ಕೋಳಿ ಕಾಳಗ ಮೇಲೆ ದಾಳಿ: ಹುಂಜ ವಶಪಡಿಸಿಕೊಂಡು ಬಂಧಿಖಾನೆಯಲ್ಲಿ ಬಂಧಿಸಿಟ್ಟ ಕಾರಟಗಿ ಪೊಲೀಸ್ರು..!

| Updated By: ರಮೇಶ್ ಬಿ. ಜವಳಗೇರಾ

Updated on: Jan 17, 2023 | 5:26 PM

ಕಾರಟಗಿ ಪೊಲೀಸ್ರು ಜೂಜುಕೋರರನ್ನು ಬಿಟ್ಟು ಹುಂಜಗಳನ್ನು ವಶಪಡಿಸಿಕೊಂಡು ಬಂಧಿಖಾನೆಗಲ್ಲಿ ಕೂಡಿಹಾಕಿದ್ದಾರೆ. ಪೊಲೀಸರ ಈ ಕೆಲಸ ನಗೆಪಾಟಲಿಗೀಡಾಗಿದೆ.

ಕೋಳಿ ಕಾಳಗ ಮೇಲೆ ದಾಳಿ: ಹುಂಜ ವಶಪಡಿಸಿಕೊಂಡು ಬಂಧಿಖಾನೆಯಲ್ಲಿ ಬಂಧಿಸಿಟ್ಟ ಕಾರಟಗಿ ಪೊಲೀಸ್ರು..!
ಬಂಧಿಖಾನೆಯಲ್ಲಿರುವ ಹುಂಜಗಳು
Follow us on

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಬಸಣ್ಣ ಕ್ಯಾಂಪ್​ನಲ್ಲಿ ನಡೆಯುತ್ತಿದ್ದ ಕೋಳಿ ಕಾಳಗ (cockfighting)ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಆದ್ರೆ, ಪೊಲೀಸರು ಜೂಜುಕೋರರನ್ನ ಬಿಟ್ಟು ಹುಂಜಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ದಾಳಿ ವೇಳೆ ಸಿಕ್ಕ ಹುಂಜಗಳನ್ನು(roosters) ವಶಪಡಿಸಿಕೊಂಡಿರುವ ಪೊಲೀಸರು ಬಂಧಿಖಾನೆಯಲ್ಲಿ ಬಂಧಿಸಿಟ್ಟಿದ್ದಾರೆ. ಇದು ನಗೆಪಾಟಲಿಗೀಡಾಗಿದೆ.

ಹೌದು…ಬಸಣ್ಣ ಕ್ಯಾಂಪ್​ನಲ್ಲಿ ಅಕ್ರಮವಾಗಿ ಕೋಳಿ ಕಾಳಗದ ಮೇಲೆ ನಿನ್ನೆ(ಜನವರಿ 16) ಕಾರಟಗಿ ಪೊಲೀಸ್ರು ದಾಳಿ ಮಾಡಿದ್ದಾರೆ. ಆ ವೇಳೆ ಜೂಜುಕೋರರು ಪೊಲೀಸರನ್ನು ಕಂಡು ಓಡಿ ಹೋಗಿದ್ದಾರೆ. ಆದ್ರೆ, ಪೊಲೀಸರು ಜೂಜುಕೋರರನ್ನ ಚೇಸ್ ಮಾಡಿ ಹಿಡಿಯಲು ಪ್ರಯತ್ನ ಮಾಡಿಲ್ಲ. ಬದಲಾಗಿ ಸ್ಥಳದಲ್ಲಿ ಸಿಕ್ಕ ಸಿಕ್ಕ 3 ಹುಂಜಗಳು ಹಾಗೂ 9 ಬೈಕ್​​ಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ.

ಸದ್ಯ ದಾಳಿ ವೇಳೆ ಸಿಕ್ಕ ಮೂರು ಕೋಳಿಗಗಳನ್ನು ಕಾರಟಗಿ ಪೊಲೀಸ್ ಪೊಲೀಸ್ ಠಾಣೆಯ ಬಂಧಿಖಾನೆಯಲ್ಲಿ ಕೂಡಿಹಾಕಿದ್ದಾರೆ. ಇನ್ನು ಪೊಲೀಸರು ಜೂಜುಕೋರರನ್ನು ಹಿಡಿಯುವುದು ಬಿಟ್ಟು ಹುಂಜಗಳನ್ನು ಹಿಡಿದುಕೊಂಡು ಬಂದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಳಿ ಕಾಳಗ ಕಾನೂನು ಬಾಹಿರ

1960ರಿಂದಲೇ ದೇಶದಲ್ಲಿ ಕೋಳಿ ಕಾಳಗ ಕಾನೂನು ಬಾಹಿರ. ಆದರೂ ಕೂಡ ಜನರು ಅದನ್ನೊಂದು ಸಂಪ್ರದಾಯವೆಂಬಂತೆ ಆಚರಿಸುತ್ತಾರೆ. ಕೆಲವು ಆಯೋಜಕರು ಕೋಳಿ ಕಾಳಗ ಏರ್ಪಡಿಸಿ ಗೆದ್ದವರಿಗೆ ಇಂತಿಷ್ಟು ಬಹುಮಾನ ಎಂದು ಘೋಷಿಸುವುದು ಇದೆ. ಇಲ್ಲವೆ, ಸುಮ್ಮನೆ ಇಬ್ಬರು ವ್ಯಕ್ತಿಗಳು ತಮ್ಮ ಹುಂಜಗಳನ್ನು ಕಾಳಗಕ್ಕೆ ಬಿಟ್ಟು, ಸೋತವರು ಗೆದ್ದವರಿಗೆ ಇಷ್ಟು ಕೊಡಬೇಕು ಎಂದು ಸವಾಲು ಹಾಕಿಕೊಳ್ಳುವುದೂ ನಡೆಯುತ್ತದೆ. ಅದರಾಚೆ, ಕಾಳಗದಲ್ಲಿ ಕಣದಲ್ಲಿ ಇದ್ದವರ ಹೊರತಾಗಿ ಬೇರೆಯವರೂ ಕೂಡ ಇದೇ ಕೋಳಿ ಗೆಲ್ಲುತ್ತದೆಂದು ಬೆಟ್​ ಕಟ್ಟಿಕೊಳ್ಳುವುದೂ ನಡೆಯುತ್ತದೆ. ಈ ಕೋಳಿ ಕಾಳಗ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳು ಇವೆ. ಆದರೂ ಈ ಕೋಳಿ ಕಾಳಗ ಮಾತ್ರ  ನಿಲ್ಲುತ್ತಿಲ್ಲ.

 

Published On - 5:24 pm, Tue, 17 January 23