ಕೊಪ್ಪಳ: ರಾಮ ನವಮಿಯ ದಿನ (Ram Navami) 46 ವರ್ಷದ ವ್ಯಕ್ತಿ ರಾಯಪ್ಪ ದಪೇದಾರ್ ಎನ್ನುವರು 101 ಕೆಜಿಯ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ (anjanadri betta) ಏರಿ ಸಾಹಸ ಮೆರೆದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಆಂಜನೇಯ ಭಕ್ತರೊಬ್ಬರು 105 ಕೆಜಿಯ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ್ದಾರೆ. ಹೌದು.. ಕೊಪ್ಪಳ(Koppal) ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮದ 34 ವರ್ಷದ ಹನುಮಂತಪ್ಪ ಪೂಜಾರ ಎಂಬ ಯುವಕ ಭಾನುವಾರ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಬೆಟ್ಟ ಏರುವುದನ್ನು ಆರಂಭಿಸಿ 50 ನಿಮಿಷಗಳಲ್ಲಿ 575 ಮೆಟ್ಟಿಲುಗಳನ್ನು ಹತ್ತಿ ಎಲ್ಲರ ಗಮನ ಸೆಳೆದಿದ್ದಾರೆ.
ಸಾಮನ್ಯವಾಗಿ ಅಂಜನಾದ್ರಿ ಬೆಟ್ಟ ಹತ್ತುವುದಕ್ಕೆ ಜನ ಕಷ್ಟ ಪಡುತ್ತಅರೆ. ಯಾಕೆಂದ್ರೆ ಸುಮಾರು 575 ಮೆಟ್ಟಿಲುಗಳು ಇವೆ. ಈ ಬಿರು ಬೇಸಿಗೆಯಲ್ಲಿ ಅಂಜನಾದ್ರಿ ಬೆಟ್ಟ ಹತ್ತುವುದು ಸಮಾನ್ಯ ಮಾತಲ್ಲ. ಆದ್ರೇ ಈ ಯುವಕ ಒಂದು ಕ್ವಿಂಟಾಲ್ ಚೀಲವನ್ನ ಬೆನ್ನ ಮೇಲೆ ಹೊತ್ತುಕೊಂಡು ಹತ್ತಿ ಎಲ್ಲರ ನಿಬ್ಬೇರಗಾಗುವಂತೆ ಮಾಡಿದ್ದಾನೆ. ಮೊನ್ನೇ ರಾಮ ನವಮಿಯ ದಿನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ರಾಯಪ್ಪ ದಫೇದಾರ ಎಂಬುವರು 101 ಕೆ.ಜಿ. ತೂಕದ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ್ದರು. ಇದೀಗ ಹನುಮಂತಪ್ಪ ಪೂಜಾರ,ರಾಯಪ್ಪ ಅವರಿಗಿಂತ 4 ಕೆಜಿ ಹೆಚ್ಚಿರುವ ಅಕ್ಕಿ ಚೀಲ ಹೊತ್ತುಕೊಂಡು ಹೋಗಿದ್ದಾರೆ.
ಆಂಜನೇಯನ ದರ್ಶನ ಪಡೆಯಬೇಕು ಎಂದು ಹಲವು ವರ್ಷಗಳಿಂದ ಕಾಯುತ್ತಿದ್ದರು. ಮೊದಲ ಬಾರಿಗೆ ಬೆಟ್ಟ ಹತ್ತಿದ ನೆನಪನ್ನು ಸ್ಮರಣೀಯವಾಗಿರಿಸಬೇಕು ಎನ್ನುವ ಕಾರಣಕ್ಕೆ ಅಕ್ಕಿಚೀಲ ಹೊತ್ತು ಹತ್ತಲು ನಿರ್ಧರಿಸಿದ್ದರು. ಚೀಲ ಹೊತ್ತು ಬೆಟ್ಟ ಹತ್ತಬೇಕು ಎನ್ನುವ ಬಹಳ ದಿನಗಳ ಕನಸು ಈಗ ಈಡೇರಿದೆ. ನನ್ನ ಆಸೆಗೆ ಊರಿನ ಸ್ನೇಹಿತರು ನೆರವಾದರು. ಬಿಸಿಲು ಹೆಚ್ಚಾಗುವ ಮೊದಲೇ ಬೆಟ್ಟ ಹತ್ತಿ ಇಳಿಯಬೇಕು ಎಂದು ನಿರ್ಧರಿಸಿದ್ದೆ. ಅಂದುಕೊಂಡಂತೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಹನುಮಂತಪ್ಪ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಳೆದ ವಾರ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ ರಾಯಪ್ಪ ದಫೇದಾರ ಎಂಬುವರು 101 ಕೆ.ಜಿ. ತೂಕದ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿ ಗಮನ ಸೆಳೆದಿದ್ದರು. ಈಗ ಹನುಮಂತಪ್ಪ ಪೂಜಾರ 105 ಕೆ.ಜಿ ಅಕ್ಕಿಚೀಲ ಹೊತ್ತುಕೊಂಡು 575 ಮೆಟ್ಟಿಲು ಹತ್ತುವ ಮೂಲಕ ರಾಯಪ್ಪ ದಾಖಲೆ ಮುರಿದಿದ್ದಾರೆ.
ಕೊಪ್ಪಳ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ