ಅಂಜನಾದ್ರಿಗೆ ಆಗಮಿಸಿದ್ದ ಯುಪಿ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ, ಬಸ್​ಗಳಿಗೆ ಕಲ್ಲು ಎಸೆತ

| Updated By: Rakesh Nayak Manchi

Updated on: Jan 02, 2024 | 10:15 PM

ಆಂಜನೇಯ ದರ್ಶನಕ್ಕಾಗಿ ಅಂಜನಾದ್ರಿಗೆ ಬಂದಿದ್ದ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ ನಡೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್ ಬಳಿ ನಡೆದಿದೆ. ವಿದ್ಯುತ್ ವೈಯರ್ ತುಂಡಾಗುವಂತೆ ಬಸ್ ಚಾಲನೆ ಮಾಡಿದ್ದಾರೆ ಅಂತ ಆರೋಪಿಸಿ ಸ್ಥಳೀಯರು ಜಗಳ ಎತ್ತಿದ್ದು, ಗಲಾಟೆ ವೇಳೆ ಭಕ್ತರು ಆಗಮಿಸಿದ್ದ ಬಸ್​ಗಳಿಗೆ ಕಲ್ಲು ಎಸೆದಿದ್ದಾರೆ.

ಅಂಜನಾದ್ರಿಗೆ ಆಗಮಿಸಿದ್ದ ಯುಪಿ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ, ಬಸ್​ಗಳಿಗೆ ಕಲ್ಲು ಎಸೆತ
ಅಂಜನಾದ್ರಿಗೆ ಆಗಮಿಸಿದ್ದ ಯುಪಿಯ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ, ಬಸ್​ಗಳಿಗೆ ಕಲ್ಲು ತೂರಾಟ (ಫೋಟೋ: ಘಟನೆ ಖಂಡಿಸಿ ಗಂಗಾವತಿ ಠಾಣೆಗೆ ಮುತ್ತಿಗೆ ಹಾಕಿದ ಉತ್ತರ ಪ್ರದೇಶದ ಭಕ್ತರು)
Follow us on

ಕೊಪ್ಪಳ, ಜ.2: ಆಂಜನೇಯ ದರ್ಶನಕ್ಕಾಗಿ ಅಂಜನಾದ್ರಿಗೆ ಬಂದು ವಾಪಸ್ ಆಗುತ್ತಿದ್ದ ಉತ್ತರ ಪ್ರದೇಶದ ಭಕ್ತರು ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್ ಬಳಿ ನಡೆದಿದೆ. ಗಲಾಟೆ ವೇಳೆ ಬಸ್​ಗಳಿಗೆ ಕಲ್ಲು ತೂರಲಾಗಿದ್ದು, ಇಬ್ಬರು ಭಕ್ತರಿಗೆ ಗಾಯಗಳಾಗಿವೆ.

ಉತ್ತರ ಪ್ರದೇಶದದಿಂದ ನಾಲ್ಕು ಬಸ್​ಗಳಲ್ಲಿ ಹನುಮಂತನ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದರು. ವಾಪಸ್ ಆಗುತ್ತಿದ್ದಾಗ ಬಸ್​ಗಳನ್ನು ತಡೆದ ಸ್ಥಳೀಯರು ಜಗಳ ಎತ್ತಿದ್ದಾರೆ. ವಿದ್ಯುತ್ ವೈಯರ್ ತುಂಡಾಗುವಂತೆ ಬಸ್ ಚಾಲನೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಗಲಾಟೆ, ಮಾತಿನ ಚಕಮಕಿ ನಡೆದಿದ್ದು, ಉತ್ತರ ಪ್ರದೇಶದ ಬಸ್ ಮೇಲೆ ಸ್ಥಳೀಯರು ಕಲ್ಲೆಸೆದಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ ಅಂಜನಾದ್ರಿ ಬೆಟ್ಟ

ಘಟನೆಯಲ್ಲಿ ಉತ್ತರಪ್ರದೇಶ ಮೂಲದ ರಾಮಕುಮಾರ್ ಹಾಗೂ ಮೋನು ಎಂಬವರ ತಲೆಗೆ ಗಾಯಗಳಾಗಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಖಂಡಿಸಿ ಗಂಗಾವತಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಉತ್ತರ ಪ್ರದೇಶದ ನೂರಾರು ಭಕ್ತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ