ಕೊಪ್ಪಳ: ಹನುಮಮಾಲೆ ಧರಿಸಿದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ತಂಗಡಗಿ, ಚುನಾವಣೆ ಹೊಸ್ತಿಲಲ್ಲಿ ಆಂಜನೇಯನ ಜಪ
ಜಿಲ್ಲೆಯಲ್ಲಿ ಮತ್ತೆ ಹನುಮಮಾಲೆ ಪಾಲಿಟಿಕ್ಸ್ ಶುರುವಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಿವರಾಜ್ ತಂಗಡಗಿಯವರು ಹಾಗೂ ಕೈ ಕಾರ್ಯಕರ್ತರು ಹನುಮ ಮಾಲಾಧಾರಣೆ ಮಾಡಿದ್ದಾರೆ.
ಕೊಪ್ಪಳ: ಜಿಲ್ಲೆಯಲ್ಲಿ ಮತ್ತೆ ಹನುಮಮಾಲೆ ಪಾಲಿಟಿಕ್ಸ್ ಶುರುವಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಿವರಾಜ್ ತಂಗಡಗಿಯವರು ಹಾಗೂ ಕೈ ಕಾರ್ಯಕರ್ತರು ಹನುಮ ಮಾಲಾಧಾರಣೆ ಮಾಡಿದ್ದಾರೆ. ಹೌದು ಏ.6 ರಂದು ಹನುಮ ಜಯಂತಿ ಇರುವ ಹಿನ್ನೆಲೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣ ಗ್ರಾಮದಲ್ಲಿ ನೂರಾರು ಭಕ್ತರೊಂದಿಗೆ ಹನುಮ ಮಾಲಾಧಾರಣೆ ಮಾಡಿದ್ದಾರೆ. ಇಂದಿನಿಂದ 5 ದಿನದವರಗೆ ಕಾರಟಗಿಯ ದೇವಿ ಪರ್ವತದಲ್ಲಿ ಪೂಜಾ ಕಾಯಕ ವಾಸ ಮಾಡಲಿದ್ದಾರೆ. ಕಳೆದ ಹನುಮ ಜಯಂತಿಯಂದು ಗಂಗಾವತಿಯಿಂದ ಅಂಜನಾದ್ರಿಯವರೆಗೆ ಪಾದಯಾತ್ರೆ ಮಾಡಿದ್ದರು. ಇದೀಗ ಮತ್ತೆ ಹನುಮಮಾಲೆ ಧರಿಸಿ ಹಿಂದೂ ಮತಬ್ಯಾಂಕ್ ಒಡೆಯದಂತೆ ತಂಗಡಗಿ ಪ್ಲ್ಯಾನ್ ಮಾಡಿದ್ರಾ ಎಂಬ ಮಾತು ಕೇಳಿಬರುತ್ತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 01, 2023 09:29 AM
Latest Videos