ಕೋಲಾರ: ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದ ಗಂಗಾಶ್ರೀ ಆನೆ ಸಾವು

|

Updated on: Jun 19, 2024 | 7:21 AM

1996ರಿಂದ ಇಲ್ಲಿಯವರೆಗೂ ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದಲ್ಲಿದ್ದ 75 ವರ್ಷದ ಗಂಗಾಶ್ರೀ ಆನೆಯು ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಆನೆ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಪುನರ್ವಸತಿ ಕೇಂದ್ರ ಮುಖ್ಯಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಕೋಲಾರ: ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದ ಗಂಗಾಶ್ರೀ ಆನೆ ಸಾವು
ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯ
Follow us on

ಕೋಲಾರ, ಜೂನ್.19: ಇತ್ತೀಚೆಗೆ ದಸರಾ ಆನೆ ಅಶ್ವತ್ಥಾಮ, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ಕೋಲಾರ ತಾಲೂಕಿನ ಕಾಜಿಕಲ್ಲಹಳ್ಳಿ ಬಳಿ ಇರುವ ಆನೆ ಪುನರ್ವಸತಿ ಕೇಂದ್ರದಲ್ಲಿದ್ದ ಗಂಗಾಶ್ರೀ ಆನೆ (Elephant) ಮೃತಪಟ್ಟಿದೆ. ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದಲ್ಲಿದ್ದ (Yediyur Siddalingeshwar Temple) 75 ವರ್ಷದ ಗಂಗಾಶ್ರೀ ಆನೆಯು ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದಲ್ಲಿದ್ದ ಗಂಗಾಶ್ರೀ ಆನೆಗೆ ಅನಾರೋಗ್ಯ ಉಂಟಾಗಿತ್ತು. ಹೀಗಾಗಿ ಕೋಲಾರಕ್ಕೆ ಮೂರು ತಿಂಗಳ ಹಿಂದೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಕಳೆದ ಮೂರು ತಿಂಗಳಿಂದ ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿ ಇರುವ ಆನೆಗಳ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ 75 ವರ್ಷದ ಗಂಗಾಶ್ರೀ ಮೃತಪಟ್ಟಿದೆ. ಸದ್ಯ ಆನೆ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಪುನರ್ವಸತಿ ಕೇಂದ್ರ ಮುಖ್ಯಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

1996ರಲ್ಲಿ ಗದುಗಿನ ಮಠದ ಸ್ವಾಮೀಜಿಯೊಬ್ಬರು ಯಡಿಯೂರು ದೇವಾಲಯಕ್ಕೆ ಗಂಗಾಶ್ರೀ ಆನೆಯನ್ನು ಕೊಡುಗೆಯಾಗಿ ನೀಡಿದ್ದರು. ಅಂದಿನ ಸಿಎಂ ಆಗಿದ್ದ ಜೆಹೆಚ್ ಪಟೇಲ್ ಅವರು ಸರ್ಕಾರದ ವತಿಯಿಂದ ಸ್ವೀಕರಿಸಿ ದೇವಾಲಯಕ್ಕೆ ಹಸ್ತಾಂತರ ಮಾಡಿದ್ದರು. 28 ವರ್ಷಗಳಿಂದ ಯಡಿಯೂರು ಮಠದಲ್ಲಿಯೇ ಆನೆ ಇತ್ತು. ಆದರೆ ಇತ್ತೀಚೆಗೆ ಹೆಣ್ಣಾನೆಗೆ ಅನಾರೋಗ್ಯ ಕಾಡಿದ್ದು ಆನೆಯನ್ನು ಚಿಕಿತ್ಸೆ ನೀಡುವ ಸಲುವಾಗಿ ಕೋಲಾರದ ಆನೆಗಳ ಆರೈಕೆ ಕೇಂದ್ರಕ್ಕೆ ಕರೆತರಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆನೆ ಮೃತಪಟ್ಟಿದೆ.

ಇದನ್ನೂ ಓದಿ: ಬೆಂಗಳೂರು ಯೂನಿವರ್ಸಿಟಿಯಲ್ಲಿ ವಾಹನ ಸಂಚಾರ ಹೆಚ್ಚಳ; ಸರ್ಕಾರಕ್ಕೆ ಪತ್ರ ಬರೆದ ಬಸವರಾಜ ಹೊರಟ್ಟಿ

ಮೈಸೂರಿನಲ್ಲಿ ಆನೆ ಶವ ಪತ್ತೆ

ಮೈಸೂರು ಜಿಲ್ಲೆಯಲ್ಲಿ ಆನೆಗಳ ಸಾವು ಮುಂದುವರಿದಿದೆ. 25 ರಿಂದ 30 ವರ್ಷದ ಕಾಡಾನೆ ಶವ ಪತ್ತೆಯಾಗಿದೆ. ಹುಣಸೂರು ತಾಲ್ಲೂಕಿನ ವ್ಯಾಪ್ತಿಯ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆ ಶವ ಪತ್ತೆಯಾಗಿದೆ. ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ವೈದ್ಯಾಧಿಕಾರಿಗಳು ಆನೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ