ಯಾರನ್ನ ಕೇಳಿ ಬಸ್ ಟಿಕೆಟ್​ ದರ ಹೆಚ್ಚಿಸಿದ್ದೀರಿ? ಅಂತ ಕುಡಿದ ಮತ್ತಿನಲ್ಲಿ ಕಂಡಕ್ಟರ್​​ ಮೇಲೆ ಹಲ್ಲೆ

ಕುಡಿದ ಮತ್ತಿನ ಪ್ರಯಾಣಿಕನೊಬ್ಬ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಗಂಗಾವತಿ ಡಿಪೋದ ನಿರ್ವಾಹಕ ಹನುಮಪ್ಪ ಅವರ ಮೇಲೆ ವಿಜಯನಗರ ಜಿಲ್ಲೆಯ ಶ್ರೀಧರ್ ಹಲ್ಲೆ ಮಾಡಿದ್ದಾನೆ.ಬಸ್ ಟಿಕಟ್​ ದರ ಹೆಚ್ಚಳ ವಿಚಾರವಾಗಿ ನಿರ್ವಾಹಕನ ಜೊತೆ ಗಲಾಟೆ ಮಾಡಿ ಹಲ್ಲೆ ಮಾಡದ್ದಾನೆ. ಹನುಮಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾರನ್ನ ಕೇಳಿ ಬಸ್ ಟಿಕೆಟ್​ ದರ ಹೆಚ್ಚಿಸಿದ್ದೀರಿ? ಅಂತ ಕುಡಿದ ಮತ್ತಿನಲ್ಲಿ ಕಂಡಕ್ಟರ್​​ ಮೇಲೆ ಹಲ್ಲೆ
ನಿರ್ವಾಹಕ ಹನುಮಂತಪ್ಪ
Edited By: ವಿವೇಕ ಬಿರಾದಾರ

Updated on: Feb 26, 2025 | 11:34 AM

ಕೊಪ್ಪಳ, ಫೆಬ್ರವರಿ 26: ಸರ್ಕಾರಿ ಬಸ್ (Government Bus) ಪ್ರಯಾಣ ದರವನ್ನು ಹೆಚ್ಚಳ ಅಥವಾ ಕಡಿಮೆ ಸರ್ಕಾರ ಮಾಡುತ್ತದೆ. ಸರ್ಕಾರ ನಿಗದಿ ಮಾಡಿದ ದರದ ಟಿಕೆಟ್ ನೀಡುವುದು ನಿರ್ವಾಹಕರ ಕೆಲಸ. ಆದರೆ, ಕುಡಿದ ಮತ್ತಿನಲ್ಲಿ ಪ್ರಯಾಣಿಕನೋರ್ವ “ಯಾರನ್ನು ಕೇಳಿ ಬಸ್ ದರ ಹೆಚ್ಚಿಸಿದ್ದೀರಿ” ಅಂತ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯಲ್ಲಿ ನಡೆದಿದೆ.

ಗಂಗಾವತಿ ಡಿಪೋಕ್ಕೆ ಸೇರಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ ಹನುಮಪ್ಪ ಎಂಬುವರ ಮೇಲೆ ಹಲ್ಲೆಯಾಗಿದೆ. ವಿಜಯನಗರ ಜಿಲ್ಲೆಯ ನಿವಾಸಿ ಶ್ರೀಧರ್​ ಹಲ್ಲೆ ಮಾಡಿದ ವ್ಯಕ್ತಿ. ಮಂಗಳವಾರ (ಫೆ.26) ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಿಂದ ಗಂಗಾವತಿಗೆ ಹೋಗುತ್ತಿದ್ದ ಬಸ್ ಅನ್ನು ಶ್ರೀಧರ್ ಕುಡಿದ ಮತ್ತಿನಲ್ಲಿ ಹುಲಗಿಯಲ್ಲಿ ಹತ್ತಿದ್ದಾನೆ. ಬಳಿಕ, ಶ್ರೀಧರ್​ ಗಂಗಾವತಿ ತಾಲೂಕಿನ ಹನುಮನಹಳ್ಳಿಗೆ ಹೋಗಬೇಕು ಅಂತ ಹೇಳಿದ್ದರಿಂದ ಆತನಿಗೆ ನಿರ್ವಾಹಕ ಹನುಮಪ್ಪ 30 ರೂಪಾಯಿ ಟಿಕೆಟ್ ನೀಡಿದ್ದಾರೆ.

ಈ ಮೊದಲು ಹುಲಗಿಯಿಂದ ಗಂಗಾವತಿಗೆ 26 ರೂಪಾಯಿ ಇತ್ತು, ಇದೀಗ 30 ರೂಪಾಯಿ ಟಿಕೆಟ್ ಯಾಕೆ ಅಂತ ಕೇಳಿದ್ದಾನೆ. ಬಸ್ ದರ ಹೆಚ್ಚಳವಾಗಿದೆ ಅಂತ ನಿರ್ವಾಹಕ ಹೇಳಿದ್ದಾರೆ. ಯಾರನ್ನು ಕೇಳಿ ಟಿಕೆಟ್ ದರ ಹೆಚ್ಚಳ ಮಾಡಿದ್ದೀರಿ? ಅಂತ ನಿರ್ವಾಹಕ ಹನುಮಂತಪ್ಪ ಅವರ ಜೊತೆ ಶ್ರೀಧರ್ ಜಗಳ ಆರಂಭಿಸಿದ್ದಾನೆ. ಈ ವೇಳೆ ನಿರ್ವಾಹಕ ಹನುಮಂತಪ್ಪರಿಗೆ ಶ್ರೀಧರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಬಳಿ ಬಸ್ ನಿಲ್ಲಿಸಿದಾಗ ಶ್ರೀಧರ್ ನಿರ್ವಾಹಕ ಹನುಮಂತರನ್ನು ಎಳೆದುಕೊಂಡು ಕೆಳಗೆ ಇಳಿದ್ದಾನೆ. ಬಳಿಕ ಕೈಗೆ ಸಿಕ್ಕ ಕಲ್ಲಿನಿಂದ ಹನಮಪ್ಪರ ಮೇಲೆ ಹಲ್ಲೆ ಮಾಡಿದ್ದಾನೆ.

ಘಟನೆಯಲ್ಲಿ ಹನಮಪ್ಪನ ಬಲಗಣ್ಣು ಮತ್ತು ಹಣೆಗೆ ತೀರ್ವ ಪೆಟ್ಟು ಬಿದ್ದಿದೆ. ರಕ್ತಸ್ರಾವವಾಗಿದ್ದರಿಂದ ಕೂಡಲೇ ಹನುಮಪ್ಪನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಹನುಮಪ್ಪ ಆರೋಪಿ‌ ಶ್ರೀಧರ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಶ್ರೀಧರ್​ನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:  ತುಂಗಭದ್ರಾ ನದಿಯಲ್ಲಿ ನೀರುಪಾಲು, ಕೊನೇ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದ ವೈದ್ಯೆ, ವಿಡಿಯೋ ಇಲ್ಲಿದೆ

ಬಸ್ ಟಿಕೆಟ್ ವಿಚಾರವಾಗಿ ಬೆಳಗಾವಿಯಲ್ಲಿ ನಿರ್ವಾಹಕನ ಮೇಲೆ ಘಟನೆ ಮಾಸುವ ಮುನ್ನವೇ ಕುಡಿತ ಮತ್ತಿನಲ್ಲಿ ಪ್ರಯಾಣಿಕ ಹನುಮಪ್ಪನ ಮೇಲೆ ಹಲ್ಲೆ ಮಾಡಿರುವುದನ್ನು ಸಾರಿಗೆ ಸಂಸ್ಥೆ ಸಿಬ್ಬಂದಿ ಖಂಡಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us