ಹುಲಿಹೈದರ್ ಗುಂಪು ಸಂಘರ್ಷ: “ಪ್ಲಾನ್ ಮಾಡಿ ನನ್ನ ಮಗನನ್ನು ಕೊಂದಿದ್ದಾರೆ ಸಾರ್”
ಕನಕಗಿರಿ ತಾಲೂಕಿನ ಹುಲಿಹೈದರ್ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಇಬ್ಬರ ಸಾವು ಪ್ರಕರಣ ಸಂಬಂಧ ಗ್ರಾಮಕ್ಕೆ ಶಾಸಕ ಬಸವರಾಜ ದಡೇಸಗೂರು ಅವರು ಭೇಟಿ ನೀಡಿದರು. ಈ ವೇಳೆ ಮೃತ ಭಾಷಾಸಾಬ್ ತಾಯಿ ಶಾಸಕರ ಎದುರು ಕಣ್ಣೀರು ಹಾಕಿದರು.
ಕೊಪ್ಪಳ: ಕನಕಗಿರಿ ತಾಲೂಕಿನ ಹುಲಿಹೈದರ್ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಇಬ್ಬರ ಸಾವು ಪ್ರಕರಣ ಸಂಬಂಧ ಗ್ರಾಮಕ್ಕೆ ಶಾಸಕ ಬಸವರಾಜ ದಡೇಸಗೂರು ಅವರು ಭೇಟಿ ನೀಡಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶಾಸಕರ ಭೇಟಿಯ ವೇಳೆ ಅಳಲು ತೋಡಿಕೊಂಡ ಮೃತ ಭಾಷಾಸಾಬ್ ತಾಯಿ, ಎಲ್ಲಾ ಪ್ಲ್ಯಾನ್ ಮಾಡಿ ನನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಬಡವರು ಈ ಊರಲ್ಲಿ ಬದುಕಲು ಹಕ್ಕಿಲ್ವಾ ಎಂದು ಶಾಸಕನನ್ನ ಪ್ರಶ್ನಿಸಿ ನಾವ ಮಗನ ಕಳೆದುಕೊಂಡು ಎಲ್ಲಿಗೆ ಹೋಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Aug 13, 2022 08:56 AM