ಕೊಡಗು: ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ; ಒಂದು ಬಾವಿ ನಿರ್ಮಿಸಿ ಕೊಡಿ ಎಂದು ಸ್ಥಳೀಯರ ಮನವಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2023 | 2:42 PM

ಯಾವುದೇ ಒಬ್ಬ ವ್ಯಕ್ತಿ, ಕುಟುಂಬ ಅಥವಾ ಊರಿಗೆ ಆಹಾರ ನೀರು ವಸತಿ ಬಟ್ಟೆ, ಅತ್ಯಾವಶ್ಯಕ ವಸ್ತುಗಳು. ಆದ್ರೆ, ಕೊಡಗಿನ ಗ್ರಾಮವೊಂದು ಪ್ರತಿನಿತ್ಯ ಹನಿ ನೀರಿಗೆ ಭಗೀರಥ ಪ್ರಯತ್ನ ಪಡುತ್ತಿದೆ. ತಮಗೆ ಒಂದು ಬಾವಿ ನಿರ್ಮಿಸಿ ಕೊಡಿ ಎಂಬ ಅವರ ಕೂಗು ಇದುವರೆಗೂ ಸರ್ಕಾರವನ್ನ ಮುಟ್ಟಿಲ್ಲ.

ಕೊಡಗು: ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ; ಒಂದು ಬಾವಿ ನಿರ್ಮಿಸಿ ಕೊಡಿ ಎಂದು ಸ್ಥಳೀಯರ ಮನವಿ
ನೀರಿಗಾಗಿ ಪರದಾಟ
Follow us on

ಕೊಡಗು, ಸೆ.27: ಈ ಬಾವಿಯ ಪರಿಸ್ಥಿತಿಯನ್ನೊಮ್ಮೆ ನೋಡಿ, ನೀರೇನೋ ಇದೆ. ಆದ್ರೆ, ಅದೇ ಬಾವಿಯಲ್ಲಿ ಚಪ್ಪಲಿ, ಬಾಟಲಿ, ಕೊಳೆತ ವಸ್ತುಗಳು, ಸತ್ತ ಕೋಳಿ ಹೀಗೆ ಏನೆಲ್ಲಾ ಇರಬಾರದೋ ಅವೆಲ್ಲವೂ ಇವೆ. ಇದು ಮಡಿಕೇರಿ(Madikeri) ತಾಲ್ಲೂಕಿನ ಕೊಯನಾಡು ಗ್ರಾಮದ 30 ಮಂದಿಯ ಕುಟುಂಬದ ದಯನೀಯ ಸ್ಥಿತಿ. ಇಲ್ಲಿ ಸುಮಾರು 30 ಕುಟುಂಬಗಳಿದ್ದು, ಇವರೆಲ್ಲರಿಗೂ ಇದೊಂದೆ ನೀರಿನ ಮೂಲವಾಗಿದೆ. ತಮ್ಮ ಏರಿಯಾದಲ್ಲೇ ಬೋರ್​ವೆಲ್​ ಒಂದು ಇದ್ದರೂ ಅದು ಕೆಲಸ ಮಾಡುತ್ತಿಲ್ಲ. ಹಾಗಾಗಿ ಇವರೆಲ್ಲ ಇದೇ ಬಾವಿಯನ್ನು ಅವಲಂಬಿಸಿದ್ದಾರೆ. ಆದ್ರೆ, ಬಾವಿಗೆ ಸೂಕ್ತ ರಕ್ಷಣೆ ಇಲ್ಲದ್ದರಿಂದ ಬಾವಿಯೇ ಕೊಳೆತು ಹೋದಂತಿದೆ. ಹಾಗಾಗಿ ಬಾವಿಯೊಳಗೆ ಕೊಳೆತ ವಸ್ತುಗಳೇ ತುಂಬಿವೆ. ಇದರಿಂದ ಈ ಬಾವಿ ನೀರನ್ನು ಬಳಸದಂತಹ ಸ್ಥಿತಿ ತಲುಪಿದೆ.

ಮಳೆ ಬಂದಾಗ ಮಳೆ ನೀರನ್ನೇ ಇವರೆಲ್ಲರೂ ಆಶ್ರಯಿಸುತ್ತಾರೆ. ಆದ್ರೆ, ಇದೀಗ ಮಳೆಯೂ ಇಲ್ಲ, ನೀರೂ ಇಲ್ಲ. ಇಲ್ಲಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಖಾಸಗಿಯವರ ಬಾವಿಯೊಂದಿದ್ದು. ಅನಿವಾರ್ಯವಾದಾಗ ಅಲ್ಲಿಗೇ ತೆರಳುತ್ತಾರೆ. ಆದ್ರೆ, ವಯಸ್ಸಾದವರೇ ಇರುವ ಮನೆಗಳಲ್ಲಿ ಅದೂ ಸಾಧ್ಯವಿಲ್ಲದೆ ಪರದಾಡುವಂತಾಗಿದೆ. ತಮ್ಮ ಬಾವಿಯನ್ನು ಸ್ವಚ್ಛಗೊಳಿಸಿ ಅದಕ್ಕೆ ರಕ್ಷಣೆ ನೀಡಿ ಅಥವಾ ಹೊಸತೊಂದು ಬೋರ್​ವೆಲ್ ಹಾಕಿಸಿಕೊಡಿ ಎಂದು ಎಷ್ಟು ಮನವಿ ಮಾಡಿದರೂ, ಇಲ್ಲಿನ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ನೇಮಕ ಮಾಡಿದ ವಕೀಲರೇ ಈಗಲೂ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ: ಡಿಕೆ ಶಿವಕುಮಾರ್

ಸಧ್ಯ ಕೊಡಗಿನಲ್ಲಿ ಮಲೆಗಾಲವೂ ಮುಗಿದಿದೆ. ಹಾಗಾಗಿ ಬೇರೆ ನೀರಿನ ಮೂಲಗಳಿಲ್ಲ. ಈಗಿರುವ ಬಾವಿಯೊಂದನ್ನು ಸ್ವಚ್ಛಗೊಳಿಸಿ, ಬಳಕೆಗೆ ಯೋಹಗ್ಯವಾಗುವಂತೆ ಮಾಡಬೇಕಾಗಿದೆ ಎಂಬುದು ಇಲ್ಲಿನವರ ಆಗ್ರಹವಾಗಿದೆ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ, ಜನರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ