ಗ್ರಹಣದ ವೇಳೆ ಸಸಿ ನೆಟ್ಟು ಜಾಗೃತಿ ಮೂಡಿಸಿದ ಗಂಗಾವತಿ ಬೀಚಿ

| Updated By: ಆಯೇಷಾ ಬಾನು

Updated on: Jun 21, 2020 | 11:51 AM

ಕೊಪ್ಪಳ: ಸಾಮಾನ್ಯವಾಗಿ ಭಾರತದಲ್ಲಿ ಗ್ರಹಣ ಸಂಭವಿಸಿದರೆ ಅದರ ಸುತ್ತ ಹಲವಾರು ಚರ್ಚೆ ಮತ್ತು ಆಚರಣೆಗಳು ಹುಟ್ಟುತ್ತವೆ. ಜೊತೆಗೆ ಗ್ರಹಣ ಕಾಲದಲ್ಲಿ ಕೆಲವರು ದೇವರ ಮೊರೆಹೋದರೆ ಇನ್ನು ಹಲವರು ವೈಜ್ಞಾನಿಕ ನಿಲುವನ್ನು ಎತ್ತಿಹಿಡಿದು ಈ ಖಗೋಳ ಕುತೂಹಲವನ್ನ ವೀಕ್ಷಿಸಲು ಹಾಗೂ ಜನರಲ್ಲಿ ಅದರ ಬಗ್ಗೆ ಅರಿವು ಮೂಡಿಸಲು ಮುಂದಾಗ್ತಾರೆ. ಅದರಂತೆಯೇ ಇಂದು ಗ್ರಹಣದ ವೇಳೆ ಸಸಿ ನೆಡುವ ಮೂಲಕ ಜನರಲ್ಲಿ  ಗ್ರಹಣದ ಬಗ್ಗೆ ಇರುವ ಕೆಲವು ನಂಬಿಕೆಗಳನ್ನು ದೂರಮಾಡಲು ಖ್ಯಾತ ಹಾಸ್ಯ ಭಾಷಣಕಾರ ಪ್ರಾಣೇಶ್ ಪ್ರಯತ್ನಪಟ್ಟಿದ್ದಾರೆ. ತಮ್ಮ ತವರೂರಾದ […]

ಗ್ರಹಣದ ವೇಳೆ ಸಸಿ ನೆಟ್ಟು ಜಾಗೃತಿ ಮೂಡಿಸಿದ ಗಂಗಾವತಿ ಬೀಚಿ
Follow us on

ಕೊಪ್ಪಳ: ಸಾಮಾನ್ಯವಾಗಿ ಭಾರತದಲ್ಲಿ ಗ್ರಹಣ ಸಂಭವಿಸಿದರೆ ಅದರ ಸುತ್ತ ಹಲವಾರು ಚರ್ಚೆ ಮತ್ತು ಆಚರಣೆಗಳು ಹುಟ್ಟುತ್ತವೆ. ಜೊತೆಗೆ ಗ್ರಹಣ ಕಾಲದಲ್ಲಿ ಕೆಲವರು ದೇವರ ಮೊರೆಹೋದರೆ ಇನ್ನು ಹಲವರು ವೈಜ್ಞಾನಿಕ ನಿಲುವನ್ನು ಎತ್ತಿಹಿಡಿದು ಈ ಖಗೋಳ ಕುತೂಹಲವನ್ನ ವೀಕ್ಷಿಸಲು ಹಾಗೂ ಜನರಲ್ಲಿ ಅದರ ಬಗ್ಗೆ ಅರಿವು ಮೂಡಿಸಲು ಮುಂದಾಗ್ತಾರೆ.

ಅದರಂತೆಯೇ ಇಂದು ಗ್ರಹಣದ ವೇಳೆ ಸಸಿ ನೆಡುವ ಮೂಲಕ ಜನರಲ್ಲಿ  ಗ್ರಹಣದ ಬಗ್ಗೆ ಇರುವ ಕೆಲವು ನಂಬಿಕೆಗಳನ್ನು ದೂರಮಾಡಲು ಖ್ಯಾತ ಹಾಸ್ಯ ಭಾಷಣಕಾರ ಪ್ರಾಣೇಶ್ ಪ್ರಯತ್ನಪಟ್ಟಿದ್ದಾರೆ. ತಮ್ಮ ತವರೂರಾದ ಗಂಗಾವತಿಯ ದುರ್ಗಮ್ಮನ ಹಳ್ಳದ ಪಕ್ಕದಲ್ಲಿ ಜನರಲ್ಲಿ‌ ಜಾಗೃತಿ ಮೂಡಿಸುವ ಸಲುವಾಗಿ ಗ್ರಹಣಕಾಲದ ಮಧ್ಯೆ ಸಸಿ ನೆಟ್ಟರು. ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಣೇಶ್​ರಿಗೆ ಸಾಥ್ ನೀಡಿದರು.