ರಾಹುಲ್ ಗಾಂಧಿ ಭಾಷಣ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿಲ್ಲ: ಹೀಗಾಗಿ ಕೋಲಾರದಲ್ಲಿ ಗೆಲ್ಲುತ್ತೇನೆಂದ ವರ್ತೂರ್ ಪ್ರಕಾಶ್

|

Updated on: Apr 17, 2023 | 2:20 PM

ರಾಹುಲ್ ಗಾಂಧಿ ಅವರು ಕೋಲಾರಕ್ಕೆ ಬಂದು ಹೋದ ಬಗ್ಗೆ ಬಿಜೆಪಿ‌ ಅಭ್ಯರ್ಥಿ ವರ್ತೂರ್ ಪ್ರಕಾಶ್ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಭಾಷಣ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿಲ್ಲ. ಹೀಗಾಗಿ ಕೋಲಾರದಲ್ಲಿ ನಾನು ಗೆಲ್ಲುತ್ತೇನೆ ಎಂದರು.

ರಾಹುಲ್ ಗಾಂಧಿ ಭಾಷಣ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿಲ್ಲ: ಹೀಗಾಗಿ ಕೋಲಾರದಲ್ಲಿ ಗೆಲ್ಲುತ್ತೇನೆಂದ ವರ್ತೂರ್ ಪ್ರಕಾಶ್
ವರ್ತೂರ್ ಪ್ರಕಾಶ್
Follow us on

ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕೆಲವೇ ದಿನಗಳು ಬಾಕಿ ಇದ್ದು ರಾಜಕೀಯ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಏಪ್ರಿಲ್ 16ರ ಭಾನುವಾರ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆಂದು ಕೋಲಾರದಲ್ಲಿ ಹಮ್ಮಿಕೊಂಡಿದ್ದ ಜೈ ಭಾರತ್ ಸಮಾವೇಶದಲ್ಲಿ ರಾಹುಲ್ ಗಾಂಧಿ(Rahul Gandhi) ಭಾಗಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸದ್ಯ ಈಗ ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್(Varthur Prakash) ಅವರು ರಾಹುಲ್ ಗಾಂಧಿ ಭೇಟಿ ಕುರಿತು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಕೋಲಾರಕ್ಕೆ ಬಂದು ಹೋಗಿದ್ದಾರೆ. ಹೀಗಾಗಿ ನಾನು ಗೆಲ್ಲುವೆ. ಕಾರಣ ರಾಹುಲ್ ಗಾಂಧಿ ಹೋಗಿ ಭಾಷಣ ಮಾಡಿದ ಕಡೆ ಎಲ್ಲಿಯೋ ಕಾಂಗ್ರೆಸ್ ಗೆದ್ದಿಲ್ಲ. ಹೀಗಾಗಿ ಕೋಲಾರದಲ್ಲಿ ಬಿಜೆಪಿ ಬಾವುಟ ಹಾರಿಸುವುದು ಇದರ ಸಂಕೇತ. ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊತ್ತೂರು ಮಂಜುನಾಥ್ ಆಯ್ಕೆಯಾಗಿದ್ದಾರೆ. ಅವರು ನನ್ನ ಸ್ನೇಹಿತರು, ಪ್ರತಿಸ್ಪರ್ಧಿ ಯಾರೇ ಇದ್ದರು ಬಿಜೆಪಿ ಬಾವುಟ ಬಹಳ ದೊಡ್ಡಮಟ್ಟದಲ್ಲಿ ಹಾರಿಸುವೆ. ಇಡೀ ದೇಶ ನೋಡುವ ಹಾಗೆ ರಿಸಲ್ಟ್ ಇರುತ್ತೆ ಎಂದು ರಾಹುಲ್ ಗಾಂಧಿ ಭೇಟಿ ಬಗ್ಗೆ ವರ್ತೂರ್ ಪ್ರಕಾಶ್ ಟೀಕೆ ಮಾಡಿದ್ದಾರೆ.

ಇನ್ನು ಇದೇ ವೇಳೆ ಜಗದೀಶ್ ಶೆಟ್ಟರ್ ಕುರಿತು ಮಾತನಾಡಿದ ವರ್ತೂರ್ ಪ್ರಕಾಶ್, ನಾನು ಬಿಜೆಪಿಗೆ ಹೊಸದಾಗಿ ಸೇರಿದ್ದೇನೆ. ಅವರು ಹಿರಿಯರು, ಅವರ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ ಎಂದರು.

ಇದನ್ನೂ ಓದಿ: ಕೋಲಾರಕ್ಕೆ ಆಗಮಿಸಿದ ರಾಹುಲ್ ಗಾಂಧಿ ಹೆಲಿಕಾಪ್ಟರ್ ಇಂಚಿಂಚು ಪರಿಶೀಲಿಸಿದ ಚುನಾವಣಾಧಿಕಾರಿಗಳು

ವರ್ತೂರ್ ಪ್ರಕಾಶ್ ನಾಮಪತ್ರ ಸಲ್ಲಿಕೆ

ಕುರುಡುಮಲೆ, ಕೋಲಾರಮ್ಮ, ಸೋಮೇಶ್ವರ ದೇವಾಲಯಗಳಿಗೆ ಭೇಟಿ ನೀಡಿದ ನಂತರ ಬಿಜೆಪಿ‌ ಅಭ್ಯರ್ಥಿ ವರ್ತೂರ್ ಪ್ರಕಾಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ವೆಂಕಟಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಜೈ ಭಾರತ್ ಸಮಾವೇಶದಲ್ಲಿ ರಾಹುಲ್ ಅಬ್ಬರ

ಸಂಸದ ಸ್ಥಾನದಿಂದ ರಾಹುಲ್‌ಗಾಂಧಿ ಅನರ್ಹರಾಗಿದ್ದಾರೆ. ಕಾಂಗ್ರೆಸ್‌ ನಾಯಕ ಹೀಗೆ ಅನರ್ಹ ಆಗೋಕೆ ಕಾರಣವೇ 4 ವರ್ಷದ ಹಿಂದೆ ಕೋಲಾರದಲ್ಲಿ ಆಡಿದ್ದ ಮಾತು. ಹೀಗಾಗಿ ಅದೇ ಕೋಲಾರಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಜೈ ಭಾರತ್‌ ಹೆಸರಿನಿಂದಲೇ ಬಿಜೆಪಿ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ಶುರು ಮಾಡಿದ್ದಾರೆ. ಕೋಲಾರದ ಟಮಕಾ ಗ್ರಾಮಕ್ಕೆ ಕಾಲಿಟ್ಟಿದ್ದ ರಾಹುಲ್, ಮಾತುಗಳಿಂದಲೇ ಧೂಳೆಬ್ಬಿಸಿದ್ರು. ಭಾಷಣದಲ್ಲೇ ಗರ್ಜಿಸುತ್ತಾ ಹೂಂಕರಿಸಿದ್ರು. ಜೈ ಭಾರತ್ ಸಮಾವೇಶದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ನಿಮ್ಮ ಬೆದರಿಕೆಗಳಿಗೆ ನಾನು ಬಗಲ್ಲ. ಜೈಲಿಗೆ ಹಾಕಿದ್ರೂ ಹೆದರೋದಿಲ್ಲ. ಅಷ್ಟೇ ಅಲ್ಲ ನನ್ನ ಅನರ್ಹಗೊಳಿಸಿದ್ರೂ ತೊಂದರೆ ಇಲ್ಲ. ನಾನು ನಿಮ್ಮ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ ಅಂತಾ ಹೇಳುತ್ತಲೇ ಅದಾನಿ, ಮೋದಿ ಭ್ರಷ್ಟಾಚಾರದ ಚಿಹ್ನೆ ಆಗಿದ್ದಾರೆ ಅಂತಾ ಕಿಡಿಕಾರಿದ್ರು. ಇದಿಷ್ಟೇ ಅಲ್ಲ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣಗಳ ಪಟ್ಟಿಯೇ ಇದೆ. ಆದ್ರೂ ಪಿಎಂ ಹಾಗೂ ಸಿಎಂ ಕೈ ಕಟ್ಟಿ ಕುಳಿತಿದ್ದಾರೆ ಅಂತಾ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:20 pm, Mon, 17 April 23