ಕೊಪ್ಪಳ: ಕೋತಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ 4 ತಿಂಗಳ ಮಗು

ಮನೆಗೆ ನುಗ್ಗಿ ನಾಲ್ಕು ತಿಂಗಳ ಮಗುವಿನ ಮೇಲೆ ಕೋತಿ ದಾಳಿ‌ ಮಾಡಿರುವ ಘಟನೆ ಕುಷ್ಟಗಿ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ನಡೆದಿದೆ. ಮಗುವಿಗೆ ಗಂಭೀರ ಗಾಯವಾಗಿದ್ದು, ತಾವರಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಪ್ಪಳ: ಕೋತಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ 4 ತಿಂಗಳ ಮಗು
ಕೋತಿ ದಾಳಿ
Edited By: ವಿವೇಕ ಬಿರಾದಾರ

Updated on: Oct 15, 2023 | 9:30 AM

ಕೊಪ್ಪಳ ಅ.14: ಮನೆಗೆ ನುಗ್ಗಿ ನಾಲ್ಕು ತಿಂಗಳ ಮಗುವಿನ (Baby) ಮೇಲೆ ಕೋತಿ (Monkey) ದಾಳಿ‌ ಮಾಡಿರುವ ಘಟನೆ ಕುಷ್ಟಗಿ (kushtagi) ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ನಡೆದಿದೆ. ಮಗುವಿಗೆ ಗಂಭೀರ ಗಾಯವಾಗಿದ್ದು, ತಾವರಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋತಿ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿದ್ದರು‌ ಗ್ರಾಮಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಜನರು ಅಕ್ರೋಶಗೊಂಡಿದ್ದಾರೆ.

ಯುವಕನ ಮೇಲೆ ಎರಡು ಕರಡಿಗಳಿಂದ ದಾಳಿ, ಗಂಭೀರ ಗಾಯ

ದಾವಣಗೆರೆ ಅ.15: ಜಮೀನಿಗೆ ನೀರು ಹಾಯಿಸಲು ಬೆಳಗ್ಗೆ ಹೋಗಿದ್ದ ಯುವಕನೊಬ್ಬ ವಾಪಾಸು ಬರುವಾಗ ದಾರಿ ಮಧ್ಯೆ ಹಳ್ಳದಲ್ಲಿದ್ದ ಎರಡು ಕರಡಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಆನಂದ (28) ತೀವ್ರ ಗಾಯಗೊಂಡ ಯುವಕ. ರಂಗಾಪುರ ಗ್ರಾಮದ ನಿವಾಸಿ ಆನಂದ ಅವರು ಕೆ.ಕಲ್ಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದರು. ಜಮೀನಿಗೆ ನೀರು ಹಾಯಿಸಲು ಶನಿವಾರ ಬೆಳಗ್ಗೆ ಹೋಗಿ ವಾಪಾಸು ಬರುವಾಗ ದಾರಿ ಮಧ್ಯೆ ಹಳ್ಳದಲ್ಲಿ ಅವಿತು ಕುಳಿತಿದ್ದ ಎರಡು ಕರಡಿಗಳು ದಾಳಿ ಮಾಡಿವೆ.

ಇದನ್ನೂ ಓದಿ: Anekal: ವೀರಾಂಜನೇಯ ಸ್ವಾಮಿಗೆ ನಮಿಸಿ ಪ್ರಾಣಬಿಟ್ಟ ಕೋತಿ

13 ತಿಂಗಳ ಮಗುವಿನ ಮೇಲೆ ದಾಳಿ ಮಾಡಿದ್ದ ಕೋತಿ

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ತೊರೆಕೋಲಮ್ಮನಹಳ್ಳಿಯ ಮಂಜುಳಾ-ಸಿದ್ದೇಶ್ ದಂಪತಿಯ 13 ದಿನದ ನವಜಾತ ಶಿಶುವಿನ ಮೇಲೆ ಕೋತಿ ದಾಳಿ ಮಾಡಿತ್ತು. ಈ ವೇಳೆ ಮಗುವಿನ ಹಣೆ, ತಲೆ ಭಾಗದಲ್ಲಿ ಗಾಯವಾಗಿತ್ತು. ಗಾಯಗೊಂಡ ಮಗುವನ್ನು ಕೂಡಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೋತಿ ಸೆರೆಗೆ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Loading...
Unable to load recommendations.
Follow Us