ಲೋಕಕಲ್ಯಾಣಾರ್ಥ ರಾಜ್ಯದ ಮೂಡಣ ಬಾಗಿಲಿನಲ್ಲಿ ಗರುಡಚಯನ ಯಾಗ; 12 ದಿನದ ಯಾಗಕ್ಕೆ ಕಂಚಿ, ಪುಣೆ, ಗೋಕರ್ಣದಿಂದ 60ಕ್ಕೂ ಹೆಚ್ಚು ಆಗಮಿಕರ ಆಗಮನ

| Updated By: ಆಯೇಷಾ ಬಾನು

Updated on: May 12, 2022 | 9:48 PM

ಮಂತ್ರಾಲಯದ ಮಠ, ತಮಿಳುನಾಡಿನ ಕಂಚಿ ಹಾಗೂ ಮುಳಬಾಗಿಲು ನರಸಿಂಹ ತೀರ್ಥ ಮಠದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಪರೂಪದಲ್ಲಿ ಅಪರೂಪ ಎನ್ನುವ ಅತಿ ಕಠಿಣವಾದ ಗರುಡಚಯನ ಯಾಗವನ್ನು ಮಾಡಲಾಗುತ್ತಿದೆ. 12 ದಿನಗಳ ಕಾಲ ನಡೆದ ಈ ಯಾಗ ಏಪ್ರಿಲ್-29 ರಿಂದ ಆರಂಭವಾಗಿ ಮೇ-11 ಕ್ಕೆ ಕೊನೆಗೊಂಡಿದೆ.

ಲೋಕಕಲ್ಯಾಣಾರ್ಥ ರಾಜ್ಯದ ಮೂಡಣ ಬಾಗಿಲಿನಲ್ಲಿ ಗರುಡಚಯನ ಯಾಗ; 12 ದಿನದ ಯಾಗಕ್ಕೆ ಕಂಚಿ, ಪುಣೆ, ಗೋಕರ್ಣದಿಂದ 60ಕ್ಕೂ ಹೆಚ್ಚು ಆಗಮಿಕರ ಆಗಮನ
ಗರುಡಚಯನ ಯಾಗ
Follow us on

ಕೋಲಾರ: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದವರ ಮುಕ್ತಿಗಾಗಿ ಕೋಲಾರದಲ್ಲಿ ಬೃಹತ್ ಯಾಗ ಮಾಡಲಾಗಿದೆ. ಮನುಷ್ಯನ ದೇಹದಲ್ಲಿರುವ ಹಾಗೂ ಪ್ರಕೃತಿಯಲ್ಲಿರುವ ವಿಷ ತೆಗೆಯುವ ಸಲುವಾಗಿ ಅಪರೂಪದ, ಅತೀ ಕಠಿಣ ಯಾಗವೊಂದು ನಡೆಯುತ್ತಿದೆ. ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ನರಸಿಂಹತೀರ್ಥ ಮಠದಲ್ಲಿ ಬೃಹತ್ತಾಗಿ ನಿರ್ಮಾಣ ಮಾಡಿರುವ ಯಾಗ ಶಾಲೆಯಲ್ಲಿ ಹೋಮ ಹವನ ಮಾಡಲಾಗಿದೆ. ಮಂತ್ರ ಘೋಷಗಳ ಮೂಲಕ ಗರುಡ ಚಯನ ಯಾಗ ಮಾಡಲಾಗಿದೆ. ಮಂತ್ರಾಲಯದ ಮಠ, ತಮಿಳುನಾಡಿನ ಕಂಚಿ ಹಾಗೂ ಮುಳಬಾಗಿಲು ನರಸಿಂಹ ತೀರ್ಥ ಮಠದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಪರೂಪದಲ್ಲಿ ಅಪರೂಪ ಎನ್ನುವ ಅತಿ ಕಠಿಣವಾದ ಗರುಡಚಯನ ಯಾಗವನ್ನು ಮಾಡಲಾಗುತ್ತಿದೆ. 12 ದಿನಗಳ ಕಾಲ ನಡೆದ ಈ ಯಾಗ ಏಪ್ರಿಲ್-29 ರಿಂದ ಆರಂಭವಾಗಿ ಮೇ-11 ಕ್ಕೆ ಕೊನೆಗೊಂಡಿದೆ.

ಯಾಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದರು ಆಗಮಿಕರು
ಬಹಳ ಶ್ರದ್ದಾ ಭಕ್ತಿಯಿಂದ ಹನ್ನೆರಡುದಿನಗಳ ಕಾಲ ನಿರಂತವಾಗಿ ನಡೆಯುವ ಗರುಡ ಚಯನ ಯಾಗಕ್ಕೆ ಕಂಚಿ, ಪುಣೆ, ಗೋಕರ್ಣದಿಂದ ಸುಮಾರು 60 ಕ್ಕೂ ಹೆಚ್ಚು ಆಗಮಿಕರ ತಂಡ ಆಗಮಿಸಿತ್ತು, ಪ್ರತಿನಿತ್ಯವೂ ನಿರಂತರವಾಗಿ ಯಾಗ ನಡೆಯಿತು. ಯಾಗದ ಹಿನ್ನೆಲೆ ಇಲ್ಲಿಗೆ ಬರುವ ಸಾವಿರಾರು ಜನರಿಗೆ ನಿತ್ಯ ಅನ್ನದಾನ ಸೇರಿದಂತೆ ಯಾಗದ ಸಂಪೂರ್ಣ ಖರ್ಚುವೆಚ್ಚವನ್ನು ಮಂತ್ರಾಲಯ ಮಠ ಹಾಗೂ ನರಸಿಂಹತೀರ್ಥದ ಮಠ ನೋಡಿಕೊಂಡಿದೆ. ಈ ಯಾಗ ಯಾರೋ ಒಬ್ಬರ ಹಿತಕ್ಕಾಗಿ ನಡೆಯುತ್ತಿರುವುದಲ್ಲ ಇದು ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಯಾಗ ಅನ್ನೋದು ಆಗಮಿಕರ ಮಾತು. ಸದ್ಯ ಈ ಗರುಡಚಯನ ಯಾಗದ ಸಂಪೂರ್ಣ ಉಸ್ತುವಾರಿಯನ್ನು ಮಂತ್ರಾಲಯ ಮಠದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ರಾಮಕೃಷ್ಣಾಚಾರ್ ವಹಿಸಿಕೊಂಡಿದ್ದರು.

ಕೋಲಾರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಿರಂತರ ಯಾಗ, ಗಮನ ಸೆಳೆದ ಗರುಡನಂತೆ ಮಾಡಿದ್ದ ಆಕೃತಿ
ಅತ್ಯಂತ ಶ್ರದ್ದಾ ಭಕ್ತಿಯಿಂದ ನಡೆಯುವ ಈ ಗರುಡಚಯನ ಯಾಗಕ್ಕೆ ಬೇಕಾದ ಹೋಮ ಕುಂಡಗಳು, ಗರುಡಾಕೃತಿಯಲ್ಲಿ ಇಟ್ಟಿಗೆಯಿಂದ ಆಕೃತಿಯನ್ನು ನಿರ್ಮಾಣ ಮಾಡಿ ಅದರ ಸುತ್ತಲೂ ವಿವಿಧ ಹೋಮ ಕುಂಡಗಳನ್ನು ನಿರ್ಮಾಣ ಮಾಡಿ ಶಾಸ್ತ್ರೋಕ್ತವಾಗಿ ಅಂದರೆ ವೇದಗಳಲ್ಲಿ ತಿಳಿಸಿರುವಂತೆ 12 ದಿನಗಳ ಕಾಲ ನಿರಂತವಾಗಿ ಒಂದೊಂದು ಯಾಗವನ್ನು ಮಾಡಲಾಗಿದೆ. ಸುಧಾಪಾರಾಯಣ, ಸರೂವರ್ಣ, ಹಾಗೂ ಚತುರ್ವೇದ ಪಾರಾಯಣ ಸೇರಿದಂತೆ ನಿತ್ಯವೂ ಒಂದೊಂದು ಯಾಗವನ್ನು ನಡೆಸಲಾಗಿದೆ. ಧನ್ವಂತರಿ ಹೋಮ, ಸುದರ್ಶನ ಹೋಮ, ನಕ್ಷತ್ರ ಹೋಮ, ಆಯುಷ್ಯಹೋಮ, ಹೀಗೆ ಹೋಮ ಹವನಗಳು ಅದ್ದೂರಿಯಾಗಿ ನಡೆದವು.

ಗರುಡಚಯನ ಯಾಗ

ಕೊರೊನಾ ಮಹಾಮಾರಿಯಿಂದ ಮುಕ್ತಿಸಿಗಲಿ ಅನ್ನೋ ಪ್ರಾರ್ಥನೆ
ಇನ್ನು ಗರುಡಚಯನ ಯಾಗದಿಂದ ಕಳೆದ ಮೂರು ವರ್ಷಗಳಿಂದ ಪ್ರಪಂಚವನ್ನು ಹಿಂಸಿಸಿರುವ ಕೊರೊನಾದಂತಹ ಮಾರಕ ಕಾಯಿಲೆಗಳಿಂದ ಪ್ರಕೃತಿಯಲ್ಲಿ ತುಂಬಿರುವ ವಿಷವನ್ನು ಹೊರಹಾಕಲು ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವ ಜಂತುಗಳು ಆರೋಗ್ಯ ಪೂರ್ಣವಾಗಿ ಜೀವಿಸುವಂತೆ ಮಾಡಲು ಈ ಯಾಗ ಮಾಡಲಾಗಿದೆ. ಗರುಡ ಹೇಗೆ ವಿಷಕಾರಿ ಹಾವನ್ನು ತಿಂದು ಜೀರ್ಣಿಸಿಕೊಳ್ಳಬಲ್ಲನೋ ಅದೇ ರೀತಿ ಆ ಯಾಗದಿಂದಾಗಿ ಪ್ರಕೃತಿಯಲ್ಲಿನ ವಿಷಯವನ್ನು ನಿವಾರಣೆ ಮಾಡುವ ಸಲುವಾಗಿ ಲೋಕಕಲ್ಯಾಣಾರ್ಥವಾಗಿ ಈಯಾಗ ಮಾಡಲಾಗಿದೆ ಅನ್ನೋದು ಗೋಕರ್ಣದಿಂದ ಬಂದಿದ್ದ ಆಗಮಿಕರಾದ ಸದಾನಂದ ಆಚಾರ್ ಅವರ ಮಾತು.

ಒಟ್ಟಾರೆ ಕೊರೊನಾದಿಂದ ಇಡೀ ಪ್ರಪಂಚವೇ ಸಂಕಷ್ಟಕ್ಕೆ ಒಳಗಾಗಿದ್ದು ಜೀವ ಉಳಿಸಿಕೊಳ್ಳೋದೆ ಕಷ್ಟ ಎನ್ನುವಂತ ಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲಿ ಹೀಗೆ ಹೋಮ ಹವನಗಳನ್ನು ಮಾಡುವ ಮೂಲಕ ಪ್ರಕೃತಿಯಲ್ಲಿ ದೈವಬಲ ತುಂಬುವ ಜೊತೆಗೆ ನೈತಿಕ ಶಕ್ತಿ ಕೊಡುವ ಕೆಲಸವನ್ನು ಮಠಮಾನ್ಯಗಳು ಮಾಡುತ್ತಿರುವುದು ಶ್ಲಾಘನೀಯ ಕೆಲಸ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕನ್ನಡ ಕೋಲಾರ

Published On - 9:48 pm, Thu, 12 May 22