Puneeth Rajkumar statue: ಗಣೇಶನ ಹಬ್ಬಕ್ಕೆ ಪುನೀತ್​ ರಾಜ್ ಕುಮಾರ್​ ಕುಟುಂಬಕ್ಕೆ ಕೊಡಲು ಸಿದ್ದವಾಗಿದೆ ಅಪ್ಪು ಗಣೇಶ!

| Updated By: ಸಾಧು ಶ್ರೀನಾಥ್​

Updated on: Aug 18, 2022 | 7:30 PM

ಪೈಕಿ ಪುನೀತ್​ ರಾಜ್​ ಕುಮಾರ್​ ಅವರನ್ನು ಮುದ್ದು ಮಾಡುತ್ತಿರುವ ಗಣೇಶನಿದ್ದರೆ ಪುನೀತ್​ ಹೆಗಲ ಮೇಲಿರುವ ಇಲಿ ಅದನ್ನು ಗಮನಿಸುತ್ತಿದ್ದರೆ ಪಾರಿವಾಳ ಗಣೇಶನ ತಲೆಯ ಮೇಲೆ ಕುಳಿತು ನೋಡುವ ಹಾಗೆ ಅದ್ಬುತವಾಗಿ ಮಾಡಿದ್ದಾರೆ. ಈ ಗಣೇಶನನ್ನು ಪುನಿತ್​ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಅವರಿಗೆ ತಲುಪಿಸುವ ಸಲುವಾಗಿ ಮಾಡಲಾಗುತ್ತಿದೆ ಅನ್ನೋದು ರಾಜ್​ ಕುಟುಂಬದ ಅಭಿಮಾನಿ ಭೀಮರಾಜ್​ ಅವರ ಮಾತು.

Puneeth Rajkumar statue: ಗಣೇಶನ ಹಬ್ಬಕ್ಕೆ ಪುನೀತ್​ ರಾಜ್ ಕುಮಾರ್​ ಕುಟುಂಬಕ್ಕೆ ಕೊಡಲು ಸಿದ್ದವಾಗಿದೆ ಅಪ್ಪು ಗಣೇಶ!
ಗಣೇಶನ ಹಬ್ಬಕ್ಕೆ ಪುನೀತ್​ ರಾಜ್ ಕುಮಾರ್​ ಕುಟುಂಬಕ್ಕೆ ಕೊಡಲು ಸಿದ್ದವಾಗಿದೆ ಅಪ್ಪು ಗಣೇಶ!
Follow us on

ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್​ ಕುಮಾರ್​ ನಮ್ಮನ್ನು ಅಗಲಿ ಹತ್ತು ತಿಂಗಳು ಕಳೆದಿದೆ. ಆದರೂ ಅವರ ಅಭಿಮಾನಿಗಳಿಗೆ ಪುನೀತ್​ ರಾಜ್​ ಕುಮಾರ್​ ಮೇಲಿನ ಅಭಿಮಾನ ಮಾತ್ರ ಒಂದು ಚೂರೂ ಕಡಿಮೆಯಾಗಿಲ್ಲ. ಹೆಜ್ಜೆ ಹೆಜ್ಜೆಗೂ ತಮ್ಮ ಅಭಿಮಾನವನ್ನು ತೋರಿಸುತ್ತಲೇ ಬಂದಿದ್ದಾರೆ. ಈ ಬಾರಿ ಇಲ್ಲೊಬ್ಬ ಅಭಿಮಾನಿ ಪುನೀತ್ ರಾಜ್​ ಕುಮಾರ್​ರನ್ನು ದೇವ ಮಾನವನನ್ನಾಗಿ ಮಾಡುತ್ತಿದ್ದಾರೆ.

ಗಣೇಶ ಹಬ್ಬಕ್ಕೆ ಅಭಿಮಾನಿಗಳ ಆರಾಧ್ಯ ದೈವವಾದ ಪುನೀತ್!​

ಪುನೀತ್​ ರಾಜ್​ ಕುಮಾರ್​ ಅವರನ್ನು ಮುದ್ದು ಮಾಡುತ್ತಿರುವ ಗಣೇಶ ಮೂರ್ತಿ, ಇನ್ನೊಂದರಲ್ಲಿ ಪುನೀತ್​ ರಾಜ್​ ಕುಮಾರ್​ ಅವರಿಗೆ ಮೋದಕ ತಿನ್ನಿಸುತ್ತಿರುವ ಗಣೇಶ ಮೂರ್ತಿ. ಇನ್ನೊಂದರಲ್ಲಿ ಪುನೀತ್​ ರಾಜ್​ ಕುಮಾರ್​ ಅವರಿಗೆ ಆಶೀರ್ವದಿಸುತ್ತಿರುವ ಗಣೇಶ. ಹೀಗೆ ಅತ್ಯಾಕರ್ಶಕ ಗಣೇಶ ಮೂರ್ತಿಗಳು ನಮಗೆ ಕಂಡು ಬಂದಿದ್ದು ಕೋಲಾರದ ಗಾಂಧಿನಗರದಲ್ಲಿ. ಹೌದು ಕೋಲಾರದ ಗಾಂಧಿನಗರದಲ್ಲಿ ಭೀಮರಾಜ್ ಅವರು​ ಡಾ.ರಾಜ್ ಕುಮಾರ್​ ಕುಟುಂಬದ ಬಹು ದೊಡ್ಡ ಅಭಿಮಾನಿ.

ಮೂಲತ: ಕಲಾವಿದರಾದ ಭೀಮಾರಾಜ್ ಅವರು ಪುನೀತ್​ ರಾಜ್​ ಕುಮಾರ್ ಅಗಲಿಕೆ ನಂತರ ಈ ಬಾರಿ ಬರುವ ಗಣೇಶ ಹಬ್ಬಕ್ಕೆ ಪುನೀತ್​ ಹಾಗೂ ಡಾ.ರಾಜ್​ ಕುಮಾರ್ ಅವರ ಕುಟುಂಬಕ್ಕೆ ವಿಶೇಷವಾಗಿ ಏನಾದರೂ ಮಾಡಿಕೊಡಬೇಕು ಎಂದು ನಿರ್ಧಾರ ಮಾಡಿ ಅಭಿಮಾನಿಗಳ ಆರಾಧ್ಯ ದೈವ ಪುನಿತ್​ ರಾಜ್​ ಕುಮಾರ್ ಅವರನ್ನು ಗಣೇಶ ಮೂರ್ತಿಯೊಂದಿಗೆ ಸುಂದರವಾದ ತಮ್ಮ ಕಲ್ಪನೆಯಲ್ಲಿ ಯಾವುದೇ ಪರಿಸರಕ್ಕೆ ಹಾನಿಯಾಗದ ಪರಿಸರ ಸ್ನೇಹಿ ಗಣೇಶಗಳನ್ನು ತಯಾರು ಮಾಡಿದ್ದಾರೆ. ಭೀಮರಾಜ್​ ಹಾಗೂ ಅವರ ಶಿಷ್ಯರು ಸೇರಿ ಕಳೆದೊಂದು ತಿಂಗಳಿಂದ ಸದ್ಯಕ್ಕೆ ನಾಲ್ಕೈದು ವಿಭಿನ್ನ ಪುನೀತ್​ ರಾಜ್​ ಕುಮಾರ್ ಗಣೇಶಗಳನ್ನು ತಯಾರು ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜ್​ ಕುಮಾರ್​ ಅವರಿಗೆ ನೀಡಲು ಸಿದ್ದತೆ..!

ಇವರು ಮಾಡಿರುವ ಹಲವು ಆಕರ್ಷಕ ಮೂರ್ತಿಗಳ ಪೈಕಿ ಪುನೀತ್​ ರಾಜ್​ ಕುಮಾರ್​ ಅವರನ್ನು ಮುದ್ದು ಮಾಡುತ್ತಿರುವ ಗಣೇಶನಿದ್ದರೆ ಪುನೀತ್​ ಹೆಗಲ ಮೇಲಿರುವ ಇಲಿ ಅದನ್ನು ಗಮನಿಸುತ್ತಿದ್ದರೆ ಪಾರಿವಾಳ ಗಣೇಶನ ತಲೆಯ ಮೇಲೆ ಕುಳಿತು ನೋಡುವ ಹಾಗೆ ಅದ್ಬುತವಾಗಿ ಮಾಡಿದ್ದಾರೆ. ಈ ಗಣೇಶನನ್ನು ಪುನಿತ್​ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಅವರಿಗೆ ತಲುಪಿಸುವ ಸಲುವಾಗಿ ಮಾಡಲಾಗುತ್ತಿದೆ ಅನ್ನೋದು ರಾಜ್​ ಕುಟುಂಬದ ಅಭಿಮಾನಿ ಭೀಮರಾಜ್​ ಅವರ ಮಾತು.

ರಾಜ್​ ಕುಮಾರ್​ ಜೊತೆಗೆ ಕೆಲಸ ಮಾಡಿರುವ ಕಲಾವಿದ ಭೀಮರಾಜ್..!​

ಭೀಮಾರಾಜ್ ಅವರು ರಾಜ್​ ಕುಮಾರ್​ ಅವರ ಜೊತೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೆಲಸ ಮಾಡಿದ್ದಾರೆ ಅವರ ಸರಳತೆ ನೋಡಿ ಅವರ ದೊಡ್ಡ ಅಭಿಮಾನಿಯಾಗಿದ್ದರು. ಆದಾದ ನಂತರ ಅವರಷ್ಟೇ ಜನರ ಮನಸ್ಸಿನಲ್ಲಿ ಹೆಸರು ಮಾಡಿದ ಪುನೀತ್ ರಾಜ್​ ಕುಮಾರ್​ ಅವರಿಗೆ ಮನಸೋತು ಹೋಗಿದ್ದಾರೆ. ಅವರ ಸಮಾಜ ಸೇವೆ ಕಾರ್ಯಗಳು, ತಾನು ಎಡಗೈಗೆ ಮಾಡಿದ ಕೆಲಸ ಬಲಗೈಗೆ ತಿಳಿಯದಂತೆ ಮಾಡಿರುವ ಉದಾರ ಸೇವೆಗಳಿಗೆ ಮನಸೋತು ಭೀಮರಾಜ್​ ಅಷ್ಟೇ ಅಲ್ಲ ಅವರ ಮಕ್ಕಳು ಪುನೀತ್​ ರಾಜ್​ ಕುಮಾರ್ ಅವರ ಅಭಿಮಾನಿಗಳಾಗಿದ್ದಾರೆ. ಎಲ್ಲರೂ ಸೇರಿ ಪುನೀತ್​ ರಾಜ್​ ಕುಮಾರ್​ ಗಣೇಶ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಮೊದಲು ನಾವ್ಯಾರೂ ಪುನೀತ್ ಅವರ ಅಭಿಮಾನಿಗಳಾಗಿರಲಿಲ್ಲ, ಆದರೆ ಅವರು ನಮ್ಮನ್ನು ಅಗಲಿನದ ನಂತರ ಅವರ ಕೆಲಸ ಕಾರ್ಯಗಳನ್ನು ನೋಡಿ ಅವರ ಅಭಿಮಾನಿಗಳಾಗಿ ಹೋಗಿದ್ದೇವೆ, ಅವರು ಮಾಡಿದಂತೆ ನಾವು ಅವರ ಆದರ್ಶಗಳನ್ನು ಪಾಲಿಸುತ್ತೇವೆ ಅನ್ನೋದು ಭೀಮರಾಜ್​ ಅವರ ಮಕ್ಕಳು ಹಾಗೂ ಶಿಷ್ಯರ ಮಾತುಗಳು. ಅದಕ್ಕಾಗಿ ಯಾವುದೇ ಹಚ್ಚುಗಳನ್ನು ಬಳಸದೆ ಉತ್ತಮವಾದ ಜೇಡಿ ಮಣ್ಣು ಬಳಸಿ ಕೈಯಿಂದ ಮಾಡುವ ಗಣೇಶಗಳನ್ನು ಮಾಡುವಲ್ಲಿ ಈ ಕುಟುಂಬ ಪ್ರಖ್ಯಾತಿ ಹಾಗಾಗಿ ಈಬಾರಿ ಪುನೀತ್​ ರಾಜಕುಮಾರ್ ಗಣೇಶಗಳ ಜೊತೆಗೆ ಕತ್ತು ತಿರುಗಿಸುವ ಗಣೇಶ, ಆಶೀರ್ವಾದ ಗಣೇಶ ರೀತಿಯಲ್ಲಿ ವಿಭಿನ್ನ ಗಣೇಶಗಳನ್ನು ಮಾಡಲಾಗುತ್ತದೆ. ಜೊತೆಗೆ ಈ ಬಾರಿ ಪುನೀತ್ ರಾಜ್​ ಕುಮಾರ್​​ ಅವರ ಗಣೇಶಗಳಿಗೆ ಹೆಚ್ಚಿನ ಬೇಡಿಕೆ ಇದೆ ಅನ್ನೋದು ಕಲಾವಿದರ ಮಾತು.

ಕೆಲವ್ಯಕ್ತಿಗಳು ಸತ್ತ ಮೇಲು‌ ಬದುಕುತ್ತಾರೆ ಎನ್ನುವುದಕ್ಕೆ ಪುನೀತ್ ರಾಜಕುಮಾರ್ ಅವರು ತಾಜಾ ಉದಾಹರಣೆ, ಇವರು ಮಾಡಿರುವ ಸಾಮಾಜಿಕ ಸೇವೆ ಜನ್ರ ಮನಸ್ಸಿನಲ್ಲಿ‌ ಉಳಿಯುವ‌‌ ಜೊತೆಗೆ ಅವರು ಮಾಡಿರುವ ಕಾರ್ಯಗಳು ಸಾವಿರಾರು‌ ಜನರಿಗೆ ಆದರ್ಶವಾಗಿ ಸದಾಕಾಲ ಉಳಿಯುತ್ತದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿ ನಿಲ್ಲುತ್ತದೆ.

-ರಾಜೇಂದ್ರ ಸಿಂಹ