ಪಾಕ್​ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್: ಮೂವರು ಮುಸ್ಲಿಂ ಯುವಕರ ವಿರುದ್ದ ಕೇಸ್​ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2022 | 2:51 PM

ಇಂಡಿಯಾ ಪಾಕಿಸ್ತಾನ ಕ್ರಿಕೇಟ್ ಪಂದ್ಯ ವೇಳೆ ಪಾಕ್​​ಗೆ ಬೆಂಬಲಿಸಿ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ಸ್ಟೇಟಸ್ ಹಾಕಿದ್ದಾರೆ. ಶ್ರೀನಿವಾಸಪುರ ಪುರಸಭೆ ನಾಮ ನಿರ್ದೇಶಿತ ಸದಸ್ಯ ರಾಮಾಂಜಿ ಎಂಬುವವರಿಂದ ದೂರು ನೀಡಲಾಗಿದೆ.

ಪಾಕ್​ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್: ಮೂವರು ಮುಸ್ಲಿಂ ಯುವಕರ ವಿರುದ್ದ ಕೇಸ್​ ದಾಖಲು
ವೈರಲ್​ ಆದ ಸ್ಟೇಟಸ್
Follow us on

ಕೋಲಾರ: ಸಾಮಾಜಿಕ ಜಾಲ ತಾಣಗಳಲ್ಲಿ ಪಾಕಿಸ್ತಾನ ಪರ ಸ್ಟೇಟಸ್ ಹಾಕಿದ ಹಿನ್ನೆಲೆ ಮೂರು ಜನ ಮುಸ್ಲಿಂ ಯುವಕರ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಶ್ರೀನಿವಾಸಪುರ ಪಟ್ಟಣದ ಐಡಿಯಲ್ ಮೊಹಲ್ಲಾದ ನಿವಾಸಿಗಳಾದ ಸುಹೈಲ್, ತೋಹಿಬ್ ಪಾಷಾ, ಮನ್ಸೂರ್ ಉಲ್ಲಾ ವಿರುದ್ದ ಪ್ರಕರಣ ದಾಖಲಾಗಿದೆ. ಇದೆ ತಿಂಗಳ 6 ರಂದು ನಡೆದ ಇಂಡಿಯಾ ಪಾಕಿಸ್ತಾನ ಕ್ರಿಕೇಟ್ ಪಂದ್ಯ ವೇಳೆ ಪಾಕ್​​ಗೆ ಬೆಂಬಲಿಸಿ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ಸ್ಟೇಟಸ್ ಹಾಕಿದ್ದಾರೆ. ಶ್ರೀನಿವಾಸಪುರ ಪುರಸಭೆ ನಾಮ ನಿರ್ದೇಶಿತ ಸದಸ್ಯ ರಾಮಾಂಜಿ ಎಂಬುವವರಿಂದ ದೂರು ನೀಡಲಾಗಿದೆ. ಓರ್ವ ಎ-೧ ಅರೋಪಿ ಸುಹೈಲ್ ಬಂಧನ ಮಾಡಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ರೌಡಿಸಂ ಹವಾ ಮೆಂಟೇನ್​ ಮಾಡಲು ವೃದ್ಧನ ಕಗ್ಗೊಲೆ: ಪುಡಿ ರೌಡಿ ವಿರುದ್ಧ ದೂರು ದಾಖಲು

ಆನೇಕಲ್: ರೌಡಿಸಂ ಹವಾ ಇರಬೇಕು ಅಂತ ವೃದ್ಧನನ್ನ ಗ್ಯಾಂಗ್​ ಒಂದು ಕೊಲೆ ಮಾಡಿರುವಂತಹ ಘಟನೆ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ನಡೆದಿದೆ. ಜೈಲಿಗೆ ಹೋಗಿ ಬಂದ ಬಳಿಕ ಏರಿಯಾದಲ್ಲಿ ಹವಾ ಇಡಲು ಈ ಕೃತ್ಯವೆಸಲಾಗಿದೆ. ಸೀತಪ್ಪ(68) ಕೊಲೆಯಾದ ವ್ಯಕ್ತಿ. ಪವನ್ ಅಂಡ್ ಗ್ಯಾಂಗ್​ನಿಂದ ಕೃತ್ಯವೆಸಗಲಾಗಿದೆ. ವ್ಯಕ್ತಿಯೊರ್ವನಿಗೆ ಚಾಕು ಇರಿದ ಪ್ರಕರಣದಲ್ಲಿ ಪವನ್ ಜೈಲು ಸೇರಿದ್ದ. ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದು, ಏರಿಯಾದಲ್ಲಿ ನಂದೆ ಹವಾ ಇರಬೇಕು ಎಂದು ರೌಡಿಸಂ ಶುರುವಿಟ್ಟಿದ್ದ. ಸಿಕ್ಕ ಸಿಕ್ಕವರಿಗೆ ಹೊಡೆದು ಏರಿಯಾದಲ್ಲಿ ಡಾನ್ ಆಗಲು ಹೊರಟಿದ್ದ. ಕಳೆದ ತಿಂಗಳು 29 ತಾರೀಖು ಪಕ್ಕದ ಮನೆ ಯುವಕ ತಾನು ಕರೆದಾಗ ಬರಲಿಲ್ಲ ಹೆಮಂತ್ ಎಂಬಾತನಿಗೆ ಥಳಿಸಿದ್ದ.

ತನ್ನ ಬಗ್ಗೆ ಗೊತ್ತು ತಾನೇ ಈಗಾಗಲೇ ಒಬ್ಬನಿಗೆ ಚುಚ್ಚಿದ್ದಿನಿ. ನೀನು ನನ್ನ ಶಿಷ್ಯನಾಗಬೇಕು, ಇಲ್ಲದಿದ್ದರೆ ನನ್ನ ಕಥೆ ಗೊತ್ತಲ್ಲ. ಕರೆದಾಗ ಬರಬೇಕು, ಕೇಳಿದ್ದು ಕೊಡಿಸಬೇಕು, ಹೇಳಿದ್ದು ಮಾಡಬೇಕು ಎಂದಿದ್ದ. ನಾನು ಕರೆದಾಗ ಯಾಕೆ ಬಂದಿಲ್ಲ ಎಂದು ಹಲ್ಲೆ ನಡೆಸಿದ್ದ. ಇದನ್ನು ಹೇಮಂತ ಮನೆಯವರು ಪ್ರಶ್ನಿಸಿದ್ದರು. ರೊಚ್ಚಿಗೆದ್ದ ಪವನ್ ಇಡೀ ಕುಟುಂಬದ ಮೇಲೆ ದಾಳಿ ಮಾಡುವ ಧಮ್ಕಿ ಹಾಕಿದ್ದ. ಹೇಳಿದಂತೆ ಸಂಜೆ ಹೊತ್ತಿಗೆ ಹೆಂಮತ್ ಕುಟುಂಬದ ಮೇಲೆ ಪವನ್ ಅಂಡ್ ಗ್ಯಾಂಗ್ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಇಡೀ ಕುಟುಂಬದ ಮೇಲೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ದಾಳಿ ವೇಳೆ ಕುಟುಂಬದ ಹಿರಿ ಜೀವ ಸೀತಪ್ಪನ ಸೊಂಟವನ್ನ ಕಿರಾತಕರು ಮುರಿದಿದ್ದಾರೆ.

ಅಕ್ಕಪಕ್ಕದ ಮನೆಯವರು ನೆರವಿಗೆ ಧಾವಿಸಿ ಕುಟುಂಬವನ್ನು ರಕ್ಷಿಸಿದ್ರು. ಸರ್ಜಾಪುರ ಪೊಲೀಸ್ ಠಾಣೆ ಹಿಂಭಾಗವೇ ದಾಂಧಲೆ ನಡೆದಿತ್ತು. ಪೊಲೀಸರು ನೆಪಕ್ಕೆ ಪ್ರಕರಣ ದಾಖಲಿಸಿ ಸುಮ್ಮನಾಗಿದ್ದರು. ಪುಡಿ ರೌಡಿ ಪವನ್ ಅಟ್ಟಹಾಸಕ್ಕೆ ಸೀತಪ್ಪ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬ ನ್ಯಾಯ ಮತ್ತು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:48 pm, Thu, 8 September 22