ಮಳೆಗಾಗಿ ಮರು ಅಂತಿಮ ಸಂಸ್ಕಾರ; ಕೊಪ್ಪಳದ ದನಕನಗೊಡ್ಡಿ ಗ್ರಾಮದಲ್ಲಿ ಹೂತ್ತಿದ್ದ ಮಹಿಳೆ ಹೆಣವನ್ನು ಹೊರ ತೆಗೆದು ಸುಟ್ಟ ಜನ

| Updated By: ಆಯೇಷಾ ಬಾನು

Updated on: Sep 15, 2023 | 3:16 PM

ಮಳೆ ಬರುತ್ತೆ ಎಂದು ಹೂತ ಶವವನ್ನು ಹೊರ ತೆಗೆದು ಸುಡಲಾಗಿದೆ. ಕೊಪ್ಪಳ ಜಿಲ್ಲೆಯ ದನಕನದೊಡ್ಡಿ ಗ್ರಾಮದಲ್ಲಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದ ಮುಸ್ಲಿಂ ಸಮುದಾಯದ ಮಹಿಳೆಯ ಶವವನ್ನು ಹೊರತೆಗೆದು ಮರು ಅಂತಿಮ ಸಂಸ್ಕಾರ ಮಾಡಲಾಗಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಳೆಗಾಗಿ ಮರು ಅಂತಿಮ ಸಂಸ್ಕಾರ; ಕೊಪ್ಪಳದ ದನಕನಗೊಡ್ಡಿ ಗ್ರಾಮದಲ್ಲಿ  ಹೂತ್ತಿದ್ದ ಮಹಿಳೆ ಹೆಣವನ್ನು ಹೊರ ತೆಗೆದು ಸುಟ್ಟ ಜನ
ಮಹಿಳೆ ಹೆಣವನ್ನು ಹೊರ ತೆಗೆದು ಸುಟ್ಟ ಜನ
Follow us on

ಕೊಪ್ಪಳ, ಸೆ.15: ಆಧುನಿಕ ಯುಗದಲ್ಲೂ ಜನ ಮೂಢನಂಬಿಕೆಗಳಿಗೆ(Superstition) ಜೋತು ಬಿದ್ದಿದ್ದಾರೆ. ಈಗಲೂ ಅನೇಕ ಕಡೆಗಳಲ್ಲಿ ಮೂಢನಂಬಿಕೆ ಆಚರಣೆಯಲ್ಲಿದೆ. ಕೊಪ್ಪಳ ಜಿಲ್ಲೆಯಲ್ಲಿ ಮಳೆ ಬರುತ್ತೆ ಎಂದು ಹೂತ ಶವವನ್ನು ಹೊರ ತೆಗೆದು ಸುಡಲಾಗಿದೆ(Rain). ಜಿಲ್ಲೆಯ ದನಕನದೊಡ್ಡಿ ಗ್ರಾಮದಲ್ಲಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದ ಮುಸ್ಲಿಂ ಸಮುದಾಯದ ಮಹಿಳೆಯ ಶವವನ್ನು ಹೊರತೆಗೆದು ಮರು ಅಂತಿಮ ಸಂಸ್ಕಾರ ಮಾಡಲಾಗಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಮುಸ್ಲಿಂ ಸಮುದಾಯದ ಹಲವರು ಆಕ್ಷೇಪ‍ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೊಪ್ಪಳ ಜಿಲ್ಲಾ ಮುಸ್ಲಿಂ ಸಮಾಜದ ಹಲವು ಮುಖಂಡರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅವರಿಗೆ ದೂರು ನೀಡಿದ್ದಾರೆ. ಆರು ತಿಂಗಳ ಹಿಂದೆ ಮೃತಪಟ್ಟಿದ್ದ ಮುಸ್ಲಿಂ ಮಹಿಳೆಯೊಬ್ಬರ ಶವವನ್ನು ಸೆ. 12ರಂದು ಹೊರತೆಗೆದು ಸುಟ್ಟಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ ಮೃತ ವ್ಯಕ್ತಿಗಳನ್ನು ಗೋರಿ ಮಾಡಿ ಮಣ್ಣಿನಲ್ಲಿ ಮುಚ್ಚಲಾಗುತ್ತದೆ. ಆದರೆ, ದನಕನದೊಡ್ಡಿ ಗ್ರಾಮದಲ್ಲಿ ಸುಡುವ ಮೂಲಕ ಕಿಡಿಗೇಡಿಗಳು ಧರ್ಮ ಬಾಹಿರ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Tumakuru News: ತುಮಕೂರಿನಲ್ಲಿ ಮೌಢ್ಯಕ್ಕೆ 1 ತಿಂಗಳ ಹಸುಗೂಸು ಬಲಿ, ಮೂಢನಂಬಿಕೆಗೆ ಕೊನೆಯೆಂದು?

ದೇಹದ ಮೇಲೆ ತೇಪ ಇದ್ದ ಶವ ಸುಟ್ಟರೆ ಮಳೆ ಬರುತ್ತೆ

ಮೃತಪಟ್ಟಿದ್ದ ಮಹಿಳೆಯ ದೇಹದ ಮೇಲೆ ಬಿಳಿ ತೇಪೆಗಳು ಇದ್ದವು. ಇಂಥ ತೇಪೆ ಇರುವ ಮಹಿಳೆಯ ಶವವನ್ನು ಸುಟ್ಟರೆ ಮಳೆಯಾಗುತ್ತದೆ ಎನ್ನುವ ಮೂಢನಂಬಿಕೆಯಿಂದಾಗಿ ಮಹಿಳೆ ಶವವನ್ನು ಹೊರ ತೆಗೆದು ಸುಡಲಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದಾಗಿ ಈ ಕೃತ್ಯ ಎಸಗಲಾಗಿದೆ. ಗ್ರಾಮಸ್ಥರನ್ನು ಎದುರು ಹಾಕಿಕೊಳ್ಳಲಾಗದೇ ಮೃತ ಮಹಿಳೆಯ ಕುಟುಂಬದವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿಲ್ಲ. ‘ಮೃತ ಮಹಿಳೆಯ ಮರು ಅಂತಿಮ ಸಂಸ್ಕಾರ ಮಾಡಿದ್ದು ನಿಜ. ದೇಹದ ತಲೆಯ ಭಾಗ ಮಾತ್ರ ಉಳಿದಿತ್ತು. ಅದನ್ನು ಹೊರ ತೆಗೆದು ಸುಣ್ಣ ಹಚ್ಚಿ ಮತ್ತೆ ಮಣ್ಣಿನಲ್ಲಿಯೇ ಮುಚ್ಚಲಾಗಿದೆ‌ ಎಂದು ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಗ್ರಾಮಸ್ಥರಾಗಲಿ ಅಥವಾ ಖುದ್ದು ಮಹಿಳೆಯ ಕುಟುಂಬಸ್ಥರಾಗಲಿ ಯಾವುದೇ ಪ್ರತಿಕ್ರಿಯೇ ನೀಡುತ್ತಿಲ್ಲ.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ