ಎರಡ್ಮೂರು ಪ್ರಧಾನಿಗಳ ಸಾವು: ಕ್ರೋಧಿ ನಾಮ ಸಂವತ್ಸರದ ಆಘಾತಕಾರಿ ಭವಿಷ್ಯ ನುಡಿದ ಕೋಡಿಶ್ರೀ

| Updated By: ರಮೇಶ್ ಬಿ. ಜವಳಗೇರಾ

Updated on: Jun 25, 2024 | 5:59 PM

ಕೋಡಿಶ್ರೀ ಸ್ವಾಮೀಜಿ ಭವಿಷ್ಯ: ಮೊನ್ನೇ ಅಷ್ಟೇ ಚಿಕ್ಕಬಳ್ಳಾಪುರದಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಮುಂದೆ ರಾಜ್ಯದಲ್ಲಾಗುವ ಅನಾಹುತ, ರಾಜ್ಯ ರಾಜಕಾರಣದ ಬಗ್ಗೆ ಹೇಳಿದ್ದರು. ಇದೀಗ ಧಾರವಾಡದಲ್ಲೂ ಸಹ ಕೋಡಿಶ್ರೀ ಕ್ರೋಧಿ ನಾಮ ಸಂವತ್ಸರದ ಭವಿಷ್ಯ ನುಡಿದಿದ್ದು, ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಆಗಲಿದೆ ಎಂದಿದ್ದಾರೆ. ಹಾಗಾದ್ರೆ, ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಕ್ರೋಧಿ ನಾಮ ಸಂವತ್ಸರದ ಭವಿಷ್ಯವಾಣಿ ಏನು ಎನ್ನುವುದನ್ನು ಈ ಕೆಳಗಿನಂತಿದೆ ನೋಡಿ.

ಎರಡ್ಮೂರು ಪ್ರಧಾನಿಗಳ ಸಾವು: ಕ್ರೋಧಿ ನಾಮ ಸಂವತ್ಸರದ ಆಘಾತಕಾರಿ ಭವಿಷ್ಯ ನುಡಿದ ಕೋಡಿಶ್ರೀ
ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ
Follow us on

ಧಾರವಾಡ, (ಜೂನ್ 25): ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ(Krodhi Samvathsara)ನಡೆಯುತ್ತಿದೆ. ಈ ಸಂವತ್ಸರದಲ್ಲಿ ಒಳಿತಿಗಿಂತ ಕೆಡಕು ಹೆಚ್ಚು ಎನ್ನಬಹುದು. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ. ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನು ಅನ್ನೋದನ್ನು ಶ್ರಾವಣದಲ್ಲಿ ಹೇಳುವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ(Kodi Mutt Dr. Shivananda Shivayogi Rajendra Swamiji) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಇನ್ನು ಇದೇ ವೇಳೆ ರಾಜಕೀಯ ಬಗ್ಗೆ ಮಾತನಾಡಿರುವ ಕೋಡಿಶ್ರೀ, ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ, ಇನ್ನೂ ಅಂಗಡಿ ಓಪನ್ ಆಗಿಲ್ಲ. ವ್ಯಾಪಾರ ಶುರುವಾಗಲಿ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ. ಅದೆಲ್ಲದರ ಬಗ್ಗೆ ಸಮಗ್ರವಾಗಿ ಶ್ರಾವಣದಲ್ಲಿ ಹೇಳುವೆ. ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಎಂದು ಶ್ರಾವಣದಲ್ಲಿ ಹೇಳುವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮೋದಿ-ಸಿದ್ದರಾಮಯ್ಯ ಸರ್ಕಾರ, ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರ ಕರ್ಣನಿಂದ ಕಟ್ ಮಾಡಿಸಿದರು. ಈಗ ಅಭಿಮನ್ಯುವಿನ ಹೆಂಡತಿ ಸಂಸತ್ ಪ್ರವೇಶ ಮಾಡುತ್ತಾಳೆ. ಆದರೆ ದುರ್ಯೋಧನನ ತೊಡೆ ಮುರಿಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ ಎಂದು ಮಾರ್ಮಿಕವಾಗಿ ನುಡಿದ ಕೋಡಿಶ್ರೀ, ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಆಗಲಿದೆ ಎಂದು ಆಘಾತಕಾರಿ ಭವಿಷ್ಯವಾಣಿ ನುಡಿದರು.

ಕರೆಯದೆ ಬರುವವುದು ಕೋಪ. ಬರೆಯದೇ ಓದುವವನು ಕಣ್ಣು. ಬರಗಾಲಿನಲ್ಲಿ ನಡೆಯುವವನ ಮನಸ್ಸು. ಈ ಮೂರು ನಿಯಂತ್ರಣದಲ್ಲಿಡಬೇಕು. ದುಡ್ಡು, ಅಧಿಕಾರ ಮುಖ್ಯ ಎಂದು ಹೊರಟಿದ್ದಾರೆ. ಅಧಃಪತನಕ್ಕೆ ಇದೇ ಕಾರಣವಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Tue, 25 June 24