾಲ್?
ಸತ್ತವರ ಹೆಸರಲ್ಲೂ ಕೃಷಿ ಹೊಂಡ ನಿರ್ಮಾಣ?
ಹೊಂಡ ನಿರ್ಮಾಣ ವಿಚಾರದಲ್ಲಿ ರೈತರ ಹೆಸರನ್ನು ಮುಂದಿಟ್ಟು, ಕೃಷಿ ಹೊಂಡ ನಿರ್ಮಾಣ ಮಾಡಿಯೇ ಇಲ್ಲ ಅಂತಾ ಆರೋಪ ಮಾಡಲಾಗ್ತಿದೆ. ಆದ್ರೆ ಇದಕ್ಕಾಗಿ ಬಿಡುಗಡೆಯಾಗಿದ್ದ ಅನುದಾನವನ್ನ ಮಾತ್ರ ಅಧಿಕಾರಿಗಳು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಅಂತಾ ಆರೋಪಿಸಲಾಗುತ್ತಿದೆ. ಇನ್ನು ಅಧಿಕಾರಿಗಳು ಕೊಡೋ ಸಮಜಾಯಿಷಿ ಇದು.
ಒಟ್ನಲ್ಲಿ ರೈತರ ಕಲ್ಯಾಣಕ್ಕಾಗಿ ಸರ್ಕಾರವೇನೋ ಸಾವಿರಾರು ಕೋಟಿ ವ್ಯಯ ಮಾಡುತ್ತಿದೆ. ಅದ್ರೆ ಇಲಾಖೆಗಳ ಮುಖ್ಯಸ್ಥರ ಬೇಜವಾಬ್ದಾರಿತನದಿಂದ ಅದೆಲ್ಲಾ ವ್ಯರ್ಥವಾಗುತ್ತಿದೆ. ಮತ್ತೊಂದ್ಕಡೆ ಕಚೇರಿಯ ಹಣವನ್ನೇ ಅಧಿಕಾರಿಗಳು ಗುಳುಂ ಮಾಡ್ತಿದ್ದಾರೆ ಅನ್ನೋದು ತೀರಾ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.